

ಲಂಡನ್: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಚಿತ್ರ ಹಾಗೂ ಭಯಾನಕ ಫೋಟೋವೊಂದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಫೋಟೋದಲ್ಲಿರುವುದು ಏನು? ಏನಿಷ್ಟು ವಿಚಿತ್ರವಾಗಿದೆ? ನೋಡಲು ಕೆಂಪು ಕಣ್ಣಿನ ಬೇಬಿ ಗಾಡ್ಜಿಲ್ಲ ಇದ್ದಂಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಂದಹಾಗೆ ಈ ಫೋಟೋವನ್ನು ಲಂಡನ್ನ ಥೇಮ್ಸ್ ನದಿಯಲ್ಲಿ ಸೆರೆಹಿಡಿಯಲಾಗಿದೆ. ಬಹುತೇಕ ನೀರಿನಲ್ಲಿ ಅಡಗಿಕೊಂಡು ತನ್ನ ಮುಖವನ್ನು ಮಾತ್ರ ಹೊರತೆಗೆದಿರುವ ಜೀವಿಯಂತೆ ಕಾಣವ ಫೋಟೋ ನೆಟ್ಟಿಗರ ಹುಬ್ಬೇರಿಸಿದೆ. ನಿಜವಾಯಿಯೂ ಇದೊಂದು ದೈತ್ಯಾಕಾರದ ಜೀವಿ ಇರಬಹುದಾ ಎಂದು ಅಂದಾಜು ಮಾಡುತ್ತಿದ್ದಾರೆ.
ರೆಡಿಟ್ ಜಾಲತಾಣ ವೇದಿಕೆಯಲ್ಲಿ ಈ ಫೋಟೋವನ್ನು ಶೇರ್ ಮಾಡಲಾಗಿದೆ. ಇದೀಗ ತಾನೇ ಥೇಮ್ಸ್ ನದಿಯಲ್ಲಿ ಒಂದು ವಸ್ತುವನ್ನು ನೋಡಿದೆ. ಅದ್ಭುತವಾದ ಫೋಟೋದಲ್ಲಿ ಗುರುತಿಸಲಾಗದ ಜಲಚರ ಜೀವಿಯು ಕ್ಯಾಮೆರಾದಲ್ಲಿ ನಟಿಸುತ್ತಿರುವುದನ್ನು ತೋರಿಸಿತು. ಈ ಒಂದು ನೋಟವು ನೋಡುವ ಸ್ಥಳದಿಂದ ಎಸ್ಕೇಪ್ ಆಗುವಷ್ಟು ಭಯಾನಕವಾಗಿದೆ ಎಂದು ಫೋಟೋಗೆ ಅಡಿಬರಹ ನೀಡಲಾಗಿದೆ.
ಲೊಚ್ ನೆಸ್ ಮಾನ್ಸ್ಟರ್ ನಿಜವಾಗಿ ಅಸ್ತಿತ್ವದಲ್ಲಿದೆಯೇ? ಸ್ಕಾಟಿಷ್ ಜಾನಪದದಲ್ಲಿ ಈ ಜೀವಿಯನ್ನು ಉಲ್ಲೇಖಿಸಲಾಗಿದೆ. ಇದನ್ನು ನೆಸ್ಸಿ ಎಂದೂ ಕರೆಯುತ್ತಾರೆ. ಲಂಡನ್ನ ನದಿಯಲ್ಲಿ ಕಾಣಿಸಿಕೊಂಡಿರುವುದು ಪೌರಾಣಿಕ ಪ್ರಾಣಿಯೇ ಎಂಬ ಊಹೆಗಳನ್ನು ಹುಟ್ಟುಹಾಕಿದೆ.
ನೆಟ್ಟಿಗರು ಸಹ ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಥೇಮ್ಸ್ನ ಅನಕೊಂಡಾ ಅಂತಾ ಕರೆದರೆ, ಇನ್ನು ಕೆಲವರು ಅದೊಂದು ಗಾಡ್ಜಿಲ್ಲಾ ಮರಿ ಮತ್ತು ಕೆಂಪು ಕಣ್ಣು ಹೊಂದಿದೆ ಎಂದಿದ್ದಾರೆ. (ಏಜೆನ್ಸೀಸ್)