ಹನಸೋಗೆ ಡೇರಿಗೆ ಲೋಕೇಶ್ ನಾಯಕ ಅಧ್ಯಕ್ಷ

Published on

ಉಪಾಧ್ಯಕ್ಷರಾಗಿ ಕವಿತಾ ಮಂಜುನಾಥ್ ಆಯ್ಕೆ

ಸಾಲಿಗ್ರಾಮ: ತಾಲೂಕಿನ ಹನಸೋಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲೋಕೇಶ್ ನಾಯಕ ಹಾಗೂ ಉಪಾಧ್ಯಕ್ಷರಾಗಿ ಕವಿತಾ ಮಂಜುನಾಥ್ ಆಯ್ಕೆಯಾದರು.

ಐದು ವರ್ಷ ಅವಧಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ 11 ಜನ ನಿರ್ದೇಶಕರು ಈ ಹಿಂದೆ ಆಯ್ಕೆಯಾಗಿದ್ದು. ಅಧ್ಯಕ್ಷರ ಆಯ್ಕೆಗೆ ಡೇರಿ ಆವಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲೋಕೇಶನಾಯಕ ಪ್ರತಿಸ್ಪರ್ಧಿಯಾಗಿ ರತ್ನಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕವಿತಾ ಮಂಜುನಾಥ್ ಪ್ರತಿಸ್ಪರ್ಧಿಯಾಗಿ ರಾಮಕೃಷ್ಣೇಗೌಡ ನಾಮಪತ್ರ ಸಲ್ಲಿಸಿದರು. ಲೋಕೇಶನಾಯಕ 7 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಪ್ರತಿಸ್ಪರ್ಧಿ ರತ್ನಮ್ಮ 6 ಮತ ಪಡೆದು ಪ್ರಭಾವಗೊಂಡರು. ಉಪಾಧ್ಯಕ್ಷರ ಆಯ್ಕೆಯಲ್ಲಿ ಕವಿತಾ ಮಂಜುನಾಥ್ 7 ಮತ ಪಡೆದು ಜಯಶೀಲರಾದರೆ, ರಾಮಕೃಷ್ಣೇಗೌಡ 6 ಮತ ಪಡೆದು ಸೋಲು ಕಂಡರು. ಚುನಾವಣಾ ಅಧಿಕಾರಿಯಾಗಿ ಪ್ರಭು ಕರ್ತವ್ಯ ನಿರ್ವಹಿಸಿದರು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ ನಾಯಕ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕವಿತಾ ಮಂಜುನಾಥ ಅವರನ್ನು ಡೇರಿ ಕಾರ್ಯದರ್ಶಿ ಕುಮಾರ್ ಮತ್ತು ಸಿಬ್ಬಂದಿ ಮತ್ತು ಗ್ರಾಮಸ್ಥರು ಅಭಿನಂದಿಸಿದರು.ನಿರ್ದೇಶಕರಾದ ಲವ, ನರಸಿಂಹಗೌಡ, ಗೋವಿಂದೇಗೌಡ, ರೂಪಾ, ರತ್ನಮ್ಮ, ಸಿದ್ದಯ್ಯ, ಲಕ್ಷ್ಮಣ, ರಾಮಕೃಷ್ಣೇಗೌಡ, ಸುರೇಶ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net