

ಹರಿಹರ: ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅಧ್ಯಕ್ಷತೆಯಲ್ಲಿ ನ. 13ರಂದು ಹರಿಹರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿವೈಎಸ್ಪಿ ಕೆ. ಕಲಾವತಿ, ಪಿಐ ಸಿ. ಮಧುಸೂದನ್, ಪಿಐ ಪ್ರಭು ಬಸೂರಿನ, ಲೋಕಾಯುಕ್ತ ಪೊಲೀಸ್ ಠಾಣೆ ಪಿಐ ಪಿ. ಸರಳ ಭಾಗವಹಿಸಲಿದ್ದು, ಅಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಅಹವಾಲು ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ಕೆಲಸ, ಕಾರ್ಯಗಳ ವಿಳಂಬ, ಭ್ರಷ್ಟಾಚಾರ, ಲಂಚಗುಳಿತನ, ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆಯ ಸಂಬಂಧದ ದೂರುಗಳನ್ನು ನೀಡಬಹುದು. ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯುಳ್ಳ ದೂರುಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.