

ಹಾವೇರಿ: ಲೋಕಾಯುಕ್ತ ಅಧಿಕಾರಿಗಳಿಂದ ಏ. 9ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವೆರೆಗೆ ಬ್ಯಾಡಗಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಜರುಗಲಿದೆ.
ಸರ್ಕಾರಿ ಕಚೇರಿಗಳಲ್ಲಿ ದುರಾಡಳಿತ, ಸಾರ್ವಜನಿಕ ಕೆಲಸ ಕಾರ್ಯಗಳ ವಿಳಂಬ, ಕಳಪೆಕಾಮಗಾರಿ, ಸರ್ಕಾರಿ ನೌಕರರ ಅಕ್ರಮ ಆಸ್ತಿಗಳಿಕೆ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಕೆಲಸಗಳಿಗೆ ಅಧಿಕಾರಿ, ನೌಕರರಿಂದ ಲಂಚ ಕೇಳುವ ದೂರುಗಳಿದ್ದರೆ ಲೋಕಾಯುಕ್ತ ನಡೆಸುವ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ದೂರುಗಳನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ಲೋಕಾಯುಕ್ತ ಡಿಎಸ್ಪಿ ಮಧುಸೂದನ್, ಪೊಲೀಸ್ ನಿರೀಕ್ಷಕರಾದ ದಾದಾವಲಿ ಕೆ.ಎಚ್, ಮಂಜುನಾಥ್ ಪಂಡಿತ ಹಾಗೂ ಬಸವರಾಜ ಹಳಬಣ್ಣನವರ ಅಹವಾಲು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಲೋಕಾಯುಕ್ತ ಕಚೇರಿ ಪ್ರಕಟಣೆ ತಿಳಿಸಿದೆ.