

ಬೆಂಗಳೂರು:
ಲೋಕಾಯುಕ್ತಕ್ಕೆ ನಿಗಧಿತ ಅವಧಿಯಲ್ಲಿ ಆಸ್ತಿ ವಿವರ ೋಷಣೆ ಅವಧಿ ಮುಗಿದಿದ್ದರೂ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ 6 ಸಚಿವರು, 62 ಶಾಸಕರು, 16 ವಿಧಾನ ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ.
ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಮಧು ಬಂಗಾರಪ್ಪ, ಕೆ.ಎನ್.ರಾಜಣ್ಣ, ಜಮೀರ್ ಅಹಮದ್, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ ಅವರುಗಳು ಆಸ್ತಿ ವಿವರ ಸಲ್ಲಿಸಿಲ್ಲ.
ಆಸ್ತಿ ವಿವರ ಸಲ್ಲಿಸದೆ ಇರುವ ಶಾಸಕರುಗಳ ಪೈಕಿ ಕಾಂಗ್ರೆಸ್ ಶಾಸಕರ ಸಂಖ್ಯೆ ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಇದ್ದಾರೆ.
ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಎಚ್.ವೈ.ಮೇಟಿ, ಸಿ.ಪುಟ್ಟರಂಗಶೆಟ್ಟಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮುಖ್ಯ ಸಚೇತಕ ಅಶೋಕ್ ಮಹಾದೇವ ಪಟ್ಟಣ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಪ್ರದೀಪ್ ಈಶ್ವರ್, ಕೆ.ವೈ.ನಂಜೇಗೌಡ, ಕೆ.ಎಂ.ಉದಯ್, ಡಾ.ಎಚ್.ಡಿ.ರಂಗನಾಥ್, ಎ.ಆರ್.ಕೃಷ್ಣಮೂರ್ತಿ, ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ ಸೇರಿದಂತೆ ಹಲವು ಶಾಸಕರು ಆಸ್ತಿ ವಿವರ ಸಲ್ಲಿಸದ ಪಟ್ಟಿಯಲ್ಲಿದ್ದಾರೆ.
ಬಿಜೆಪಿ ಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಜನಾರ್ಧನರೆಡ್ಡಿ, ಮುನಿರತ್ನ, ಧೀರಜ್ ಮುನಿರಾಜು ಸೇರಿದಂತೆ ಹಲವರಿದ್ದಾರೆ.
ಜೆಡಿಎಸ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಸಿ.ಎನ್.ಬಾಲಕೃಷ್ಣ, ಎ.ಮಂಜು, ಸ್ವರೂಪ್ ಪ್ರಕಾಶ್, ಕೆ.ಹರೀಶ್ ಗೌಡ ಸೇರಿದಂತೆ ಹಲವರಿದ್ದಾರೆ.
ರೈತ ಸಂಘದ ದರ್ಶನ ಪುಟ್ಟಣ್ಣಯ್ಯ, ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಅವರು ವಿವರ ಸಲ್ಲಿಸಿಲ್ಲ.
ವಿಧಾನ ಪರಿಷತ್:
ವಿಧಾನ ಪರಿಷತ್‌ನಲ್ಲಿಯೂ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹಮದ್, ನಸೀರ್ ಅಹಮದ್, ವೈ.ಎಂ.ಸತೀಶ್, ಗೋವಿಂದರಾಜು ಅವರು ಸೇರಿದಂತೆ ಹಲವರು ಸಲ್ಲಿಸಿಲ್ಲ.
ಬಿಜೆಪಿಯ ಚಿದಾನಂದಗೌಡ, ಶಶೀಲ್ ನಮೋಶಿ, ಎಸ್.ವಿ.ಸುಂಕನೂರ, ಸುನೀಲ್ ವೆಲ್ಲಾಪುರೆ, ಕೆ.ಎಸ್.ನವೀನ್ ಸೇರಿದಂತೆ ಹಲವರಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್.ಭೋಜೇಗೌಡ, ಸಿ.ಎನ್.ಮಂಜೇಗೌಡ, ಬಿ.ಎಂ.ರೂಕ್, ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಹಲವರಿದ್ದಾರೆ.
ಇನ್ನು ಹೊಸ ಸದಸ್ಯರಾಗಿ ನೇಮಕಗೊಂಡಿರುವ ಐವಾನ್ ಡಿಸೋಜ, ಜಗದೇವ ಗುತ್ತೇದಾರ್ ಮತ್ತು ಟಿ.ಎನ್.ಜವರಾಯಿಗೌಡ ಅವರು ಆಸ್ತಿ ವಿವರ ನೀಡಿಲ್ಲ ಎಂದು ಲೋಕಾಯುಕ್ತ ವಿವರ ನೀಡಿದೆ.