ಲೋಕೇಶ್ವರ ದೇವರ ದರ್ಶನ ಪಡೆದ ಡಿಸಿಎಂ

LKP 131
Published on

ಲೋಕಾಪುರ: ಪಟ್ಟಣದ ಆರಾಧ್ಯ ದೈವ ಶ್ರೀ ಲೋಕೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲೋಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಲೋಕೇಶ್ವರನ ದರ್ಶನ ಪಡೆದರು.

ಈ ವೇಳೆ ಡಿಸಿಎಂ ಕಾರಜೋಳ ಅವರನ್ನು ಅಯ್ಯಪ್ಪಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮಲ್ಲಪ್ಪ ಚೌಧರಿ ಸನ್ಮಾನಿಸಿದರು. ಹಣಮಂತಗೌಡ ಪಾಟೀಲ, ಜಾಕೀರ ಅತ್ತಾರ, ಸದಾಶಿವ ಹಗ್ಗದ, ವಸಂತಗೌಡ ಪಾಟೀಲ, ಕೃಷ್ಣಾ ಸಾಳುಂಕೆ, ಆನಂದ ಹವಳಖೋಡ, ಗೋಪಾಲಗೌಡ ಪಾಟೀಲ, ಬಾಬಾಸಾಹೇಬ ದೇಸಾಯಿ, ಸೈಯ್ಯದ ಜೀರಗಾಳ, ಈಶ್ವರ ಹವಳಖೋಡ, ವಿನೋದ ಘೋರ್ಪಡೆ, ವೆಂಕಣ್ಣ ಕಮಕೇರಿ, ಯಲ್ಲಪ್ಪಗೌಡ ಕೃಷ್ಣಗೌಡರ, ಕೃಷ್ಣಾ ಭಜಂತ್ರಿ, ಮಲ್ಲಪ್ಪ ಚೌಧರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net