ಲೋಕಸಭೆ ಚುನಾವಣೆಯ ಛಾಯಾಚಿತ್ರ ಸ್ಪರ್ಧೆ; ‘ವಿಜಯವಾಣಿ’ಯ ಚಂದ್ರುಗೆ ವಿಶೇಷ ಬಹುಮಾನ

M
Published on

ಬೆಂಗಳೂರು: ಸಾರ್ವತ್ರಿಕ ಯೋಕಸಭಾ ಚುನಾವಣೆ - 2024 ರ ಅಂಗವಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರನ್ನು ಘೋಷಿಸಲಾಗಿದೆ.

ಮೈಸೂರಿನ ವಿಜಯವಾಣಿ ಪತ್ರಿಕೆಯ ಕೆ.ಎಚ್. ಚಂದ್ರು ವಿಶೇಷ ಬಹುಮಾನ ಗಳಿಸಿದ್ದಾರೆ. ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಛಾಯಾಗ್ರಾಹಕ ಎಚ್.ಫಕ್ರುದ್ದೀನ್ ಪ್ರಥಮ, ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ಬಿ. ದಸ್ತೇನವರ ದ್ವೀತಿಯ,

ಮೂಡಬಿದಿರೆಯ ಹವ್ಯಾಸಿ ಛಾಯಾಗ್ರಾಹಕ ಜಿನೇಶ್ ಪ್ರಸಾದ್ ತೃತೀಯ ಬಹುಮಾನ ಪಡೆದಿದ್ದಾರೆ.

ಉಡುಪಿಯ ಉದಯವಾಣಿ ಪತ್ರಿಕೆಯ ಅಸ್ಟ್ರೋ ಮೋಹನ್ ಹಾಗೂ ಬೆಂಗಳೂರಿನ ಸಂಜೆ ಸಮಯ ಪತ್ರಿಕೆಯ ಪೂರ್ಣಿಮ ರವಿ ಸಮಾಧಾನಕರ ಬಹುಮಾನಕ್ಕೆ ಪಡೆದಿದ್ದಾರೆ.

ಮೈಸೂರಿನ ವಿಜಯವಾಣಿ ಪತ್ರಿಕೆಯ ಕೆ.ಎಚ್. ಚಂದ್ರು ಹಾಗೂ ಕಲಬುರಗಿಯ ವಿಜಯ ಕರ್ನಾಟಕ ಪತ್ರಿಕೆಯ ಶಿವಶರಣಪ್ಪ ಬೆನ್ನೂರ್ ಅವರು ವಿಶೇಷ ಬಹುಮಾನ ಗಳಿಸಿದ್ದಾರೆ.

ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 219 ಜನರು ಭಾಗವಹಿಸಿದ್ದರು. ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15,000 ರೂ., ತೃತೀಯ ಬಹುಮಾನ 10,000 ರೂ., ಸಮಾಧಾನಕರ ಬಹುಮಾನ 3000 ರೂ. ಹಾಗೂ ವಿಶೇಷ ಬಹುಮಾನ 2,500 ರೂ. ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net