ಮತದಾನ ಮಾಡಿದ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬ ಹೇಳಿದ್ದೇನು ಗೊತ್ತಾ?

mi family
Published on

ಮುಂಬೈ: ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿರುವ ರಿಲಾಯನ್ಸ್​ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಅವರು ಇಂದು (ಸೋಮವಾರ) ಕುಟುಂಬಸ್ಥರೊಂದಿಗೆ ಮತಚಲಾಯಿಸಿದರು. ಮುಂಬೈನ ಮಲಬಾರ್ ಹಿಲ್ ಮತಗಟ್ಟೆಯಲ್ಲಿ ಪತ್ನಿ ನೀತಾ ಅಂಬಾನಿ, ಪುತ್ರ ಆಕಾಶ್‌ ಅಂಬಾನಿಯೊಂದಿಗೆ ಬಂದು ಹಕ್ಕು ಚಲಾಯಿಸಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಕೇಶ್‌ ಅಂಬಾನಿ ಅವರು, ಪ್ರತಿಯೊಬ್ಬ ಭಾರತೀಯನು ಮತ ಚಲಾಯಿಸಬೇಕು. ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಇದು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬ ಭಾರತೀಯನೂ ಮತದಾನ ಮಾಡಬೇಕು ಎಂಬುದು ನನ್ನ ಮನವಿ ಎಂದರು.

ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮುಖ್ಯ. ಏಕೆಂದರೆ ಇದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಪತ್ನಿ ನೀತಾ ಅಂಬಾನಿ ಮತದಾನಕ್ಕೆ ಕರೆ ಕೊಟ್ಟರು.

ಮತದಾನ ಮಾಡುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿ ಎಂದು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಹೇಳಿದರು. ಭಾರತೀಯ ಪ್ರಜೆಯಾಗಿ ಮತ ಚಲಾಯಿಸುವುದು ತುಂಬಾ ಮುಖ್ಯ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿರುವ ಪ್ರತಿಯೊಬ್ಬರು ಮನೆಯಿಂದ ಹೊರ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಐದನೇ ಹಂತದ ಮತದಾನದಲ್ಲಿ ಮುಂಬೈನ 6 ಕ್ಷೇತ್ರಗಳು ಸೇರಿದಂತೆ ಮಹಾರಾಷ್ಟ್ರದ 13 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು (ಸೋಮವಾರ) ಜರುಗಿತು. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆಯಿತು.

ಇನ್ನೂ 2 ಹಂತದ ಚುನಾವಣೆ ಬಾಕಿಯಿದ್ದು, ಮೇ 25 ರಂದು 6ನೇ ಹಂತ ಹಾಗೂ ಜೂನ್‌ 1ರಂದು 7ನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್‌ 4ರಂದು 7 ಹಂತಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

ಐದನೇ ಹಂತದ ಮತದಾನದಲ್ಲಿ ಮುಂಬೈನ 6 ಕ್ಷೇತ್ರಗಳು ಸೇರಿದಂತೆ ಮಹಾರಾಷ್ಟ್ರದ 13 ಕ್ಷೇತ್ರಗಳಿಗೆ ಮತದಾನ ನಡೆಯಿತು. ಮುಂಬೈ ನಾರ್ತ್, ಮುಂಬೈ ನಾರ್ತ್ ಸೆಂಟ್ರಲ್, ಮುಂಬೈ ನಾರ್ತ್ ವೆಸ್ಟ್, ಮುಂಬೈ ನಾರ್ತ್ ಈಸ್ಟ್, ಮುಂಬೈ ಸೌತ್ ಸೆಂಟ್ರಲ್, ಮುಂಬೈ ಸೌತ್, ಥಾಣೆ, ಕಲ್ಯಾಣ್, ಭಿವಂಡಿ, ಪಾಲ್ಘರ್, ನಾಸಿಕ್‌ನಲ್ಲಿ 2.46 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net