ಪಟಾಕಿ ಸಂಗ್ರಹಿಸಿಟ್ಟಿದ್ದ ಗೋದಾಮುಗಳಿಗೆ ಬೀಗ

HUN-OCT-14-1(H K HALLI CRACKERS GODOWN)
Published on

ಹುಣಸೂರು: ತಾಲೂಕಿನ ಹಿರೀಕ್ಯಾತನಹಳ್ಳಿಯಲ್ಲಿ ಶುಕ್ರವಾರ 30 ಲಕ್ಷ ರೂ. ಮೌಲ್ಯದ 20 ಸಾವಿರ ಕೆಜಿ ಪಟಾಕಿ ಸಂಗ್ರಹಿಸಿಟ್ಟಿದ್ದ ಗೋದಾಮುಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.
ಮೈಸೂರಿನ ಸುದರ್ಶನ್ ಎಂಬುವರು ಹಿರೀಕ್ಯಾತನಹಳ್ಳಿಯಲ್ಲಿ ತಮ್ಮ ತಾಯಿ ಹೆಸರಿನಲ್ಲಿರುವ ಕೃಷಿಭೂಮಿಯಲ್ಲಿ 6 ಗೋದಾಮುಗಳನ್ನು ನಿರ್ಮಿಸಿ ಲಕ್ಷಾಂತರ ರೂ.ಮೌಲ್ಯದ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವುದರ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದಾಗ ಪಟಾಕಿಗಳು ಪತ್ತೆಯಾಗಿವೆ.
‘ಪಟಾಕಿ ದಾಸ್ತಾನಿಗೆ ಅಧಿಕೃತ ಪರವಾನಗಿ ಪಡೆದಿದ್ದರೂ ಗೋದಾಮುಗಳಿಗೆ ವಿದ್ಯುತ್ ಸಂಪರ್ಕ ಪಡೆದಿರುವುದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸದಿರುವುದು ಸೇರಿದಂತೆ ಕೆಲವೊಂದು ಕಾನೂನು ಉಲ್ಲಂಘನೆಯಾಗಿರುವುದು ಕಂಡುಬಂದಿರುವುದರಿಂದ ಗೋದಾಮುಗಳಿಗೆ ಬೀಗ ಹಾಕಲಾಗಿದೆ’ ಎಂದು ತಿಳಿಸಿದರು. ಅಡಿಷನಲ್ ಎಸ್‌ಪಿ ನಂದಿನಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್‌ಸ್ಪೆಕ್ಟರ್ ಸಿ.ವಿ.ರವಿ, ಅಗ್ನಿಶಾಮಕ ಠಾಣಾಧಿಕಾರಿ ಸತೀಶ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net