ಬಿಜೆಪಿ ಸಂಸದೆ ಮೇಲೆ ವಿಷಕಾರಿ ಬಣ್ಣ ಎರಚಿದ ಟಿಎಂಸಿ! ಸೋಲುವ ಭಯದಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದ ಬಿಜೆಪಿ

bjp tmc
Published on

ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಶನಿವಾರದಂದು ನಡೆದಿದೆ. ಅಲ್ಲಲ್ಲಿ ಗಲಭೆ ನಡೆರಿವುದು ಬೆಳಕಿಗೆ ಬಂದಿದೆ. ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ವಿಷಕಾರಿ ಬಣ್ಣ ಎರಚಿದ್ದಾಗಿ ಬಿಜೆಪಿಯ ಸಂಸದೆ ಹಾಗೂ ಅಭ್ಯರ್ಥಿಯೊಬ್ಬರು ದೂರಿದ್ದಾರೆ.

ಬಿಜೆಪಿ ಸಂಸದೆ ಹಾಗೂ ಚುಚುರಾ ಕ್ಷೇತ್ರದ ಅಭ್ಯರ್ಥಿ ಲಾಕೆಟ್ ಚಟರ್ಜಿ ಈ ರೀತಿ ದೂರಿರುವ ನಾಯಕಿ. ಆಕೆ ಶನಿವಾರ ಸಂಜೆ ರವೀಂದ್ರನಗರದ ಕಲಿತ್ಲ ಮೈದಾನದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಆ ವೇಳೆ ಕೊಡಲಿಯಾ ನಂ .2 ಗ್ರಾಮ ಪಂಚಾಯಿತಿಯ ಬಳಿ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರಂತೆ. ವಿಷಕಾರಿ ಬಣ್ಣಗಳನ್ನು ಎರಚಿ ಹಲ್ಲೆ ಮಾಡಿದ್ದಾರೆ ಎಂದು ಸಂಸದೆ ದೂರಿದ್ದಾರೆ. ಸಂಸದೆಯ ಕಣ್ಣು ಮತ್ತು ಕೆನ್ನೆಯ ಮೇಲೆ ಬಣ್ಣ ಪರಿಣಾಮ ಬೀರಿರುವುದಾಗಿ ತಿಳಿಸಲಾಗಿದೆ.

ಟಿಎಂಸಿಗೆ ಸೋಲುವ ಭಯ ಆರಂಭವಾಗಿದೆ. ಅದೇ ಕಾರಣಕ್ಕೆ ಅವರು ಈ ರೀತಿ ಬೇರೆ ಬೇರೆ ಮಾರ್ಗದಲ್ಲಿ ನಮ್ಮನ್ನು ಸೋಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಇದು ಒಂದು ಸುಳ್ಳು ಆರೋಪ ಎಂದು ಟಿಎಂಸಿ ಹೇಳಿದೆ. ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಯಾಗಿಲ್ಲ ಎಂದು ಟಿಎಂಸಿ ವಾದಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net