ಸ್ಟಾರ್ಟ್ ಕ್ಯಾಮೆರಾ ಕರೀನಾ; ಮಗುವಾದ ಒಂದೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹಾಜರಿ

Kareena
Published on

ಒಂದು ತಿಂಗಳ ಹಿಂದಷ್ಟೇ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು ನಟಿ ಕರೀನಾ. ಇನ್ನೊಂದಷ್ಟು ತಿಂಗಳುಗಳ ಕಾಲ ಅವರು ಆ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದುಕೊಂಡರೆ, ಅದು ಸುಳ್ಳಾಗಿದೆ. ಕರೀನಾ ಇತ್ತೀಚೆಗಷ್ಟೇ ಚಿತ್ರೀಕರಣವೊಂದರಲ್ಲಿ ಭಾಗವಹಿಸಿ ಹಲವರ ಹುಬ್ಬೇರಿಸಿದ್ದಾರೆ.

ಮಗುವಾಗುವುದಕ್ಕೂ ಮೊದಲು ಕರೀನಾ, ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಢಾ’ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದ ಕರೀನಾ, ಈಗ ಓವರ್ ದಿ ಟಾಪ್​ಯೂಂದರ (ಓಟಿಟಿ) ಹೊಸ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರ್ಯಕ್ರಮದ ಚಿತ್ರೀಕರಣದಲ್ಲಿಯೇ ಕರೀನಾ ಕಾಣಿಸಿಕೊಂಡಿದ್ದಾರೆ.

ಒಂದೆರೆಡು ದಿನಗಳ ಚಿತ್ರೀಕರಣದಲ್ಲಿ ಭಾಗವಹಿಸಲಿರುವ ಕರೀನಾ, ಮುಂದಿನ ಕೆಲವು ತಿಂಗಳುಗಳ ಕಾಲ ಗ್ಯಾಪ್ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಎರಡನೆಯ ಮಗುವಿನ ಪಾಲನೆ ಮಾಡುವುದರ ಜತೆಗೆ, ಒಂದಿಷ್ಟು ತೂಕ ಇಳಿಸಿಕೊಳ್ಳುವುದಕ್ಕೆ ಕರೀನಾ ಯೋಚಿಸಿದ್ದು, ಅದೇ ಕಾರಣಕ್ಕೆ ಅವರು ಯಾವುದೇ ಹೊಸ ಚಿತ್ರವನ್ನೂ ಒಪ್ಪಿಲ್ಲವಂತೆ. ಮುಂದಿನ ದಿನಗಳಲ್ಲಿ ಒಂದಿಷ್ಟು ವರ್ಕೌಟ್ ಮಾಡಿ, ಮೊದಲಿನ ಶೇಪ್​ಗೆ ಬಂದ ಮೇಲೆ ನಟನೆಯನ್ನು ಮುಂದುವರೆಸುತ್ತಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net