ಕಡಂದಲೆ ಕ್ಯಾಂಟೀನ್‌ನಲ್ಲಿ ಸ್ಥಳೀಯರಿಗೆ ವಂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚನೆ
  • ಮೋಸ ಮಾಡಿದವರನ್ನು ಹಿಡಿದು ಹಣ ವಸೂಲಿ
ಮೂಡುಬಿದಿರೆ: ಪಾಲಡ್ಕ ಗ್ರಾಪಂ ವ್ಯಾಪ್ತಿಯ ಕಡಂದಲೆ ವ್ಯಾಪ್ತಿಯ ಕೆಪಿಟಿಸಿಎಲ್‌ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕೆಲವು ಕಾರ್ಮಿಕರು ಸ್ಥಳೀಯ ಕ್ಯಾಂಟೀನ್, ಅಂಗಡಿ ಮಾಲೀಕರು, ಇತರ ಸಾರ್ವಜನಿಕರಿಗೆ ಹಣ ಪಾವತಿಯ ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಣ ನೀಡುವ ಸಂದರ್ಭ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಲಾಗಿದೆ ಎಂದು ಸುಳ್ಳು ಹೇಳಿ ಹಣ ವರ್ಗಾಯಿಸದೆ ವಂಚನೆ ಎಸಗಲಾಗುತ್ತಿತ್ತು. ಈ ಕೃತ್ಯ ಪೂಪಾಡಿಕಲ್ಲಿನ ಕ್ಯಾಂಟೀನ್ ಒಂದರಲ್ಲಿ ಬೆಳಕಿಗೆ ಬಂದಿದೆ. ಕ್ಯಾಂಟೀನ್ ಮಾಲೀಕರು, ಸ್ಥಳೀಯರು ಮೋಸ ಮಾಡಿದವರನ್ನು ಹಿಡಿದು ಹಣ ವಸೂಲಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net