ಎಲ್​​ಒಸಿ ಗಡಿರೇಖೆ ಉಲ್ಲಂಘನೆ: ಪಾಕ್​ಗೆ ಭಾರತ ಎಚ್ಚರಿಕೆ! | India warns Pakistan

dk - 2025-04-30T202054.377
Published on

India warns Pakistan : ಜಮ್ಮು-ಕಾಶ್ಮೀರದಲ್ಲಿ ಇಂಡಿಯಾ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ(ಎಲ್​ಓಸಿ)ಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಈ ಬಗ್ಗೆ ಎರಡು ದೇಶಗಳ ಮಿಲಿಟಿರಿ ಕಾರ್ಯಚರಣೆಗಳ ಮಹಾನಿರ್ದೇಶಕರು ಹಾಟ್​ಲೈನ್​ನಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಎಲ್‌ಒಸಿಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಯ ವಿಷಯವನ್ನು ಭಾರತ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸಿದೆ. ವಿನಿಮಯದ ಸಮಯದಲ್ಲಿ ಪಾಕಿಸ್ತಾನ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಗಡಿರೇಖೆ ಉಲ್ಲಂಘನೆ ಆಗುತ್ತಿರುವುದರ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ ವರದಿ ಉಲ್ಲೇಖಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ಘಟನೆಗಳು ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ಸೋಮವಾರ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಎಲ್‌ಒಸಿ ಉದ್ದಕ್ಕೂ ಕದನ ವಿರಾಮ ಉಲ್ಲಂಘನೆಯನ್ನು ಮುಂದುವರೆಸಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net