ವಿದ್ಯುತ್ ಮಗ್ಗಕ್ಕೂ ಸಮ್ಮಾನ: ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರೂ. ತನಕ ಸಾಲ, ಉಚಿತ ವಿದ್ಯುತ್

Vidhana
Published on

ಬೆಂಗಳೂರು: ವಿದ್ಯುತ್ ಮಗ್ಗದಲ್ಲಿ ಕೆಲಸ ಮಾಡುವ ನೇಕಾರರಿಗೂ ನೇಕಾರ ಸಮ್ಮಾನ ಯೋಜನೆ ವಿಸ್ತರಣೆ, 2 ಲಕ್ಷ ರೂ. ತನಕ ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ 5 ಎಚ್​ಪಿ ತನಕ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ನಡೆದ 48 ಜಿಎಸ್​ಟಿ ಕೌನ್ಸಿಲ್ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನೇಕಾರರ ಸಮಸ್ಯೆಗಳ ಬಗ್ಗೆ ರ್ಚಚಿಸಲು ಸಭೆ ನಡೆಸಲಾಯಿತು. ವೃತ್ತಿಪರ ನೇಕಾರರ ಕೈಮಗ್ಗಕ್ಕೆ ಕೈಗಾರಿಕಾ ಇಲಾಖೆಯಿಂದ ಶೇ.30 ಸಹಾಯಧನ ನೀಡಲಾಗುತ್ತಿದ್ದು, ಅದನ್ನು ಶೇ.50 ಹೆಚ್ಚಿಸಲು ತೀರ್ವನಿಸಲಾಗಿದೆ ಎಂದರು.

ನೇಕಾರ ಸಮ್ಮಾನ ಯೋಜನೆಯಡಿ 46,000 ಕೈಮಗ್ಗ ನೇಕಾರರಿಗೆ 5,000 ರೂ.ಗಳನ್ನು ಡಿಬಿಟಿ ಮಾಡಲಾಗಿದೆ. ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲು ತೀರ್ವನಿಸಲಾಗಿದೆ. ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಗುಡಿ ಕೈಗಾರಿಕೆಗಳೆಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯಿಂದ ವಿನಾಯಿತಿ ನೀಡಲು ಆದೇಶ ಹೊರಡಿಸಲು ತೀರ್ವನಿಸಲಾಗಿದೆ ಎಂದರು.

ಸಮವಸ್ತ್ರ ಪೂರೈಕೆ: ಸರ್ಕಾರದ ನೇಕಾರ (ಕೈಮಗ್ಗ ಮತ್ತು ವಿದ್ಯುತ್ ಚಾಲಿತ) ನಿಗಮಗಳ ಉತ್ಪಾದನಾ ಸಾಮರ್ಥ್ಯದ ಅನುಗುಣವಾಗಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲು ತೀರ್ವನಿಸಲಾಯಿತು. ಇದನ್ನು ಇದೇ ತಿಂಗಳಲ್ಲಿಯೇ ಕಾರ್ಯಾದೇಶ ನೀಡಿ, ಸಕಾಲದಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ.25 ಅನ್ನು ಕೈಮಗ್ಗ ನಿಗಮದ ಮೂಲಕ ಖರೀದಿಸಲು ತೀರ್ವನಿಸಲಾಯಿತು ಎಂದು ವಿವರಿಸಿದರು.

ಅಸಂಘಟಿತರಿಗೂ ಮಂಡಳಿ: ಕಟ್ಟಡ ನಿರ್ಮಾಣ ಕಾರ್ವಿುಕರಿಗೆ ಸಿಗುವ ಸೌಲಭ್ಯಗಳನ್ನು ವೃತ್ತಿಪರ ಕೂಲಿ ನೇಕಾರರು, ಕೃಷಿ ಕಾರ್ವಿುಕರು ಹೀಗೆ ವಿವಿಧ ಅಸಂಘಟಿತ ಕಾರ್ವಿುಕರ 1 ಮಂಡಳಿ ರಚಿಸಿ, ಅವರಿಗೂ ವಿವಿಧ ಸೌಲಭ್ಯಗಳನ್ನು ನೀಡುವ ಬೇಡಿಕೆ ಇದ್ದು, ಮುಂದಿನ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ತೀರ್ವನಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನು ಮಾಸಾಂತ್ಯದೊಳಗೆ ಬಿಡುಗಡೆ ಮಾಡಲಾಗುವುದು. ಇದಕ್ಕೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಡೀ ನೇಕಾರಿಕೆಯ ವೃತ್ತಿಯಲ್ಲಿ ಸಂಶೋಧನೆಗಳಾಗಿವೆ. ಈಗಾಗಲೆ ಸಿಎನ್​ಸಿ ಮಗ್ಗಗಳಿವೆ. ಅವುಗಳನ್ನು ಗುಣಮಟ್ಟದ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಾಗಬೇಕಿದೆ. ಮುಂದಿನ ಆಯವ್ಯಯಲ್ಲಿ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net