Live: ಯಾರಿಗೆ ಬಿ'ಹಾರ'?; ಇಲ್ಲಿದೆ ಮತ ಎಣಿಕೆಯ ಚಿತ್ರಣ

Bihar
Published on

ನವದೆಹಲಿ: ಭಾರಿ ಮತಕದನದ ಕಣವಾಗಿರುವ ಬಿಹಾರ ಚುನಾವಣಾ ಫಲಿತಾಂಶಕ್ಕಾಗಿ ಈಗಾಗಲೇ ಮತ ಎಣಿಕೆ ಆರಂಭಗೊಂಡಿದ್ದು, ದೇಶಾದ್ಯಂತ ಕುತೂಹಲ ಕೆರಳಿಸಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಜೆಡಿಯು ನಾಯಕ, ಸಿಎಂ ನಿತೀಶ್ ಕುಮಾರ್ ಮತ್ತು ಆರ್​ಜೆಡಿ ಯುವ ನಾಯಕ ತೇಜಸ್ವಿ ಯಾದವ್ ಭವಿಷ್ಯ ನಿರ್ಧಾರವಾಗಲಿದೆ.

ಕರೊನೋತ್ತರ ಕಾಲದಲ್ಲಿ ನಡೆದ ಮೊದಲ ವಿಧಾನಸಭೆ ಚುನಾವಣೆ ಇದಾಗಿದ್ದು, ಜನತೆ ಇಲ್ಲಿನ ಫಲಿತಾಂಶದತ್ತ ಕೌತುಕದ ಕಣ್ಣುಗಳಿಂದ ನೋಡುತ್ತಿದ್ದಾರೆ. ಮತ ಎಣಿಕೆಯ ಅಪ್​ಡೇಟ್ಸ್​ ಇಲ್ಲಿ ಸಿಗಲಿದೆ. ಕ್ಷಣಕ್ಷಣದ ಮಾಹಿತಿಗಾಗಿ ದಿಗ್ವಿಜಯ ನ್ಯೂಸ್​ ಲೈವ್ ಗಮನಿಸಿ...

ಒಟ್ಟು ಸ್ಥಾನ- 243                  

ಪಕ್ಷ/ಮೈತ್ರಿಕೂಟ  - ಮುನ್ನಡೆ/ಗೆಲುವು

ಎನ್​ಡಿಎ- 128

ಎಂಜಿಬಿ- 105

ಎಲ್​​ಜೆಪಿ- 01

ಇತರ - 09

1:35 - ಬಿಹಾರದಲ್ಲಿ ಇದುವರೆಗೆ 1 ಕೋಟಿ ಮತ ಎಣಿಸಲಾಗಿದೆ ಎಂದು ಚುನಾವಣಾ ಆಯುಕ್ತ

12:05 ಮುನ್ನಡೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರಿಂದ ಪಾಟ್ನಾದಲ್ಲಿ ಸಂಭ್ರಮಾಚರಣೆ

11:00 - MGB ಎಂದರೆ 'ಮರ್​ ಗಯೆ ಭಾಯ್​' ಎಂದು ರಾಹುಲ್​ ಗಾಂಧಿಯನ್ನು ಟೀಕಿಸಿದ ಬಿಜೆಪಿ ಸಂಸದ.

9:55- ಮುಗಿಯುವವರೆಗೂ ಮುಗಿಯಿತು ಎಂದು ಹೇಳಲಾಗದು: ಅಮಿತ್ ಮಾಳವೀಯ, ಬಿಜೆಪಿ.

9:30- ರಾಘೋಪರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್​ 700 ಮತಗಳಿಂದ ಮುನ್ನಡೆ

8:30- ಆರ್​ಜೆಡಿ 35 ಸ್ಥಾನಗಳಲ್ಲಿ ಮುನ್ನೆಡೆ

8:05- ಬಿಹಾರದಾದ್ಯಂತ ಮತ ಎಣಿಕೆ ಶುರು

8:00- ಬಿಹಾರದೆಲ್ಲೆಡೆ ತೆರೆದ ಸ್ಟ್ರಾಂಗ್ ರೂಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net