ಲಿವ್​-ಇನ್​ ಸಂಬಂಧ ತಂದಿಟ್ಟ ಕುತ್ತು! ಒಂದೇ ಮನೆಯಲ್ಲಿ ಪ್ರಿಯಕರ ನೇಣಿಗೆ ಶರಣು, ಪ್ರೇಯಸಿಯ ಮುಂಗೈ ಕಟ್​ | live-in

ವಿಜಯವಾಣಿ (24)
Published on

live-in: ಬಾಡಿಗೆ ಮನೆಯಲ್ಲಿ ವಾಸವಿದ್ದ ಲಿವ್​-ಇನ್​ ಜೋಡಿಯ ವಿಪರೀತ ಜಗಳ ಇದೀಗ ದುರಂತ ಅಂತ್ಯದಲ್ಲಿ ಕೊನೆಗೊಂಡಿದೆ. ಜೋಡಿಯ ಪೈಕಿ ವ್ಯಕ್ತಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣಾದರೆ, ಮಹಿಳೆ ತನ್ನ ಮುಂಗೈಯನ್ನು ತಾನೇ ಕತ್ತರಿಸಿಕೊಂಡ ಘಟನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ವರದಿಯಾಗಿದೆ.

ಬಾಡಿಗೆ ಮನೆಯಲ್ಲಿಯೇ ವಾಸವಿದ್ದ ದಂಪತಿಗಳ ನಡುವೆ ಯಾವುದೂ ಸರಿಯಿರಲಿಲ್ಲ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಆಗಾಗ್ಗೆ ಜಟಾಪಟಿ ನಡೆಯುತ್ತಿತ್ತು. ಇದೇ ರೀತಿ ಜೋಡಿಗಳ ಮಧ್ಯೆ ದೊಡ್ಡ ಜಗಳ ನಡೆದಿದ್ದು, ಆತ ರೂಮ್​ನಲ್ಲಿ ನೇಣಿಗೆ ಶರಣಾಗಿದ್ದಾನೆ. ವ್ಯಕ್ತಿಯ ಗೆಳತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಕಳೆದ ಒಂದು ವರ್ಷದಿಂದ ಲಿವ್-ಇನ್ ಸಂಬಂಧದಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಅವರಿಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ ರೀತಿ ಬುಧವಾರ ತಡರಾತ್ರಿ ಕೂಡ ಜಟಾಪಟಿ ನಡೆದಿದೆ. ಮಹಿಳೆ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದ ಕೂಡಲೇ ನಾವು ಸ್ಥಳಕ್ಕೆ ಬಂದೆವು. ಮೃತನನ್ನು ನವಜ್ಯೋತಿ ತಾಲೂಕ್ದಾರ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆಡ್​ರೂಮ್​ನಲ್ಲಿ ನೇಣಿಗೆ ಶರಣಾಗಿದ್ದ. ಆತನ ಸಂಗಾತಿ ಸುಷ್ಮಿತಾ ದಾಸ್ ಮುಂಗೈಯನ್ನು ಕತ್ತರಿಸಿಕೊಂಡಿದ್ದಳು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಹಯಾತ್ ಆಸ್ಪತ್ರೆಗೆ ದಾಖಲಿಸಿಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಷ್ಮಿತಾಳನ್ನು ಪ್ರತ್ಯೇಕ ರೂಮ್​ನಲ್ಲಿ ಕೂಡಿ ಹಾಕಿದ ನವಜ್ಯೋತಿ, ನಂತರ ಇನ್ನೊಂದು ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವೇಳೆ ತಾನು ಕೂಡ ಸಾಯುವ ನಿರ್ಧಾರಕ್ಕೆ ಮುಂದಾದ ಸುಷ್ಮಿತಾ, ತನ್ನ ಮುಂಗೈ ಕತ್ತರಿಸಿಕೊಂಡಿದ್ದಾಳೆ. ಪ್ರಾಣ ಬಿಡುವ ಕೊನೆ ಗಳಿಗೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net