ಮದುವೆ ಮನೆಯಲ್ಲೂ ನೇರ ಪ್ರಸಾರ

22ತ್ಯಾಗರ್ತಿ3
ತ್ಯಾಗರ್ತಿ ಸಮೀಪದ ಜಿಡ್ಡಿನಕೆರೆ ಗಣಪತಿ ಭಟ್ ಅವರ ಮಗನ ಮದುವೆ ಆರತಕ್ಷತೆ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ ವೀಕ್ಷಿಸಲು ಎಲ್ಇಡಿ ಟಿವಿ ವ್ಯವಸ್ಥೆ ಮಾಡಿರುವುದು.
Published on

ತ್ಯಾಗರ್ತಿ: ತ್ಯಾಗರ್ತಿ ಭಾಗದಲ್ಲಿ ಸಂಭ್ರಮದಿಂದ ಆಚರಿಸಲಾಯಿತು ಮತ್ತು ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ನೆರವೇರಿತು. ಬೊಮ್ಮತ್ತಿಯಲ್ಲಿ ಭಜರಂಗದಳದಿಂದ ನೇರಪ್ರಸಾರ ವೀಕ್ಷಿಸಲು ಶಾಮಿಯಾನ ಹಾಕಿ ದೊಡ್ಡ ಎಲ್ಇಡಿ ಪರದೆ ಹಾಕಲಾಗಿತ್ತು. ಜತೆಗೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.
ನಾರಗೋಡು, ಕೊಪ್ಪ, ಕೇದಿಗೆ ಕೊಪ್ಪ ಗ್ರಾಮದಿಂದ ದೇವಿಕೆರೆ ಬಸ್ ನಿಲ್ದಾಣದ ಸಮೀಪ ಶ್ರೀ ರಾಮ ದೇವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಉಚಿತವಾಗಿ ಕಬ್ಬಿನ ಹಾಲು ವಿತರಣೆ ಮಾಡಲಾಯಿತು. ಚಿಕ್ಕಬಿಲಗುಂಜಿ ಶ್ರೀ ಕಮಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ರುದ್ರಾಭಿಷೇಕ ನೆರವೇರಿತು. ನೀಚಡಿ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಪ್ರಾಣಪ್ರತಿಷ್ಠೆ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮೋತ್ಸವ ವೀಕ್ಷಿಸಿದರು. ತ್ಯಾಗರ್ತಿ ರಾಮಮಂದಿರ, ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮದುವೆ ಮನೆಗಳಲ್ಲಿ ಆರತಕ್ಷತೆ ಸಮಯದಲ್ಲಿ ರಾಮ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಲು ಎಲ್ಇಡಿ ವ್ಯವಸ್ಥೆ ಮಾಡಲಾಗಿತ್ತು. ತ್ಯಾಗರ್ತಿ ಭಾಗದ ಕೆಲವೆಡೆ ವಿದ್ಯುತ್ ಕಡಿತದಿಂದ ರಾಮೋತ್ಸವ ನೇರ ಪ್ರಸಾರ ವೀಕ್ಷಣೆಗೆ ತೊಂದರೆ ಆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net