ಪರಿಸರಕ್ಕೆ ಪೂರಕವಾಗಿ ಜೀವನ ಸಾಗಿಸಿ

NSS Lecture programme
ಸಾಗರ ತಾಲೂಕಿನ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಎನ್‌ಎಸ್‌ಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ರಾವ್ ಮಂಚಾಲೆ ಉದ್ಘಾಟಿಸಿದರು. ಡಾ. ಶುಭಾ ಮರವಂತೆ, ರೇವತಿ ಹೆಗಡೆ, ವಿಜಯ್ಕುಮಾರ್, ಕೆ.ಆರ್.ಪ್ರಕಾಶ್, ಮಾಲತೇಶ್, ಡಾ. ದಿವ್ಯಾ, ಶೇಖರಪ್ಪ, ಹರ್ಷ ಇದ್ದರು.
Published on

ಶಿವಮೊಗ್ಗ: ಪರಿಸರ ಇಲ್ಲದೆ ಬದುಕಿಲ್ಲ. ಹಾಗಾಗಿ ಪರಿಸರಕ್ಕೆ ಪೂರಕವಾಗಿಯೇ ಜೀವನ ನಡೆಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಹೇಳಿದರು.

ಸಾಗರ ತಾಲೂಕು ಉಳ್ಳೂರು ಶ್ರೀ ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್‌ನ ಅಂಗಸಂಸ್ಥೆ ಶ್ರೀ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 6ನೇ ದಿನದ ಎನ್‌ಎಸ್‌ಎಸ್ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್‌ನಿಂದ ಹೊಂದಾಣಿಕೆ ಗುಣ, ನಾಯಕತ್ವ, ಸೇವಾ ಮನೋಭಾವ, ರಾಷ್ಟ್ರೀಯ ಭಾವೈಕ್ಯ ಬೆಳೆಯುತ್ತದೆ ಎಂದರು.

ಪ್ರಾಚಾರ್ಯ ವಿಜಯ್ಕುಮಾರ್ ಮಾತನಾಡಿ, ಓದು, ಬರಹ, ಬೋಧನೆಗಿಂತ ಜೀವನ ವಿಧಾನ ಬಹಳ ಮುಖ್ಯ. ಎಲ್ಲರೂ ಶಿಸ್ತುಬದ್ಧ ದಿನಚರಿ ಬೆಳೆಸಿಕೊಳ್ಳಬೇಕು ಎಂದರು. ಉಪನ್ಯಾಸಕಿ ರೇವತಿ ಹೆಗಡೆ ಮಾತನಾಡಿ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದರಿಂದ ರಾಷ್ಟ್ರೀಯ ಭಾವೈಕ್ಯ ಹೆಚ್ಚುತ್ತದೆ ಎಂದರು.

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೃಷಿಕ ಪ್ರಕಾಶ್ ರಾವ್ ಮಂಚಾಲೆ ಅವರು ಆಯುರ್ವೇದಿಕ್ ಸಸಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಔಷಧ ಗಿಡಗಳ ಮಹತ್ವ ತಿಳಿಸಿಕೊಟ್ಟರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪಿ.ಮಂಜೋಜಿ ರಾವ್, ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆ ಅಧ್ಯಕ್ಷ ಕೆ.ಆರ್.ಪ್ರಕಾಶ್, ಉಪನ್ಯಾಸಕ ಮಾಲತೇಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಸಹಾಯಕ ಅಧಿಕಾರಿ ಡಾ. ದಿವ್ಯಾ, ಸಾಗರ ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಶೇಖರಪ್ಪ, ಯುವ ಮುಖಂಡ ಹರ್ಷ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net