VIDEO | ಮೆಟ್ರೋ ರೈಲಿನೊಳಗೆ ಪುಟ್ಟ ಪೋರಿಯ ಡ್ಯಾನ್ಸ್​; ವಿಡಿಯೋ ವೈರಲ್​

Untitled design - 2023-08-02T160928.352
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲಿನೊಳಗೆ ಡ್ಯಾನ್ಸ್​ ಮಾಡಿ ರೀಲ್ಸ್​ ಮಾಡುವವರ ಸಂಖ್ಯೆ ಭಾರೀ ಹೆಚ್ಚಿದೆ. ಅದರಲ್ಲೂ ವಿಚಿತ್ರವಾಗಿ, ಅರಬರೆ ವಸ್ತ್ರಗಳನ್ನು ಧರಿಸಿ ನೃತ್ಯ ಮಾಡಿ, ರೈಲಿನಲ್ಲಿರುವ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಇಂತಹ ಹಲವು ಘಟನೆಗಳು ಕಳೆದ ವಾರದಲ್ಲಿ ಅಧಿಕ ಸಂಖ್ಯೆಯಲ್ಲಿ ವರದಿಯಾಗಿದೆ. ಆದ್ರೆ, ಈ ಮಧ್ಯೆ ಪುಟ್ಟ ಪೋರಿಯೊಬ್ಬಳು ಮಾಡಿರುವ ರೀಲ್ಸ್​ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ದೆಹಲಿ ಮೆಟ್ರೋ ರೈಲಿನೊಳಗೆ ಬಾಲಕಿಯೊಬ್ಬಳು ಇತ್ತೀಚಿಗೆ ಜನಪ್ರಿಯತೆ ಪಡೆದುಕೊಂಡ 'ಮೋಕಾ ಸೋಕಾ' ಹಾಡಿಗೆ ಮುದ್ದು ಮುದ್ದಾಗಿ ಹೆಜ್ಜೆ ಹಾಕಿದ್ದಾಳೆ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ, ಶೇರ್ ಮಾಡಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ದೃಶ್ಯ ವ್ಯಾಪಕವಾಗಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net