ವಿಜಯವಾಣಿ ಸುದ್ದಿಜಾಲ ವಿಜಯಪುರ
ಕನ್ನಡ ಭಾಷೆ ಸಮೃದ್ಧವಾಗಿದ್ದರೂ ನೆಲ, ಜಲ, ಭಾಷೆ ಬಗ್ಗೆ ಚಿಂತನೆ ಮಾಡುವ ಮನಸ್ಸುಗಳ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು.
ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯ ಪ್ರಾರ್ಥನಾ ಮಂದಿರದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂದಿಂದ ಭಾನುವಾರ ಹಮ್ಮಿಕೊಂಡಿದ್ದ ಚಿಕ್ಕಬಳ್ಳಾಪುರ ಲೋಕಸಭಾ ೇತ್ರದ ದಲಿತ ಮತ್ತು ಬಂಡಾಯ ಸಾಹಿತ್ಯ ಸಮ್ಮೇಳನ, ಗ್ರಾಮಾಂತರ ಜಿಲ್ಲಾ ಉತ್ಸವ, ಜಿಲ್ಲಾ ದಲಿತಪರ ಹೋರಾಟಗಾರರ ಉತ್ಸವದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯದ ಬಗ್ಗೆ ಜನರಲ್ಲಿರುವ ಕೀಳಿರಿಮೆ ಹೋಗಲಾಡಿಸಬೇಕು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಮಾತನಾಡುವವರನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ೇತ್ರದ ದಲಿತ ಮತ್ತು ಬಂಡಾಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಹಿಂದಿನಿಂದಲೂ ದಲಿತರು, ಹಿಂದುಳಿದವರ ಶಿಕ್ಷಣ, ಉದ್ಯೋಗ ಸಮಾನತೆಗಾಗಿ ಶ್ರಮಿಸಿದ ಅನೇಕರು ಎಲ್ಲರಿಗೂ ಮಾದರಿಯಾಗಿದ್ದಾರೆ. ಶಿಕ್ಷಣದ ಮೂಲಕ ಸಮಾನತೆ ಸೃಷ್ಟಿಸಬೇಕಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉತ್ಸವಾಧ್ಯಕ್ಷ ಚಂದನೇಹಳ್ಳಿ ಮುನಿಯಪ್ಪ ಮಾತನಾಡಿ, ವಿಜಯಪುರ ಪಟ್ಟಣವು ವ್ಯಾಪಾರ, ಸಾಹಿತ್ಯ ಮತ್ತು ಸಾಂಸತಿಕವಾಗಿ ಸಾಕಷ್ಟು ಪ್ರಗತಿ ಹೊಂದಿದ್ದು, ಸರ್ಕಾರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ೂಷಿಸಬೇಕು ಎಂದರು.
ಜಿಲ್ಲಾ ದಲಿತಪರ ಹೋರಾಟಗಾರರ ಉತ್ಸವಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ, ದೇಶದಲ್ಲಿ ಸಮಾನತೆ, ಭ್ರಾತೃತ್ವದಂತಹ ಮೌಲ್ಯಗಳನ್ನು ಉಳಿಸುವಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಕೊಡುಗೆ ಅಪಾರ. ಅವರ ಮೌಲ್ಯಾದರ್ಶಗಳನ್ನು ಎಲ್ಲರೂ ಗೌರವಿಸಿ ಅಳವಡಿಸಿಕೊಳ್ಳಬೇಕು ಎಂದರು.
ವಚನಸಾಹಿತ್ಯದಲ್ಲಿ ದಲಿತ ಸಂವೇದನೆ ಕುರಿತು ವಿಷಯ ಮಂಡಿಸಿದ ನಿವೃತ್ತ ಉಪನ್ಯಾಸಕ ಹೊಸಕೋಟೆ ನಾರಾಯಣಸ್ವಾಮಿ, 12ನೇ ಶತಮಾನದಲ್ಲಿಯೇ ಸಿ ಸಮಾನತೆ, ಸಮಾನ ಶಿಕ್ಷಣದಂತಹ ಕಾರ್ಯಗಳನ್ನು ಮಾಡುವಲ್ಲಿ ಅನುಭವಮಂಟಪದ ಪಾತ್ರವು ಮಹತ್ವವಾಗಿತ್ತು. ಕಾಯಕ, ದಾಸೋಹದಂತಹ ಶರಣರ ಮೌಲ್ಯಗಳು ಸದಾ ಅನುಕರಣೀಯವಾದವು ಎಂದರು.
ಅಖಿಲ ಕರ್ನಾಟಕ ಮಿತ್ರ ಸಂದ ಅಧ್ಯಕ್ಷ ಚಿ.ಮಾ.ಸುಧಾಕರ್, ಸಂದ ಕಾರ್ಯಾಧ್ಯಕ್ಷ ವಿ.ವಿಶ್ವನಾಥ್, ಕಾರ್ಯದರ್ಶಿ ಆರ್.ಮುನಿರಾಜು ಇತರರಿದ್ದರು.
ಅವಮಾನ ದೌರ್ಜನ್ಯ ಅಭಿವ್ಯಕ್ತ
ಅವಮಾನಿತ ಅಕ್ಷರಸ್ಥ ಸಮುದಾಯವು ಸಹಜ, ಅನುಭವಗಳು, ಅವಮಾನ ದೌರ್ಜನ್ಯಗಳನ್ನು ಸ್ಪಷ್ಟವಾಗಿ ದಾಖಲಿಸಿ ಸಾಂಸತಿಕ ಮತ್ತು ಶೈಕ್ಷಣಿಕವಾಗಿ ಅಕ್ಷರದ ಮೂಲಕ ಅಭಿವ್ಯಕ್ತಪಡಿಸಿದ ದಲಿತ ಸಾಹಿತ್ಯವು ಸಾಹಿತ್ಯ ಸಿದ್ಧಭಾಷೆ, ನುಡಿಗಟ್ಟು, ವಸ್ತು, ಅನುಭವಗಳನ್ನು ಭಂಜಕಗೊಳಿಸಿತು ಎಂದು ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರೂ ಆದ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು.
ಸರ್ವೇ ನಂ. ಮಂತ್ರ ಒಳ್ಳೆಯದಲ್ಲ
ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣ ನಂತರ ದೇವನಹಳ್ಳಿ ತಾಲೂಕಿನಲ್ಲಿ ಕೇವಲ ಭೂಮಾಫಿಯಾ, ಸರ್ವೇ ನಂಬರ್ಗಳ ಮಂತ್ರವೇ ಕಾಣಿಸುತ್ತಿದೆ. ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಸ್ಮರಣೆ ಮಾಡಿಕೊಳ್ಳುತ್ತಿಲ್ಲ. ಸಮಾಜದಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವ ಗುಣ ಬೆಳೆಸಿಕೊಳ್ಳಲು ಬಸವಾದಿ ಶಿವಶರಣರ ವಚನಗಳು ದಿವ್ಯ ಔಷಧಗಳಾಗಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.