ನೆಮ್ಮದಿಗಾಗಿ ಆಧ್ಯಾತ್ಮಿಕ ಪ್ರವಚನ ಆಲಿಸಿ

Listen to spiritual discourse for peace.
ಬಸವನಬಾಗೇವಾಡಿ ಪಟ್ಟಣದ ಗೌರಿಶಂಕರ ದೇವಸ್ಥಾನದಲ್ಲಿ ಪ್ರವಚನ ಪ್ರಾರಂಭೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಈರಣ್ಣ ಪಟ್ಟಣಶೆಟ್ಟಿ, ಜಗದೀಶ ಕೊಟ್ರಶೆಟ್ಟಿ, ವೇ.ವೀರ ಗಂಗಾಧರಯ್ಯ ಕಾಳಹಸ್ತೇಶ್ವರಮಠ, ಶ್ರೀಶೈಲ ಮಠಪತಿ ಇತರರಿದ್ದರು.
Published on

ಬಸವನಬಾಗೇವಾಡಿ: ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ ಎಂದು ಸಹಕಾರ ಮಹಾ ಮಂಡಳದ ನಿರ್ದೆಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಗೌರಿಶಂಕರ ದೇವಸ್ಥಾನದ ಆವರಣದಲ್ಲಿ ಗೌರಿಶಂಕರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ 11 ದಿನಗಳ ಆಧ್ಯಾತ್ಮಿಕ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಚಿಂತೆ ಹೋಗಲಾಡಿಸಬಹುದು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಪ್ರತಿ ವರ್ಷ ಗೌರಿಶಂಕರ ಜಾತ್ರೆಯ ಅಂಗವಾಗಿ 11 ದಿನಗಳ ಕಾಲ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರವಚನದಲ್ಲಿ ಬಸವಾದಿ ಪ್ರಥಮರ ಆಚಾರ ವಿಚಾರಗಳನ್ನು ಆಲಿಸುವ ಮೂಲಕ ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪುರಸಭೆ ಸದಸ್ಯ ಅಶೋಕ ಹಾರಿವಾಳ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ ಚಿಂತನೆಗಳನ್ನು ತಿಳಿದುಕೊಳ್ಳಬಹುದು ಎಂದರು.

ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಪ್ರವಚನಕಾರರಾದ ರಾಚಯ್ಯ ಶಾಸೀಗಳು, ವೇ. ವೀರ ಗಂಗಾಧರಯ್ಯ ಕಾಳಹಸ್ತೇಶ್ವರಮಠ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಶೈಲ ಮಠಪತಿ, ಡಾ. ಬಸವರಾಜ ಕೋಟಿ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪ್ರವೀಣ ಪೂಜಾರಿ, ನಾಗರಾಜ ಪಡಶೆಟ್ಟಿ, ರವಿ ಚಿಕ್ಕೊಂಡ, ರಾಜು ಗಣಾಚಾರಿ, ಮಂಜು ಕಲಾಲ ನಿಂಗಪ್ಪ ಕುಳಗೇರಿ ಇತರರಿದ್ದರು.

ಶ್ರೀಕಾಂತ ಪಟ್ಟಣಶೆಟ್ಟಿ ಸ್ವಾಗತಿಸಿದರು, ಚಂದ್ರಶೇಖರ ಹದಿಮೂರ ನಿರೂಪಿಸಿದರು ಹಾಗೂ ಪಿ.ಎಸ್. ಬಾಗೇವಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net