ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಪ್ರಕಟ; ಉಪಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ

Vijayendra
Published on

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್​ಕಮಾರ್​ ಕಟೀಲ್​ ರಾಜ್ಯ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದ್ದಾರೆ.

ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಇದಲ್ಲದೇ, ಅರವಿಂದ ಲಿಂಬಾವಳಿ, ನಿರ್ಮಲ್​ಕುಮಾರ್​ ಸುರಾನಾ, ಸಂಸದೆ ಶೋಭಾ ಕರಂದ್ಲಾಜೆ, ಮಾಲೀಕಯ್ಯ ಗುತ್ತೇದಾರ್​, ತೇಜಶ್ವಿನಿ ಅನಂತಕುಮಾರ್​, ಪ್ರತಾಪ್​ ಸಿಂಹ, ಎಂ.ಬಿ. ನಂದೀಶ್​, ಎಂ.ಶಂಕರಪ್ಪ, ಎಂ. ರಾಜೇಂದ್ರ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳು: ಎನ್​. ರವಿಕುಮಾರ್​, ಸಿದ್ದರಾಜು, ಅಶ್ವತ್ಥನಾರಾಯಣ್​, ಮಹೇಶ್​ ಟೆಂಗಿನಕಾಯಿ.

ರಾಜ್ಯ ಕಾರ್ಯದರ್ಶಿಗಳು: ಸತೀಶ್​ ರೆಡ್ಡಿ, ತುಳಸಿ ಮುನಿರಾಜು ಗೌಡ, ಎಸ್​. ಕೇಶವಪ್ರಸಾದ್​, ಜಗದೀಶ್​ ಹಿರೇಮನಿ, ಸುಧಾ ಜಯರುದ್ರೇಶ್​, ಭಾರತಿ ಮಗ್ದುಂ, ಹೇಮಲತಾ ನಾಯಕ್​, ಉಜ್ವಲಾ ಬಡವಣ್ಣಾಚೆ, ಕೆ.ಎಸ್​. ನವೀನ್​, ವಿನಯ್​ ಬಿದರೆ.

ಖಜಾಂಚಿಗಳು: ಸುಬ್ಬನರಸಿಂಹ, ಲೆಹರ್​ಸಿಂಗ್​ ಸಿರೊಯ.

ರಾಜ್ಯ ಕಾರ್ಯಾಲಯ ಕಾರ್ಯದರ್ಶಿ:ಲೋಕೇಶ್​ ಅಂಬೇಕಲ್ಲು.

ರಾಜ್ಯ ವಕ್ತಾರರು: ಗಣೇಶ್​ ಕಾರ್ಣಿಕ್​. ಪ್ರಕೋಷ್ಠ ಸಂಯೋಜಕರು: ಎಂ.ಬಿ. ಭಾನುಪ್ರಕಾಶ್​, ಡಾ.ಎ.ಎಚ್​. ಶಿವಯೋಗಿಸ್ವಾಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net