

ಬೆಂಗಳೂರು: ಅಬಕಾರಿ ಸಚಿವರನ್ನು ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.20 ರಂದು ಮದ್ಯದಂಗಡಿ ಬಂದ್(
Liquor shop bandh)ಗೊಂದಲದ ಗೂಡಾಗಿದೆ.ಮದ್ಯಮಾರಾಟಗಾರರ ಸಂಘ ಬಂದ್‌ಗೆ ಕರೆ ನೀಡಿದ್ದರೆ, ಕರ್ನಾಟಕ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಅದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ಬಳಿಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಲಾಖೆಯಲ್ಲಿ ಮಿತಿ ಮೀರಿದ ಲಂಚಕ್ಕೆ ಕಡಿವಾಣ ಕಡಿವಾಣ ಹಾಕಬೇಕು. ಅಧಿಕಾರಿಗಳ ವರ್ಗಾವಣೆಗೆ ಕೋಟ್ಯಂತರ ವಸೂಲಿ ಮಾಡುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸನ್ನದುದಾರರಿಗೆ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂಬುವುವು ಸೇರಿದಂತೆ ನಾನಾ ಬೇಡಿಕೆಗಳನ್ನು ನ.20ರೊಳಗೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಮದ್ಯ ಮಾರಾಟಗಾರರ ಸಂಘ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲಿ ಎಸಿಎಸ್ ಎಲ್.ಕೆ.ಅತೀಕ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಜಾರ್ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸಿದರು.
ಸಂಘಗಳ ಬೇಡಿಕೆ ಕುರಿತು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲಾಗುವುದು. ಅವರ ಜತೆ ಇನ್ನೊಂದು ಸಭೆ ನಡೆಸಿ ತರುವಾಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಿ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
-ಅಮಾನತಾದ ಅಧಿಕಾರಿಗಳಿಗೆ ಲಾಭದಾಯಕ ಹುದ್ದೆ ನೀಡಬಾರದು.
-3 ವರ್ಷ ಕಾಲ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು.
-ಸನ್ನದುದಾರರ ಜತೆ ದುವರ್ತನೆ ತೋರುತ್ತಿರುವ ಕೊಪ್ಪಳ, ಕೋಲಾರ, ವಿಜಯಪುರದ ಅಬಕಾರಿ ನಿರೀಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಚಿಲ್ಲರೆ ಮದ್ಯಮಾರಾಟದ ಮೇಲೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು.
-ಹೆಚ್ಚುವರಿ ಅಬಕಾರಿ ಶುಲ್ಕ ಇಳಿಸಬೇಕು.
-3-4 ದಿನ ಸರ್ಕಾರಿ ರಜೆ ಇರುವ ದಿನಗಳಿಂದು ಕೆಎಸ್‌ಬಿಸಿಎಲ್‌ನವರು ಟಿಓಡಿ ರೀತಿಯಲ್ಲಿ ಮದ್ಯ/ಬಿಯರ್ ಒದಗಿಸಬೇಕು.
ಬೇಡಿಕೆ ಈಡೇರಿಕೆಗೆ ಗಡುವು ನೀಡಿ ನಾವು ಈಗಾಗಲೇ ಬಂದ್‌ಗೆ ಕರೆ ನೀಡಿದ್ದೇವೆ. ಈ ಬಗ್ಗೆ ಸ್ವಲ್ಪ ಗೊಂದಲವಿದೆ. ಹಾಗಾಗಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ ಬಳಿಕ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ.
-ಎಸ್.ಗುರುಸ್ವಾಮಿ, ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ.
ಬಂದ್ ಬಗ್ಗೆ ಏಕಾಏಕಿ ನಿರ್ಧಾರ ಮಾದ್ದಾರೆ. ನ.20ಕ್ಕೆ ಬಂದ್ ಮಾಡುವುದಾಗಿ ಹೇಳಿದ್ದಾರೆ. ನಮ್ಮ ಜತೆ ಚರ್ಚೆ ನಡೆಸದೆ ಗುರುಸ್ವಾಮಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಸಂಘಗಗಳನ್ನೂ ವಿಶ್ವಾಸಕ್ಕೆ ಪಡೆದಿಲ್ಲ. ಮದ್ಯದಂಗಡಿಗಳ ಬಂದ್‌ಗೆ ನಾವು ಸಹಕಾರ ನೀಡುವುದಿಲ್ಲ.
-ಹೊನ್ನಗಿರಿಗೌಡ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವೈನ್ ಮರ್ಚಂಟ್ಸ್ ಅಸೋಸಿಯೇಷನ್.