ಡೋಲಿನಲ್ಲಿಟ್ಟು ಮದ್ಯ ಸಾಗಾಟ

page 6 5
Published on

ಮೈಸೂರು/ಬೆಳಗಾವಿ/ಬಾಗಲಕೋಟೆ: ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ಡೋಲಿನಲ್ಲಿ ಮದ್ಯದ ಬಾಟಲಿಗಳನ್ನು ತುಂಬಿ ಸಾಗಣೆ ಮಾಡುತ್ತಿದ್ದ ಎನ್.ಬೆಳ್ತೂರು ನಿವಾಸಿಗಳಾದ ಚೆಲá-ವರಾಜು, ಮಂಜು ಎಂಬುವರನ್ನು ಬಂಧಿಸಲಾಗಿದೆ. ಇವರು ಆನೆ ಮಾಳದಿಂದ ಎನ್.ಬೆಳ್ತೂರಿಗೆ ಮದ್ಯ ಸಾಗಣೆ ಮಾಡá-ತ್ತಿದ್ದರು. ಉದ್ಬೂರು ಚೆಕ್​ಪೋಸ್ಟ್ ಬಳಿ ಆರೋಪಿಗಳನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ ಸಂದರ್ಭ ಡೋಲಿನಲ್ಲಿ ಮದ್ಯ ತುಂಬಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಗಳು 20 ದಿನಗಳಿಂದ ಡೋಲಿನಲ್ಲಿ ಮದ್ಯ ತುಂಬಿ ಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ.

ಬೆಳಗಾವಿಯಲ್ಲಿ ಐವರ ಬಂಧನ: ಗೋವಾ ರಾಜ್ಯದಿಂದ ಅಕ್ರಮವಾಗಿ ಬಟ್ಟಿ ಮದ್ಯವನ್ನು ಹಾಲಿನ ಟ್ಯಾಂಕರ್​ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ.

ಮದ್ಯ ಮಾರಾಟ ಮಾಡಿ: ರಾಜ್ಯದಲ್ಲಿ ಕರೊನಾ ಮಹಾಮಾರಿಗಿಂತ ಮದ್ಯ ಸಿಗದೆ ಮೃತಪಟ್ಟಿರುವ ಸಂಖ್ಯೆ ಜಾಸ್ತಿ ಇದೆ. ಮದ್ಯ ಸೇವಿಸá-ವವರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಅವರದೂ ಜೀವ ಅಲ್ಲವೆ? ಎಂದು ಮಾಜಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಬಾಗಲಕೋಟೆಯಲ್ಲಿ ಆಗ್ರಹಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಎಂಎಸ್​ಐಎಲ್ ಮದ್ಯದಂಗಡಿ ಗಳನ್ನು ತೆರೆಯಲು ಸರ್ಕಾರಕ್ಕೆ ಯಾವುದೇ ರೀತಿ ಪ್ರಸ್ತಾವನೆ ಸಲ್ಲಿಸಿಲ್ಲ. ಇನ್ನೆರೆಡು ದಿನಗಳಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಮದ್ಯವ್ಯಸನಿಗಳು ಆತ್ಮಹತ್ಯೆ ಹಾದಿ ತುಳಿಯಬಾರದು. | ಎಚ್.ನಾಗೇಶ್ ಅಬಕಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net