Liquor Ban : ಈ ಊರಿಲ್ಲಿ ಕಂಠ ಪೂರ್ತಿ ಕುಡಿದು ಬಂದ್ರೆ ಬೀಳುತ್ತೆ ಚಪ್ಪಲಿ ಏಟು, 50 ಸಾವಿರ ರೂ. ದಂಡ! ಮಾರಾಟಗಾರರ ಸುಳಿವು ಕೊಟ್ಟ್ರೆ ಭಾರಿ ಬಹುಮಾನ

Liquor Ban
Published on

ತೆಲಂಗಾಣ: ಹಳ್ಳಿಯೊಂದು ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ( Liquor Ban ). ಮದ್ಯ ನಿಷೇಧ ( Ban ) ಜಾರಿಗೆ ಗ್ರಾಮಸ್ಥರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ತೆಲಂಗಾಣದ ಹೈದರಾಬಾದ್‌ಗೆ ಹತ್ತಿರದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಸಮೀಪದ ಕಿಶನ್ ನಗರ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಹಳ್ಳಿಯೊಂದು ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಷೇಧದ ಅನ್ವಯ ಯಾರಾದರೂ ಮದ್ಯ ಸೇವಿಸಿದರೆ ಅಥವಾ ಮಾರಾಟ ಮಾಡಿದರೆ ಅವರಿಗೆ ರೂ. 50,000 ದಂಡ ವಿಧಿಸಲಾಗುವುದು. ನಿಷೇಧಾಜ್ಞೆ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಅದರಲ್ಲೂ ಮದ್ಯ ಸೇವಿಸುವವರಿಗೆ ಚಪ್ಪಲಿಯಿಂದ ಹೊಡೆಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮದ್ಯ ಮಾರಾಟ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮದ್ಯ ಯಾರಾದರೂ ಮದ್ಯ ಮಾರಾಟ ಮಾಡುವವರು ಅಥವಾ ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದರೆ ರೂ. 1,000 ಬಹುಮಾನ ನೀಡಲಾಗುವುದು. ಗ್ರಾಮದಾದ್ಯಂತ ನಿಷೇಧಾಜ್ಞೆ ಘೋಷಿಸುವ ಬ್ಯಾನರ್‌ಗಳನ್ನು ಹಾಕಲಾಗಿದೆ. ಈ ಬ್ಯಾನರ್‌ಗಳ ಅಡಿಯಲ್ಲಿ ಮದ್ಯಪಾನ ಮಾಡುವ ಅಥವಾ ಮಾರಾಟ ಮಾಡುವವರಿಗೆ ದಂಡ ಮತ್ತು ಇತರ ಶಿಕ್ಷೆಯ ವಿವರಗಳನ್ನು ನಮೂದಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಮದ್ಯ ಸೇವನೆಯಿಂದ ಗ್ರಾಮದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ. ಮದ್ಯ ಸೇವಿಸಿ ಜಗಳ, ಕೌಟುಂಬಿಕ ಸಮಸ್ಯೆ, ಆರ್ಥಿಕ ಮುಗ್ಗಟ್ಟಿನಂಥ ಸಮಸ್ಯೆಗಳು ಗ್ರಾಮಸ್ಥರನ್ನು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು, ಯುವಕರು ಈ ನಿಷೇಧಕ್ಕೆ ಬೆಂಬಲ ಸೂಚಿಸಿ ಸಂಪೂರ್ಣ ಮದ್ಯಪಾನ ನಿಷೇಧಿಸಲು ನಿರ್ಧರಿಸಿದ್ದಾರೆ. ಈ ಕ್ರಮಗಳು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಲು ಮತ್ತು ಗ್ರಾಮದಲ್ಲಿ ಶಿಸ್ತು ಮರುಸ್ಥಾಪಿಸುವ ಪ್ರಯತ್ನವಾಗಿದೆ ಎಂಬುದು ಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net