ಲಯನ್ಸ್ ಕ್ಲಬ್‌ನಿಂದ ಇಂಜಿನಿಯರ್‌ಗಳಿಗೆ ಸನ್ಮಾನ

27-RNR-06
Published on

ರಾಣೆಬೆನ್ನೂರ: ಇಲ್ಲಿಯ ಲಯನ್ಸ್ ಕ್ಲಬ್ ವತಿಯಿಂದ ನಗರದ ಲಯನ್ಸ್ ಶಾಲೆಯಲ್ಲಿ ಇತ್ತೀಚೆಗೆ ಇಂಜಿನಿಯರ್ ದಿನ ಆಚರಿಸಲಾಯಿತು.
ಕ್ಲಬ್‌ನ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಇಂಜಿನಿಯರ್ ದಿನಾಚರಣೆ ನಿಮಿತ್ತ ನಗರದ ವಿವಿಧ ವಿಭಾಗದ ಇಂಜಿನಿಯರ್‌ನ್ನು ಸನ್ಮಾನಿಸಲಾಯಿತು.
ಕ್ಲಬ್‌ನ ರೆನ್ ಚೇರ್ಮನ್ ಟಿ. ವೀರಣ್ಣ, ಪ್ರಮುಖರಾದ ಕೆ.ವೈ. ಬಾಜಿರಾಯರ, ಎಂ.ಎಸ್. ಅರಕೇರಿ, ಕಿರಣಕುಮಾರ ಅಂತರವಳ್ಳಿ, ಗುತ್ತೆಪ್ಪ ಹಳೇಮನಿ, ರಾಮಪ್ಪ ಬಜಾರಿ, ಮಹಾಬಲೇಶ್ವರ ಡಿ.ಸಿ., ಮರಿಸ್ವಾಮಿ, ರಮೇಶ ನಾಯ್ಕ, ಮಹೇಶ ಕಲಾಲ, ಮಧುಚಂದ್ರ ಕೋಳಿವಾಡ, ಅಮೋಘ ಬದಾಮಿ, ರಶ್ಮೀ ಜಿ.ಎಂ., ಪ್ರಕಾಶ ಗುಡುಮಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net