VIDEO| ಸಿಂಹಕ್ಕೆ ನೀರು ಕುಡಿಸಿದ ಯುವಕ: ಈತನ ಧೈರ್ಯಕೆ ನೀವು ಏನು ಹೇಳುತ್ತೀರಾ..?

viral Video
Published on

ನವದೆಹಲಿ: ದೂರದಿಂದ ಸಿಂಹವನ್ನು ಕಂಡರೆ ನಮಗೆ ಭಯ. ಸಿಂಹದ ಹೆಜ್ಜೆ ಗುರುತು ಹಾಗೂ ಎಲ್ಲೋ ಸಿಂಹ ಕುಳಿತು ಘರ್ಜಿಸಿದರೆ ನಮಗೆ ಇದ್ದಲ್ಲಿಯೇ ನಡುಕ ಶುರುವಾಗುತ್ತದೆ. ಆದರೆ ಇಲ್ಲೊಬ್ಬ ಸಿಂಹದ ಜತೆ ನಡೆದುಕೊಂಡ ರೀತಿ ಧೈರ್ಯ ಮತ್ತು ದಯೆಗೆ ನೆಟ್ಟಿಗರು ಬೆರಗಾಗಿದ್ದಾರೆ.

ಸಿಂಹ ಅಪಾಯಕಾರಿ ಪ್ರಾಣಿ. ಇದ್ದಕ್ಕಿದ್ದಂತೆ ಮನುಷ್ಯರ ಮೇಲೆ ದಾಳಿ ಮಾಡಿ ಪ್ರಾಣ ತೆಗೆಯುತ್ತವೆ. ಅವರನ್ನು ಎದುರಿಸುವುದೇ ದೊಡ್ಡ ಸಾಹಸ. ಆದರೆ ಒಬ್ಬ ವ್ಯಕ್ತಿ ರಿಸ್ಕ್ ತೆಗೆದುಕೊಂಡು ಬಾಟಲಿಯಿಂದ ಸಿಂಹಕ್ಕೆ ನೀರು ನೀಡಿದ್ದಾರೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಈ ಗ್ರಹದಲ್ಲಿ ಮ್ಯಾಜಿಕ್ ಇದ್ದರೆ ಅದು ನೀರಿನಲ್ಲಿದೆ' ಎಂಬ ಶೀರ್ಷಿಕೆಯೊಂದಿಗೆ ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆತಂಕ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಭಯಪಡುವವರ ಮಧ್ಯೆ ವ್ಯಕ್ತಿಯೊಬ್ಬ ಸಿಂಹಕ್ಕೆ ಬಾಟಲಿಯಿಂದ ನೀರು ಕೊಟ್ಟು ಬಾಯಾರಿಕೆ ನೀಗಿಸಿದ್ದಾರೆ. ಅವರ ಧೈರ್ಯ ಮತ್ತು ದಯೆಯಿಂದ ನೆಟ್ಟಿಗರು ಮೆಚ್ಚಗೆ ಸೂಚಿಸಿ ಕಾಮೆಂಟ್​​​ ಮಾಡುತ್ತಿದ್ದಾರೆ.

ನೆಟ್ಟಿಗರೊಬ್ಬರು ಒಬ್ಬರು ಕಾಮೆಂಟ್ ಮಾಡಿ, 'ನಾವು ಪ್ರಕೃತಿಯ ಭಾಗವಾಗಿದ್ದೇವೆ.. ಇದು ಪರಸ್ಪರ ನಂಬಿಕೆಯ ಪ್ರತಿಬಿಂಬ'. ಆದರೆ ಪ್ರಾಣಿಗಳು ಯಾವಾಗ ಮತ್ತು ಹೇಗೆ ವರ್ತಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅಂತಹ ವಿಷಯಗಳಿಗೆ ಎಚ್ಚರಿಕೆಯ ಅಗತ್ಯವಿರುತ್ತದೆ. ಸಿಂಹದ ದಾಹ ನೀಗಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಆ ವ್ಯಕ್ತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net