ಲೈಂಗಿಕ ಕ್ರಿಯೆಗೆ ಅಡ್ಡಿ?; ಬಾಲಕನ ಮೇಲೆ ಸಿಂಹಗಳ ದಾಳಿ

lions
Published on

ಅಹಮದಾಬಾದ್​: ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಅಡ್ಡಿಪಡಿಸಿದ್ದಕ್ಕಾಗಿ ಸಿಂಹಗಳು 15 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುಜರಾತಿನ ಗಿರ್​ ಅಭಯಾರಣ್ಯದಲ್ಲಿ ನಡೆದಿದೆ.

ಸಿಂಹಗಳ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ವಿಕ್ರಂ ಚಾವ್ಡಾ(15) ಎಂದು ಗುರುತಿಸಲಾಗಿದ್ದು, ಘಟನೆಯೂ ಜುನಾಗಢ್ ಜಿಲ್ಲೆಯ​ ವಿಶ್ವದಾರ್​ ತಾಲ್ಲೂಕಿನ ಬಗೋಯಾ ಗ್ರಾಮದಲ್ಲಿ ನಡೆದಿದೆ.

lions

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ(ಉಪ) ಪ್ರಶಾಂತ್​ ತೋಮರ್ ವಿಕ್ರಂ ಎಂದಿನಂತೆ ದನ ಮೇಯಿಸಿದ ಬಳಿಕ ಜಾನುವಾರುಗಳ ಜೊತೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸಿಂಹಗಳೆರಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದವು. ಈ ವೇಳೆ ತಮ್ಮ ಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಭಾವಿಸಿ ವಿಚಲಿತರಾದ ಸಿಂಹಗಳು ಏಕಾಏಕಿ ಬಾಲಕನ ಮೇಲೆ ಹಿಂಬದಿಯಿಂದ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ.

ಬಾಲಕನ ಮೇಲೆ ಸಿಂಹಗಳು ದಾಳಿ ಮಾಡಿರುವುದನ್ನು ಗಮನಿಸಿದ ಆತನ ಜೊತೆ ಇದ್ದವರು ರಕ್ಷಣೆಗೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಿಪ್​ ಮತ್ತು ಬೆನ್ನಿನ ಭಾಗದಲ್ಲಿ 8 ಹೊಲಿಗೆಗಳನ್ನು ಹಾಕಲಾಗಿದ್ದು, ಗಾಯಾಳುವನ್ನು ಜುನಾಗಢದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ(ಉಪ) ಪ್ರಶಾಂತ್​ ತೋಮರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net