ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್ ಇಂದಿನಿಂದ

Global Conclave
Published on

ಮೈಸೂರು: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯಿಂದ (ಐಎಲ್​ವೈಎಫ್) ನಗರದಲ್ಲಿ ಮೂರು ದಿನ ಆಯೋಜಿಸಿರá-ವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್-2025’ಕ್ಕೆ 17ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ.

‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ ಈ ಸಮಾವೇಶ, ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆ. ಸಮಾವೇಶಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳಿಗೆಗಳ ನಿರ್ವಣ, ವೇದಿಕೆ, ಪ್ರವೇಶದ್ವಾರ ನಿರ್ಮಾಣ ಸೇರಿ ಎಲ್ಲ ಕೆಲಸವೂ ಪೂರ್ಣಗೊಂಡಿದೆ.

17ರಂದು ಬೆಳಗ್ಗೆ 10.30ಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾನ್​ಕ್ಲೇವ್​ಗೆ ಚಾಲನೆ ನೀಡಲಿದ್ದಾರೆ. ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಎಚ್.ಎಂ. ಗಣೇಶ್, ಮೈಕ್ರೋ ಸ್ಮಾಲ್ ಮತ್ತು ಮೀಡಿಯಂ ಎಂಟರ್​ಪ್ರೖೆಸಸ್​ನ ನಿರ್ದೇಶಕ ನಿತೇಶ್ ಪಾಟೀಲ್, ರಾಷ್ಟ್ರೀಯ ಹಸಿರು ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ಫೆಡರೇಷನ್ ಆಫ್ ಇಂಡಸ್ಟ್ರಿಸ್ ಆಫ್ ಇಂಡಿಯಾದ ಅಧ್ಯಕ್ಷ ಬಾಲಚಂದ್ರರಾವ್​ರಾಣೆ, ಆದರ್ಶ್ ಗ್ರೂಪ್​ನ ಸಂಸ್ಥಾಪಕ ಬಿ.ಎಂ. ವಿಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನ 2.30ಕ್ಕೆ ಆಯೋಜಿಸಿರುವ ವಿಚಾರಗೋಷ್ಠಿಯಲ್ಲಿ ಸಣ್ಣ ಕೈಗಾರಿಕೆ ಮತ್ತು ಕುಟುಂಬ ಉದ್ಯಮ ಕುರಿತು ಜ್ಯೋತಿ ಲ್ಯಾಬೊರೇಟರಿಸ್​ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಮಾತನಾಡಲಿದ್ದಾರೆ. ಸಂಜೆ 6.30ಕ್ಕೆ ನಟ ಧನಂಜಯ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ಗಾಯಕ ವಾಸುಕಿ ವೈಭವ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ನೂರಕ್ಕೂ ಹೆಚ್ಚು ವೈದ್ಯರು ಭಾಗಿ: ಜ.18ರಂದು ಬೆಳಗ್ಗೆ 10.30ರಿಂದ ಹೆಲ್ತ್ ಸಮಿಟ್- ವೈದ್ಯೕಯ ನಾಯಕತ್ವ ಕುರಿತು ವಿಚಾರಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ. ಎಂ.ಎಸ್. ರಾಮಯ್ಯ ಸ್ಮಾರಕ ಆಸ್ಪತ್ರೆ ಅಧ್ಯಕ್ಷ ಡಾ.ನಾಗೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಜೆಎಸ್​ಎಸ್ ವಿವಿ ಕುಲಪತಿ ಡಾ.ಬಸವನಗೌಡಪ್ಪ, ಉದ್ಯಮಿ ಡಾ.ವಿವೇಕ್ ಜವಳಿ, ಬೀದರ್ ಜಿಪಂ ಸಿಇಒ ಡಾ.ಗಿರೀಶ್ ದಿಲೀಪ್ ಬದೋಲೆ, ಕೆಪಿಎಸ್​ಸಿ ಸದಸ್ಯ ಡಾ.ಎಚ್.ಎಸ್. ನರೇಂದ್ರ ಭಾಗವಹಿಸಲಿದ್ದಾರೆ. ಮಹಿಳಾ ಉದ್ಯಮಶೀಲತೆ ವಿಷಯದಲ್ಲಿ ಉದ್ಯಮಿ ವೈಖಾಲಿ ಹನುಮಂತ್, ವರ್ಷಾ ಶ್ರೀಕಂಠಸ್ವಾಮಿ, ತೀರ್ಥಸ್ವಾಮಿ ಭಾಗವಹಿಸಲಿದ್ದಾರೆ. 19ರಂದು ಬೆಳಗ್ಗೆ 11ರಿಂದ ಎಫ್​ಎಂಸಿಸಿ ಮತ್ತು

ಎಸ್​ಕೆಯುಗಳಲ್ಲಿ ಆಕರ್ಷಕ ವಿನ್ಯಾಸ ಮತ್ತು ವಿನೂತನ ಪ್ಯಾಕೇಜ್​ಗಳ ಪ್ರಾಮá-ಖ್ಯತೆ ಕá-ರಿತು ಉದ್ಯಮಿಗಳಾದ ಅನಿತ್ ಸಿದ್ದೇಶ್ವರ, ಎಂ.ಎಸ್. ಮೋಹನ್, ಸುನೀಲ್ ನಗಾತನ್, ಕಲ್ಯಾಣ್ ಮುಖರ್ಜಿ ಮಾತನಾಡಲಿದ್ದಾರೆ. ಬಳಿಕ ಕಬ್ಬು ಉದ್ಯಮದಲ್ಲಿ ವಿನೂತನ ಅವಕಾಶಗಳು ಕುರಿತು ವಿಜಯ್ ಎಂ. ನಿರಾಣಿ, ಮುಂದಿನ ಪೀಳಿಗೆಯ ನಾಯಕರ ಸಬಲೀಕರಣ ಕುರಿತು ಡಿ.ಎಸ್. ಮಲ್ಲಿಕಾರ್ಜುನ, ಬಿ. ಶಿವಶಂಕರ್, ಡಾ.ಎಂ.ಎನ್. ಭೀಮೇಶ್ ಭಾಷಣ ಮಾಡಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಈಶ್ವರ ಖಂಡ್ರೆ, ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಯದá-ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇತರರು ಭಾಗವಹಿಸಲಿದ್ದಾರೆ.

150ಕ್ಕೂ ಹೆಚ್ಚು ಮಳಿಗೆ: 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಾರಿಗೆ, ಸಣ್ಣ, ಗುಡಿ ಕೈಗಾರಿಕೆ, ರಿಯಲ್ ಎಸ್ಟೆಲ್, ಕಟ್ಟಡ, ಬಂಡವಾಳ ಹೂಡಿಕೆ, ಆಹಾರ ಮಳಿಗೆ ಮೊದಲಾದ ಮಾಹಿತಿ ದೊರೆಯಲಿದೆ. ರಾಜ್ಯ ಮಾತ್ರವಲ್ಲದೆ ಅನ್ಯರಾಜ್ಯಗಳಿಂದ ಆಗಮಿಸá-ವ ತಜ್ಞರು, ನುರಿತ ಉದ್ಯಮಿಗಳು ತಮ್ಮ ಅನá-ಭವ ಹಂಚಿಕೊಳ್ಳಲಿದ್ದಾರೆ. ಕಾನ್​ಕ್ಲೇವ್​ನಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಸಣ್ಣ ಹಾಗೂ ಗುಡಿ ಕೈಗಾರಿಕೆ ಮತ್ತು ಮೈಸೂರಿನ ಸಾಂಸ್ಕೃತಿಯ ನೆಲೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಕ್ರಾಂತಿಕಾರಿ ಭವಿಷ್ಯದ ಬಗ್ಗೆ ಭಾಷಣ: 18ರಂದು ಸಂಜೆ 4 ಗಂಟೆಗೆ ‘ತಮ್ಮ ದೃಷ್ಟಿಯಲ್ಲಿ ಕ್ರಾಂತಿಕಾರಿ ಭವಿಷ್ಯ’ ಕುರಿತು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಮಾತನಾಡಲಿದ್ದಾರೆ.

ಸಮಾವೇಶವು ಬ್ರ್ಯಾಂಡ್ ಮೈಸೂರು ಮಾಡಲು ಸಹಕಾರಿಯಾಗಲಿದೆ. ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ದೇಶದ ವಿವಿಧ ಭಾಗಗಳಿಂದ ಬರುವ ಉದ್ಯಮಿಗಳು, ವೃತ್ತಿಪರರನ್ನು ಭೇಟಿ ಮಾಡಲು ಸಹಾಯವಾಗಲಿದೆ.

| ಬಿ.ಎಸ್. ಪ್ರಶಾಂತ್ ಐಲೈಫ್ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್-2025ರ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net