Lightning: ಮಳೆಯೊಂದಿಗೆ ಬಡಿದ ಸಿಡಿಲು ನೋಡಿದ್ರೆ ನಡುಗುತ್ತೀರಿ.. ಇಷ್ಟಕ್ಕೂ ಇದು ನಡೆದಿದ್ದಾದರೂ ಎಲ್ಲಿ ಗೊತ್ತಾ?

Lightning
Published on

ಚೆನ್ನೈ: ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಕರ್ನಾಟಕದ ಮೇಲೂ ಬಿದ್ದಿದೆ. ಆದರೆ ರಾಜಧಾನಿ ಚೆನ್ನೈನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಚೆನ್ನೈನಲ್ಲಿ ಮಳೆಯೊಂದಿಗೆ ಗುಡುಗು, ಮಿಂಚು(Lightning) ಆರ್ಭಟ ಹೆಚ್ಚಾಗಿದ್ದು, ಭೂಮಿಯಿಂದ ಆಕಾಶದೆತ್ತರಕ್ಕೆ ಕಂಡುಬಂದ ಸಿಡಿಲು ಭಯ ಹುಟ್ಟಿಸುತ್ತದೆ.

ಚೆನ್ನೈನಲ್ಲಿ ಕಂಡು ಬಂದ ಮಿಂಚಿನ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್​ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಆ ವೀಡಿಯೋ ಹಲವರ ಎದೆ ನಡುಗಿಸುವಂತಿದೆ.

ವೀಡಿಯೋವನ್ನು ಟ್ವಿಟರ್‌ನಲ್ಲಿ common_man_IN ಅವರು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ ಪ್ರಕಾರ, ಗುಡುಗು ಮಿಂಚಿನಿಂದ ಕೂಡಿದ ಆಕಾಶವು ಭೂಮಿಯಿಂದ ಆಕಾಶದೆತ್ತರಕ್ಕೆ ಬೆಂಕಿಯ ಜ್ವಾಲೆಗಳು ಚಾಚಿದಂತೆ ಬಾಸವಾಗುತ್ತಿದೆ. ಇನ್ನೊಂದೆಡೆ ಭಯವೂ ಉಂಟು ಮಾಡುತ್ತಿದೆ. ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.

ಈ ವೈರಲ್ ವೀಡಿಯೋವನ್ನು ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ``ತುಂಬಾ ಚೆನ್ನಾಗಿ ಸೆರೆಹಿಡಿಯಲಾಗಿದೆ'', ``ಇದು ನಿಜವೇ? ಎಐ ವೀಡಿಯೋ ಇರಬಹುದೇ'', `ಪ್ರಕೃತಿ ಎಷ್ಟು ಸುಂದರವೋ ಅಷ್ಟೇ ಭಯಾನಕವಾಗಿದೆ'', ``ಈ ವೀಡಿಯೋ ನೋಡಿದಾಗ ನನಗೆ ಭಯ ಮತ್ತು ಆನಂದ ಒಂದೇ ಬಾರಿ ಆಗುತ್ತಿದೆ'', `ಆ ದೃಶ್ಯಗಳನ್ನು ಲೈವ್ ಆಗಿ ನೋಡುವವರಿಗೆ ಎಷ್ಟು ಭಯವಾಗಿರಬೇಡ'' ಎಂದು ನೆಟಿಜನ್‌ಗಳು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net