ಐಶ್ ಅತ್ತಿಗೆ ಕೂಡ ಬ್ಯೂಟಿ, ಸ್ಟೈಲ್ ನಲ್ಲಿ ಕಡಿಮೆ ಇಲ್ಲ; ಶ್ರೀಮಾ ಅಂದಕ್ಕೆ ಫ್ಯಾನ್ಸ್‌ ಕ್ಲೀನ್ ಬೋಲ್ಡ್

aish (1)
Published on

ಮುಂಬೈ: ನಟಿ ಐಶ್ವರ್ಯಾ ರೈ ಜನಪ್ರಿಯತೆ ಬಗ್ಗೆ ನಾವು ಹೆಚ್ಚೇನೂ ಹೇಳಬೇಕಿಲ್ಲ ಅಲ್ಲವೇ...ಆದರೆ ಐಶ್ ಅತ್ತಿಗೆ ಕೂಡ ಸೌಂದರ್ಯ ಮತ್ತು ಸ್ಟೈಲ್ ನಲ್ಲಿ ಕಡಿಮೆ ಇಲ್ಲ. ಹೌದು, ಅವರ ಇತ್ತೀಚಿನ ಹಾಟ್​​​​ ಫೋಟೋಗಳನ್ನು ನೋಡಿದರೆ ನಿಮಗೆ ಹಾಗನಿಸದೆ ಇರಲಾರದು.

ಕೆಲವು ದಿನಗಳ ಹಿಂದೆ ಐಶ್ ಅತ್ತಿಗೆ ಶ್ರೀಮಾ ರೈ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬಹಳ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಕೆಂಪು ದಿರಿಸು ಧರಿಸಿ ಬಹಳ ಅದ್ಭುತವಾಗಿ ಕಾಣುತ್ತಿದ್ದರು. ವಧುಗಳು ಸಹ ನಾಚಿ ನೀರಾಗುವಂತೆ ಕಾಣುತ್ತಿದ್ದ ಶ್ರೀಮಾ ಲೆಹೆಂಗಾ, ಹೇರ್​​​ಸ್ಟೈಲ್, ಮೇಕ್ಅಪ್ ಎಲ್ಲವೂ ಪರ್​​​ಫೆಕ್ಟ್ ಆಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಫೋಟೋಗಳಲ್ಲಿ ಐಶ್ವರ್ಯಾ ಅವರ ಅತ್ತಿಗೆ ಕೆಂಪು ಲೆಹೆಂಗಾವನ್ನು ಧರಿಸಿರುವುದನ್ನು ಕಾಣಬಹುದು, ಅವರ ಸ್ಕರ್ಟ್‌ಗೆ ಎ-ಕಟ್ ಆಕಾರವನ್ನು ನೀಡಲಾಗಿತ್ತು. ಒಟ್ಟಾರೆ ಚಿನ್ನದ ಎಳೆಗಳಿಂದ ಕಸೂತಿ ಮಾಡಲಾಗಿತ್ತು. ಕೆಂಪು ಬಣ್ಣದ ಗೋಲ್ಡನ್ ವರ್ಕ್ ಹೈಲೆಟ್​​​ ಆಗಿದ್ದು, ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿತ್ತು.

ಲೆಹೆಂಗಾ ಸ್ಕರ್ಟ್​​​ಗೆ ಮ್ಯಾಚಿಂಗ್ ಬ್ಲೌಸ್ ಇತ್ತು. ಹಾಫ್​​​ ಸ್ಲೀವ್ಸ್​​​​ ಇದ್ದ ಕುಪ್ಪಸವು ಡೀಪ್ ಆಗಿದ್ದರಿಂದ ಸಿಕ್ಕಾಪಟ್ಟೆ ಹಾಟ್​​​​ ಆಗಿ ಕಾಣುತ್ತಿದ್ದರು. ನೆಕ್‌ಲೈನ್ ಮರೆಯಾಗದ ರೀತಿಯಲ್ಲಿ ಶ್ರೀಮಾ ಅವರ ದುಪಟ್ಟಾವನ್ನು ವಿನ್ಯಾಸಗೊಳಿಸಲಾಗಿತ್ತು. ಮುಖಕ್ಕೆ ನೈಸರ್ಗಿಕ ಟೋನ್ ಮತ್ತು ಹೊಳಪು, ಸ್ಮೋಕಿ ಮೇಕಪ್​​​​ನೊಂದಿಗೆ ಕಣ್ಣುಗಳು ಸುಂದರವಾಗಿ ಕಾಣುತ್ತಿದ್ದವು.

ಅಂದಹಾಗೆ ಶ್ರೀಮಾ ಅವರ ಈ ಸುಂದರವಾದ ಕೆಂಪು ಲೆಹೆಂಗಾವನ್ನು ಭಾರತದ ಪ್ರಸಿದ್ಧ ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ವಿನ್ಯಾಸಗೊಳಿಸಿದ್ದಾರೆ. ನೀತಾ ಅವರು ಅನೇಕ ಬಿ-ಟೌನ್ ಚಿತ್ರಗಳಿಗೆ ಸಾಂಪ್ರದಾಯಿಕ ದಿರಿಸುಗಳನ್ನು ವಿನ್ಯಾಸಗೊಳಿಸಿದ್ದಾರೆ. ಉದಾಹರಣೆಗೆ 'ಜೋಧಾ-ಅಕ್ಬರ್' ಮತ್ತು 'ದೇವದಾಸ್' ನಂತಹ ಬ್ಲಾಕ್ ಬಸ್ಟರ್ ಚಲನಚಿತ್ರಗಳಿಗೆ ಇವರದ್ದೇ ಕಾಸ್ಟೂಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net