ಅಭಿವೃದ್ಧಿ ಪಥ ಉಮೇಶ್ ಶೆಟ್ಟಿ ಕಾರ್ಯಗತ!

bengaluru Rathna
Published on

2010ರಲ್ಲಿ ನಾಗರಬಾವಿ ವಾರ್ಡ್, 2015ರಲ್ಲಿ ಗೋವಿಂದರಾಜನಗರ ವಾರ್ಡ್​ನಿಂದ ಬಿಜೆಪಿಯಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿ ಕಾಪೋರೇಟರ್ ಆಗಿ ಆಯ್ಕೆಯಾದರು. 10 ವರ್ಷದಲ್ಲಿ ನೂರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಬೆಂಗಳೂರಿನಲ್ಲೇ ಈ ಎರಡೂ ವಾರ್ಡ್​ಗಳನ್ನು ಮಾದರಿ ವಾರ್ಡ್​ಗಳನ್ನಾಗಿ ರೂಪಿಸಿದ್ದಾರೆ. 2023ರಲ್ಲಿ ಗೋವಿಂದರಾಜನಗರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಇವರು, 70 ಸಾವಿರಕ್ಕೂ ಅಧಿಕ ಮತ ಪಡೆದು 6 ಸಾವಿರ ಮತಗಳಿಂದ ಸೋಲು ಅನುಭವಿಸಿದ್ದರೂ, ಧೃತಿಗೆಡದೆ ಕ್ಷೇತ್ರದ ಜನರ ಸಂಕಷ್ಟವನ್ನು ಆಲಿಸುತ್ತ ‘ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಿಜಿಎಸ್ ಕ್ರೀಡಾಂಗಣದ ಮುಂಭಾಗದಲ್ಲಿ ಅಧಿಕೃತ ಕಚೇರಿ ತೆರೆದು, ಗೋವಿಂದರಾಜ ನಗರ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ಧಾರೆ.

ಬೆಂಗಳೂರು: ವಿಠ್ಠಲ್ ಶೆಟ್ಟಿ ಹಾಗೂ ರತಿ ವಿ. ಶೆಟ್ಟಿ ದಂಪತಿಯ ಮಗನಾಗಿ ಉಮೇಶ್ ಶೆಟ್ಟಿ ಜನಿಸಿದರು. ಈ ದಂಪತಿಗೆ ನಾಲ್ವರು ಮಕ್ಕಳು. ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ಈ ಪೈಕಿ ಉಮೇಶ್ ಶೆಟ್ಟಿ ಕೊನೆಯವರು. ಸೋದರ ಜಗದೀಶ್ ಶೆಟ್ಟಿ, ಪದ್ಮಾವತಿ ಶೆಟ್ಟಿ ಮತ್ತು ಲಲಿತಾ ಶೆಟ್ಟಿ ಸಹೋದರಿಯರು. ದೀಪಿಕಾ ಶೆಟ್ಟಿ ಅವರನ್ನು ವಿವಾಹವಾಗಿರುವ ಉಮೇಶ್ ಶೆಟ್ಟಿಗೆ ಪುತ್ರ ಪ್ರಸಿದ್ಧ್ ಹಾಗೂ ಪುತ್ರಿ ಪ್ರಶ್ಮಾಇದ್ದಾರೆ.

ಮೂಲತಃ ಉಡುಪಿಯವರಾದ ಉಮೇಶ್ ಶೆಟ್ಟಿ, ಕೃಷಿ ಕುಟುಂಬಕ್ಕೆ ಸೇರಿದವರು. ಬಾಲ್ಯದಲ್ಲೇ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದವರು. 32 ವರ್ಷಗಳ ಹಿಂದೆ ಇವರ ತಂದೆ ವಿಠ್ಠಲ್ ಶೆಟ್ಟಿ ತೀರಿಕೊಂಡರು. ಈ ವೇಳೆ ಕುಟುಂಬ ಜರ್ಜರಿತವಾಗಿತ್ತು. ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆದರೂ, ಧೃತಿಗೆಡದೆ ಇವರ ಅಮ್ಮ ರತಿ ವಿ. ಶೆಟ್ಟಿ, ತಮ್ಮ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿದ್ದ ಕಷ್ಟಗಳನ್ನು ಮೆಟ್ಟಿ ನಿಂತು ಕುಟುಂಬವನ್ನು ಮುನ್ನಡೆಸಿದರು. ನಾಲ್ವರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರು. 1ನೇ ತರಗತಿಯಿಂದ 12ನೇ ತರಗತಿವರೆಗೆ ಉಡುಪಿಯಲ್ಲೇ ಓದಿದ್ದ ಉಮೇಶ್ ಶೆಟ್ಟಿ, ಶಾಲಾ-ಕಾಲೇಜಿನಲ್ಲಿ ಓದುವ ವೇಳೆ ನಾಯಕತ್ವ ಗುಣವನ್ನು ಬೆಳೆಸಿಕೊಂಡರು.

ವಿದ್ಯಾಭ್ಯಾಸ ಮಾಡುವಾಗಲೇ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡವರು. ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಸೇರಿ ಇತರ ಕ್ರೀಡೆಗಳನ್ನು ಆಡುತ್ತಿದ್ದರು, ಓದಿಗಿಂತ ಕ್ರೀಡೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದವರು. ಮನೆಯ ಕಷ್ಟದ ಪರಿಸ್ಥಿತಿ ಮನಗಂಡು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದರು. ಹೋಟೆಲ್​ವೊಂದರ ಕೆಲಸಕ್ಕೆ ಸೇರಿಕೊಂಡರು. ಕೆಲ ವರ್ಷಗಳ ಬಳಿಕ ಹೋಟೆಲ್ ಉದ್ದಿಮೆ ಆರಂಭಿಸಿ ಯಶಸ್ವಿಯಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಕಾರ್ಯಕರ್ತರಾಗಿ, ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಟೆಲ್ ಉದ್ಯಮ ನಡೆಸುತ್ತಿದ್ದ ವೇಳೆ ಇವರಿಗೆ ಇನ್ನಷ್ಟು ಜನಸೇವೆ ಮಾಡಬೇಕೆಂಬ ಅಭಿಲಾಷೆ ಬಂತು. ಇದೇ ವೇಳೆ ಉಮೇಶ್ ಶೆಟ್ಟಿ ಅವರನ್ನು ಬಿಜೆಪಿ ಪಕ್ಷ ಮತ್ತು ವಿ. ಸೋಮಣ್ಣ ಗುರುತಿಸಿ 2010ರಲ್ಲಿ ನಾಗರಬಾವಿ ವಾರ್ಡ್, 2015ರಲ್ಲಿ ಗೋವಿಂದರಾಜನಗರ ವಾರ್ಡ್​ಗಳಿಂದ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಎರಡೂ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವು ಸಾಧಿಸಿದ್ದಲ್ಲದೆ, ಎರಡೂ ವಾರ್ಡ್​ಗಳಲ್ಲೂ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಶಹಬ್ಬಾಸ್​ಗಿರಿ ಪಡೆದಿದ್ದಾರೆ. ಕೇವಲ 10 ವರ್ಷದಲ್ಲೇ ವಾರ್ಡ್​ನಲ್ಲಿ ಇರಬೇಕಾದ ಎಲ್ಲ ಮೂಲಸೌಕರ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ಉಮೇಶ್ ಶೆಟ್ಟಿ ಅವರು ಅಭಿವೃದ್ಧಿಯ ಹರಿಕಾರನೆಂದು ಜನರಿಂದ ಮನ್ನಣೆ ಪಡೆದಿದ್ದಾರೆ. ಅತ್ಯುತ್ತಮವಾಗಿ ವಾರ್ಡ್ ಅಭಿವೃದ್ಧಿಗೊಳಿಸಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದಲೂ ‘ಗರಿಮೆ’ ಸಿಕ್ಕಿದೆ.

BJP Leaders

ಹಲವು ನಾಯಕರ ಜತೆ ಒಡನಾಟ: ವಿಶೇಷವಾಗಿ ಆರ್​ಎಸ್​ಎಸ್ ನಾಯಕರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಉಮೇಶ್ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಡಿಸಿಎಂ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ವಿ. ಸೋಮಣ್ಣ ಸೇರಿ ಬಿಜೆಪಿ ಮುಂಚೂಣಿ ನಾಯಕರ ಜತೆ ಸಂಪರ್ಕ ಹೊಂದಿದ್ದಾರೆ.

ಮೊದಲ ಡಿಜಿಟಲ್ ಮಾದರಿ ವಾರ್ಡ್: ನಾಗರಬಾವಿ ವಾರ್ಡ್​ನಲ್ಲಿ ನಿರ್ವಿುಸಿರುವ ಮಾದರಿಯಲ್ಲಿ ಗೋವಿಂದರಾಜನಗರ ವಾರ್ಡ್​ನ ಸಿಎಚ್​ಬಿಎಸ್ ಬಡಾವಣೆಯಲ್ಲಿ ಪಾಲಿಕೆ ಸೌಧವನ್ನು ನಿರ್ವಿುಸಲಾಗಿದೆ. ಇದು ಮಾಹಿತಿ ಮತ್ತು ತಂತ್ರಜ್ಞಾನ ಶೈಲಿಯಲ್ಲಿ ಕಟ್ಟಿರುವುದು ವಿಶೇಷ. 198 ವಾರ್ಡ್​ಗಳಲ್ಲೇ ಮೊದಲ ಡಿಜಿಟಲ್ ಮಾದರಿ ವಾರ್ಡ್ ಎಂದು ಗೋವಿಂದರಾಜನಗರ ವಾರ್ಡ್​ಗೆ ಹೆಸರು ಬಂದಿದೆ. ಬಿಬಿಎಂಪಿಯ ವಿವಿಧ ಇಲಾಖೆ ಅಧಿಕಾರಿಗಳು ಒಂದೇ ಸೂರಿನಡಿ ಲಭ್ಯವಾಗಲು, ಅಭಿವೃದ್ಧಿ ವೇಗ ಹೆಚ್ಚಿಸಲು ‘ಪಾಲಿಕೆ ಸೌಧ’ ನೆರವಾಗಿದೆ. ನೆಲಮಹಡಿಯಲ್ಲಿ ಜನೌಷಧ ಕೇಂದ್ರ, ಮೊದಲ ಮಹಡಿಯಲ್ಲಿ ಬಿಬಿಎಂಪಿ ಸದಸ್ಯರ ಕಚೇರಿ, 2ನೇ ಮಹಡಿಯಲ್ಲಿ ಕಂದಾಯ, ಆರೋಗ್ಯ, ಕಾಮಗಾರಿ ಇಲಾಖೆ ಇದ್ದರೆ, 3ನೇ ಮಹಡಿಯಲ್ಲಿ ಯೋಗ ತರಬೇತಿ ಕೇಂದ್ರ, 4ನೇ ಮಹಡಿಯಲ್ಲಿ ಸಭಾಂಗಣ ಇದೆ. ಕಟ್ಟಡದ ಮುಂಭಾಗದಲ್ಲಿ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ ಸ್ಥಾಪಿಸಲಾಗಿದೆ.

ಕ್ರೀಡಾಂಗಣಕ್ಕೆ ಶ್ರೀಗಳ ಹೆಸರು: ಮೊದಲ ಬಾರಿಗೆ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿ, ಸ್ವಾಮೀಜಿರವರ ಹೆಸರಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ವಣಿಸಿದವರಲ್ಲಿ ಮೊದಲಿಗರೇ ಉಮೇಶ್ ಶೆಟ್ಟಿ. ಬಡಾವಣೆ ಸುತ್ತಮುತ್ತ ನಿವಾಸಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಿಕೆಟ್ ಸ್ಟೇಡಿಯಂ, ಸ್ಕೇಟಿಂಗ್, ಬಾಸ್ಕೆಟ್​ಬಾಲ್, ಬ್ಯಾಡ್ಮಿಂಟನ್ ಅಂಗಳ, ರಂಗಮಂದಿರ, ಧ್ಯಾನಮಂದಿರ ಸೇರಿ ಇತರೆ ಮೂಲಸೌಕರ್ಯಗಳಿವೆ. ಪ್ರತಿನಿತ್ಯ ನೂರಾರು ಮಂದಿ ಕ್ರೀಡಾ ಚಟುವಟಿಕೆಗಳ ಮೂಲಕ ಮೈದಾನವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

Sports Club

ಹೈಟೆಕ್ ಕನಕಗಿರಿ ಉದ್ಯಾನ: ನಾಗರಭಾವಿ ಸ್ಲಂನಿಂದ ಕಾಪೋರೇಷನ್ ಕಾಲನಿ ನಡುವೆ ಇರುವ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ‘ಅಮೃತ್ ಸ್ಕೀಂ’ ಅನುದಾನದಡಿ ಸುಸಜ್ಜಿತ ಕನಕಗಿರಿ ಉದ್ಯಾನ ನಿರ್ವಿುಸಲಾಗಿದೆ. ಇದಕ್ಕೆ ಕನಕದಾಸರ ಹೆಸರು ಇಡಲಾಗಿದೆ. ಉದ್ಯಾನದಲ್ಲಿ ಹಿರಿಯರಿಗೆ ವಾಕಿಂಗ್ ಟ್ರಾ್ಯಕ್, ವಿರಮಿಸಲು ಆಸನಗಳು, ಹನಿ ನೀರಾವರಿ ಪದ್ಧತಿಯಲ್ಲಿ ಗಾರ್ಡನಿಂಗ್, ಮಕ್ಕಳ ಮನೋರಂಜನೆಗಾಗಿ ನಾನಾ ಬಗೆಯ ಆಟಿಕೆಗಳುಳ್ಳ ಮಕ್ಕಳ ಮೈದಾನ, ಶೌಚಗೃಹ ಸೇರಿ ವಿವಿಧ ರೀತಿಯ ಮೂಲಸೌಕರ್ಯ ಗಳಿವೆ. ಪ್ರತಿ ನಿತ್ಯ ಸಾವಿರಾರು ಮಂದಿ ಇದನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಹೈಟೆಕ್ ಮಾದರಿ ಉದ್ಯಾನವಾಗಿದೆ.

ಸವಾಲು ಮೆಟ್ಟಿ ನಿಂತು ಚಂದ್ರಗಿರಿ ಉದ್ಯಾನ ನಿರ್ಮಾಣ: ನಾಗರಬಾವಿ ವಾರ್ಡ್​ನಲ್ಲಿ ಮೂರು ಎಕರೆ ವಿಸ್ತೀರ್ಣದ ಚಂದ್ರಗಿರಿ ಬೆಟ್ಟವಿತ್ತು. ಅಲ್ಲಿ ಬರೀ ಬಂಡೆಗಳೇ ತುಂಬಿದ್ದವು. ಅನೈತಿಕ ಚಟುವಟಿಕೆಗಳಿಗೆ, ಗಾಂಜಾ ಸೇದಲು ಮತ್ತು ಪುಂಡ-ಪೋಕರಿಗಳಿಗೆ ಅಡ್ಡೆಯಾಗಿತ್ತು. ಈ ಜಾಗದಲ್ಲಿ ಸುಂದರವಾದ ಪಾರ್ಕ್ ನಿರ್ವಿುಸಬೇಕೆಂದು ಉಮೇಶ್ ಶೆಟ್ಟಿ ಅವರಲ್ಲಿ ಛಲ ಇತ್ತು. ವಿ. ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಕೇವಲ ಮೂರೇ ತಿಂಗಳಲ್ಲಿ ಬೆಟ್ಟವನ್ನು ಸ್ವಚ್ಛಗೊಳಿಸಿ ಸುಂದರ ಉದ್ಯಾನ ನಿರ್ವಣಕ್ಕೆ ಕಾರಣೀಭೂತರಾದರು. ಬೆಂಗಳೂರಿನಲ್ಲೇ ಇದು ಮಾದರಿ ಪಾರ್ಕ್ ಆಗಿ ರೂಪುಗೊಂಡಿದೆ. ವಾರ್ಡ್​ನ ಜನರ ಆರೋಗ್ಯಕ್ಕಾಗಿ ಬಯಲಿನಲ್ಲಿ ಏರೋಬಿಕ್ಸ್ ಅಳವಡಿಸಿರುವುದು ವಿಶೇಷ. ಈ ಉದ್ಯಾನ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದ್ದು, ಜನರನ್ನು ಕೈಬೀಸಿ ಕರೆಯುತ್ತಿದೆ. ಶಾಸಕ ಸುರೇಶ್​ಕುಮಾರ್, ದಿ. ವಿಜಯ್ಕುಮಾರ್ ಸೇರಿ ಹಲವು ನಾಯಕರು ಉದ್ಯಾನಕ್ಕೆ ಭೇಟಿ ಕೊಟ್ಟು ಉಮೇಶ್ ಶೆಟ್ಟಿ ಅವರ ಅಭಿವೃದ್ಧಿ ಕಾರ್ಯವನ್ನು ಕೊಂಡಾಡಿದ್ದಾರೆ.

ಮಲ್ಟಿಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆ: ಗೋವಿಂದರಾಜನಗರದ ಪ್ರಶಾಂತನಗರದ ಮುಖ್ಯರಸ್ತೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಮಲ್ಟಿ ಸ್ಪೆಷಾಲಿಟಿ ಹೆರಿಗೆ ಆಸ್ಪತ್ರೆಯನ್ನು ನಿರ್ವಿುಸಲಾಗಿದೆ. ಪ್ರತಿ ವರ್ಷ 3 ಸಾವಿರಕ್ಕೂ ಅಧಿಕ ಮಕ್ಕಳು ಈ ಆಸ್ಪತ್ರೆಯಲ್ಲಿ ಜನಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯವು ಖಾಸಗಿ ಆಸ್ಪತ್ರೆಗಳನ್ನೇ ಮೀರಿಸುವಂತಿದೆ. ಬೆಂಗಳೂರು ನಗರದಲ್ಲೇ ಮಾದರಿ ಆಸ್ಪತ್ರೆ ಇದಾಗಿದೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು. ಒಟ್ಟಾರೆ, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದಕ್ಕೆ ಹೆಸರುವಾಸಿಯಾಗಿದೆ. ಉಮೇಶ್ ಶೆಟ್ಟಿ ಅವರ ಪರಿಶ್ರಮದಿಂದಾಗಿ ಆಸ್ಪತ್ರೆ ನಿರ್ವಣವಾಗಿದ್ದು, ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗಿದೆ.

BBMP Hospital

ಅಟಲ್​ಜೀ ಶಕ್ತಿ ಸೌಧ: ಜನತೆಗೆ ಅನುಕೂಲವಾಗಲೆಂದು ಎಂ.ಸಿ.ಬಡಾವಣೆಯಲ್ಲಿ ‘ಅಟಲ್ ಜೀ ಶಕ್ತಿ ಸೌಧ’ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕಟ್ಟಡದ ನೆಲ ಮಹಡಿಯಲ್ಲಿ ವಾಹನ ನಿಲ್ದಾಣ, ವಾಕಿಂಗ್ ಪಾತ್ ಇದ್ದರೆ, ಮೊದಲ ಮಹಡಿಯಲ್ಲಿ ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. 2ನೇ ಮಹಡಿಯಲ್ಲಿ ಡಿಜಿಟಲ್ ಲೈಬ್ರರಿ, ಪಾಲಿಕೆಯ ವಿವಿಧ ಕಚೇರಿಗಳು, ಸಂಘ-ಸಂಸ್ಥೆಗಳ ಕಚೇರಿಗಳಿವೆ. 3ನೇ ಮಹಡಿಯಲ್ಲಿ ಕೇರಂ, ಸ್ನೂಕರ್ ಇದ್ದರೆ, 4ನೇ ಮಹಡಿಯಲ್ಲಿ ಎರಡು ಶಟಲ್ ಕೋರ್ಟ್ ನಿರ್ವಿುಸ ಲಾಗಿದೆ.

ಮೊದಲ ಬಾರಿಯೇ ಅಭಿವೃದ್ಧಿ ಹೊಳೆ: ಮೊದಲ ಬಾರಿಗೆ 2010ರಲ್ಲಿ ಪಾಲಿಕೆ ಚುನಾವಣೆಯಲ್ಲಿ ನಾಗರಬಾವಿ ವಾರ್ಡ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಉಮೇಶ್ ಶೆಟ್ಟಿ, ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದಾರೆ. ವಾರ್ಡ್​ಗೆ ಬೇಕಿದ್ದ ಅನುದಾನವನ್ನು ತರುವ ಛಲ ಹೊಂದಿದ್ದ ಇವರು 5 ವರ್ಷದಲ್ಲಿ ವಾರ್ಡ್​ಗೆ ಮೂಲಸೌಕರ್ಯ ಕಲ್ಪಿಸಿದರು. ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರು

ವಾರ್ಡ್ ಅಭಿವೃದ್ಧಿಗೆ ಸಮರೋಪಾದಿ ಕಾರ್ಯ

  • ತಿಮ್ಮೇನಹಳ್ಳಿಯಲ್ಲಿ ಕಬಡ್ಡಿ ಕ್ರೀಡಾಂಗಣ ನಿರ್ಮಾಣ
  • ವಾರ್ಡ್​ನಾದ್ಯಂತ ಪಾದಚಾರಿ ಮಾರ್ಗಗಳು ಮೇಲ್ದರ್ಜೆಗೆ
  • ಹೊಸ ಮಾದರಿಯಲ್ಲಿ ಹತ್ತಾರು ಬಸ್ ತಂಗುದಾಣ ನಿರ್ಮಾಣ
Govindarajanagara Ward

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಲು ಹೈಟೆಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ್ಞ ವಾಹನದಟ್ಟಣೆ ನಿವಾರಣೆಗೆ ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಬಸ್ ನಿಲ್ದಾಣ ಬಳಿ ಕೇಳಸೇತುವೆ ಸ್ಥಾಪನೆ. ಇದಕ್ಕೆ ನಾಡಪ್ರಭು ಕೆಂಪೇಗೌಡ ಹೆಸರು ನಾಮಕರಣ. ್ಞ ವಾರ್ಡ್​ನ ಪ್ರತಿ ರಸ್ತೆಗಳಿಗೆ ಡಾಂಬರೀಕರಣ, ಒಳಚರಂಡಿ, ಮಾದರಿ ಪಾದಚಾರಿ ಮಾರ್ಗ ಅಭಿವೃದ್ಧಿ

ಸಾರ್ವಜನಿಕರ ಗ್ರಂಥಾಲಯ, ವಸತಿ ಸಮುಚ್ಚಯ, ಪಾರ್ಕ್​ಗಳ ನವೀಕರಣ ್ಞ ನೂರಾರು ಬೋರ್​ವೆಲ್ ಸೌಲಭ್ಯ ್ಞ ನಾಗರಿಕರ ಸುರಕ್ಷತೆಗಾಗಿ ವಾರ್ಡ್​ನಾದ್ಯಂತ 200 ಸಿಸಿ ಕ್ಯಾಮರಾ ಅಳವಡಿಕೆ ್ಞ ಪ್ರಶಾಂತನಗರದಲ್ಲಿ ಪ್ರಶಾಂತಿವನ, ಕೆಂಪೇಗೌಡ ಉದ್ಯಾನ ಸೇರಿ ಇತರೆ ಬಡಾವಣೆಗಳಲ್ಲಿ ಹತ್ತಾರು ಉದ್ಯಾನಗಳ ಅಭಿವೃದ್ಧಿ ್ಞ ಸ್ವಾಮಿ ವಿವೇಕಾನಂದರ ಜೀವನ ವೃತ್ತಾಂತವನ್ನು ಸಾರುವ ‘ವಿವೇಕ ಮಂಟಪ’ ಉದ್ಯಾನ

ಗೋವಿಂದರಾಜನಗರ ಅಭಿವೃದ್ಧಿ: ವಿ. ಸೋಮಣ್ಣ ಅವರ ಸಹಕಾರದೊಂದಿಗೆ ನಾಗರಬಾವಿ ವಾರ್ಡ್​ನಂತೆ ಗೋವಿಂದ ರಾಜನಗರ ವಾರ್ಡ್​ನಲ್ಲೂ ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮೂಲಸೌಕರ್ಯ ಕಲ್ಪಿಸಿಕೊಟ್ಟರು ಉಮೇಶ್ ಶೆಟ್ಟಿ. ವಾರ್ಡ್​ನಲ್ಲಿ ಪಾಲಿಕೆ ಸೌಧ, ಡಾ. ಬಿ.ಆರ್. ಅಂಬೇಡ್ಕರ್ ಸೌಧ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ, ಅಟಲ್​ಜೀ ಶಕ್ತಿ ಕೇಂದ್ರ, ಪಂಡಿತ್ ದೀನ್ ದಯಾಳ್ ಕಬಡ್ಡಿ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣ, ಕನಕದಾಸರ ಹೆಸರಿನಲ್ಲಿ ಕನಕಗಿರಿ ಉದ್ಯಾನ, ಸಿಸಿ ಕ್ಯಾಮರಾ ಅಳವಡಿಕೆ, ಉಚಿತ ವೈ-ಫೈ ಸೌಲಭ್ಯ, ಹಲವು ದೇಗುಲಗಳ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕ ಸೇರಿ ವಿವಿಧ ಅಭಿವದ್ಧಿ ಕಾಮಗಾರಿಗಳನ್ನು ಮಾಡಿಸಿದ್ದಾರೆ.

Umesh Shetty

ಪಾಲಿಕೆ ಸೌಧ ಪರಿಕಲ್ಪನೆಗೆ ಅಡಿಪಾಯ: ನಾಗರಬಾವಿ ವಾರ್ಡ್​ನ ಜ್ಯೋತಿನಗರದಲ್ಲಿ ಉಮೇಶ್ ಶೆಟ್ಟಿ 6 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಿುಸಿ ‘ಪಾಲಿಕೆ ಸೌಧ’ ಹೆಸರು ಇಟ್ಟಿದ್ದಾರೆ. ಈ ಮೂಲಕ ಬಿಬಿಎಂಪಿಯಲ್ಲಿ ಪಾಲಿಕೆ ಸೌಧ ಪರಿಕಲ್ಪನೆಗೆ ಅಡಿಪಾಯ ಹಾಕಿಕೊಟ್ಟರು. ಬಿಬಿಎಂಪಿ ಹಣದಿಂದ ಉಮೇಶ್ ಶೆಟ್ಟಿ ಪಾಲಿಕೆ ಸೌಧದಲ್ಲಿ ಮಲ್ಟಿ ಜಿಮ್ೆ ಪರಿಕರ ಒದಗಿಸಿದ್ದಾರೆ. ಕಟ್ಟಡದಲ್ಲಿ ಗ್ರಂಥಾಲಯ, ಮಹಿಳೆಯರಿಗಾಗಿ ಪ್ರತ್ಯೇಕ ಏರೋಬಿಕ್ಸ್, ಬೆಂಗಳೂರು ಒನ್ ಕೇಂದ್ರ, ಡಯಾಲಿಸಿಸ್ ಕೇಂದ್ರ, ಪೊಲೀಸ್ ಚೌಕಿ ಇದೆ. ಕಟ್ಟಡದ ಸುತ್ತಮುತ್ತ ನಡಿಗೆ ಪಥ ನಿರ್ವಿುಸಲಾಗಿದೆ. ಓದುಗರಿಗೆ ರೀಡಿಂಗ್ ರೂಮ್ ಸೌಲಭ್ಯ ಕಲ್ಪಿಸಿ ಪ್ರತಿ ನಿತ್ಯ ನೂರಾರು ಮಂದಿ ಪತ್ರಿಕೆಗಳನ್ನು ಓದಿ ಜ್ಞಾನ ಸಂಪಾದನೆಗೆ ನೆರವಾಗಿದ್ದಾರೆ.

ಸಾಮಾಜಿಕ ಜಾಲತಾಣ ಸದ್ಬಳಕೆ: ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್, ಎಕ್ಸ್, ಟೆಲಿಗ್ರಾಂ ಸೇರಿ ಇತರ ಡಿಜಿಟಲ್ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಉಮೇಶ್ ಶೆಟ್ಟಿ ಎತ್ತಿದ ಕೈ. ಇವರು ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ. ವಾರ್ಡ್ ಗಳಲ್ಲಿ ನಡೆದಿರುವ, ಮುಂದೆ ನಡೆಯುವ ಪ್ರತಿ ಅಭಿವೃದ್ಧಿ ಕಾಮಗಾರಿ ಬಗ್ಗೆ ಅಪ್ಡೇಟ್ ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಾರ್ಡ್​ನ ಜನರ ಬಗ್ಗೆ ಏನಾದರೂ ದೂರು ಬಂದಲ್ಲಿ ತಕ್ಷಣ ಬಗೆಹರಿಸುತ್ತಾರೆ. ಸರ್ಕಾರದ ಲೋಪದೋಷ ಬಗ್ಗೆ ಧ್ವನಿ ಎತ್ತಲು ಡಿಜಿಟಲ್ ವ್ಯವಸ್ಥೆ ನೆರವಾಗಿದೆ. ರಾಷ್ಟ್ರೀಯ ನಾಯಕರನ್ನು ಫಾಲೋಅಪ್ ಮಾಡುತ್ತೇನೆ. ನಾನು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಅಪ್​ಲೋಡ್ ಮಾಡುತ್ತೇನೆ. ಇದರಿಂದಾಗಿ ವಾರ್ಡ್​ನಲ್ಲಿ ಏನೇನು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ದೊರೆಯುತ್ತದೆ ಎನ್ನುತ್ತಾರೆ ಉಮೇಶ್ ಶೆಟ್ಟಿ.

ನಾಗರಬಾವಿಯಲ್ಲಿ ಅಭಿವೃದ್ಧಿಪರ್ವ!

  • ವಿ. ಸೋಮಣ್ಣ ವಸತಿ ಸಚಿವರಾಗಿದ್ದ ವೇಳೆ ನಾಗರಬಾವಿ ವಾರ್ಡ್​ನಲ್ಲಿ 250ಕ್ಕೂ ಅಧಿಕ ಮನೆ ಕಟ್ಟಿಸಿ ಫಲಾನುಭವಿಗಳಿಗೆ ವಿತರಣೆ.
  • ಅರುಂಧತಿನಗರದಲ್ಲಿ ಪಾಲಿಕೆ, ಕೊಳಚೆ ನಿಮೂಲನಾ ಮಂಡಳಿ ಯಿಂದ ಜಿ-ಫ್ಲಸ್ ಅಡಿ 900ಕ್ಕೂ ಅಧಿಕ ಮನೆಗಳ ನಿರ್ವಣ.
  • ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ವೇಳೆ ವಾರ್ಡ್​ನ ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ.
  • ಪ್ಲ್ಯಾಸ್ಟಿಕ್​​ಮುಕ್ತ ನಗರಕ್ಕಾಗಿ ಒಣ ಮತ್ತು ಹಸಿ ಕಸ ವಿಗಂಡಿಸಲು ಸಾವಿರಾರು ಕಸದ ಡಬ್ಬಿ ವಿತರಣೆ.
  • ಬಡ ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಎಟಿಡಿಸಿ ಸ್ಮಾರ್ಟ್ ಕಟ್ಟಡ ಕಟ್ಟಿಸಿ ಟೈಲರಿಂಗ್ ಕೇಂದ್ರ ನಿರ್ವಣ.
  • ಪಾಲಿಕೆಯಲ್ಲಿ ಮೊದಲ ಸ್ಥಾನ ಪಡೆದಿರುವ ಶ್ರೀ ಭೈರವೇಶ್ವರ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಉಚಿತವಾಗಿ ಆಂಗ್ಲ ಶಬ್ದಕೋಶ ವಿತರಣೆ.
  • ಗುಣಮಟ್ಟದ ರಸ್ತೆ, ಮಾದರಿ ಪಾದಚಾರಿ ಮಾರ್ಗ ಅಭಿವೃದ್ಧಿ, ಗ್ರಂಥಾಲಯ, ಜ್ಯೋತಿನಗರದಲ್ಲಿ ಬೆಂಗಳೂರು ಒನ್ ಕೇಂದ್ರ ಸ್ಥಾಪನೆ, 18ಕ್ಕೂ ಅಧಿಕ ಪಾರ್ಕ್​ಗಳ ನವೀಕರಣ.
Umesh Somanna

ಎರಡು ಬಾರಿ ಕಾಪೋ ರೇಟರ್ ಆಗಿದ್ದಾಗ ಉಮೇಶ್ ಶೆಟ್ಟಿ ಒಳ್ಳೆಯ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನರಿಗೆ ಬೇಗ ಸಿಗುತ್ತಾರೆ. ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಾರೆ. ಕಷ್ಟವೆಂದು ಅವರ ಬಳಿ ತೆರಳಿದರೆ ಸಹಾಯ ಸಿಗುತ್ತದೆ. ಇವರು ಶಾಸಕ ಆಗಿದ್ದರೆ ನಮಗೆ ಇನ್ನಷ್ಟು ಅನುಕೂಲವಾಗುತ್ತಿತ್ತು. ಜತೆಗೆ ಕ್ಷೇತ್ರವೂ ಅಭಿವೃದ್ಧಿಯಾಗುತ್ತಿತ್ತು. ಮುಂದಿನ ಚುನಾವಣೆಯಲ್ಲಿ ಜಯ ಸಾಧಿಸುವಂತಾಗಲಿ. ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲು ದೇವರು ಶಕ್ತಿ ಕೊಡುವಂತಾಗಲಿ.

| ಎಸ್.ಅಮೃತ್ ಕಾವೇರಿಪುರ ನಿವಾಸಿ

ಗೋವಿಂದರಾಜನಗರ ಕ್ಷೇತ್ರದ ಜನಪರ ರಾಜಕಾರಣಿ ಅಂದರೆ ಅದು ಉಮೇಶ್ ಶೆಟ್ಟಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ಬೇಗನೆ ಟಿಕೆಟ್ ಸಿಕ್ಕಿದ್ದರೆ ಗೆಲ್ಲುತ್ತಿದ್ದರು. ಕ್ಷೇತ್ರದ ಜನರಿಗೆ ಇಂಥ ರಾಜಕಾರಣಿಯ ಸೇವೆ ಅಗತ್ಯವಿದೆ. ಕಾಪೋರೇಟರ್ ಆಗಿದ್ದ ವೇಳೆ ಮಾಡಿದ್ದ ಅಭಿವೃದ್ಧಿ ಕಾರ್ಯಗಳು ನಮ್ಮ ಕಣ್ಣು ಮುಂದೆ ಕಾಣುತ್ತವೆ. ಸುಲಭವಾಗಿ ಸಿಗುವ ಇವರು ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸುವಂತಾಗಲಿ.

| ಕಿರಣ್ ಪ್ರಭು ಕೆನರಾ ಬ್ಯಾಂಕ್ ಕಾಲನಿ ನಿವಾಸಿ

Umesh Vijayendra
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net