ಉಗ್ರ ಯಾಸಿನ್ ಮಲಿಕ್​ಗೆ ಜೀವಾವಧಿ ಶಿಕ್ಷೆ; ಭಯೋತ್ಪಾದನೆಗೆ ಧನಸಹಾಯ ಪ್ರಕರಣ..

Yasin Malik
Published on

ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿ, ಉಗ್ರ ಸಂಘಟನೆಗಳಿಗೆ ಧನಸಹಾಯ ಮಾಡುತ್ತಿದ್ದ ಉಗ್ರ ಯಾಸಿನ್ ಮಲಿಕ್​ಗೆ ಜೀವಾವಧಿ ಶಿಕ್ಷೆ ಘೋಷಣೆ ಆಗಿದೆ. ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಿಶೇಷ ನ್ಯಾಯಾಲಯ ಈ ಆದೇಶವನ್ನು ನೀಡಿದೆ.

ಎನ್​ಐಎ ಈತನಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಪ್ರತಿಪಾದಿಸಿತ್ತು. ಇದೀಗ ಬುಧವಾರದ ವಿಚಾರಣೆಯಲ್ಲಿ ವಾದ-ವಿವಾದ ಆಲಿಸಿ ಎನ್​ಐಎ ವಿಶೇಷ ನ್ಯಾಯಾಲಯ ಈತನಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net