94 ಪಟಾಕಿ ಮಳಿಗೆಗಳಿಗೆ ಪರವಾನಗಿ

freedam park pataki shop
Published on

ಶಿವಮೊಗ್ಗ: ಮಲೆನಾಡಿನಲ್ಲಿ ಬೆಳಕಿಗ ಹಬ್ಬ ದೀಪಾವಳಿಗೆ ಜನರು ಸಜ್ಜಾಗಿದ್ದಾರೆ. ಸೋಮವಾರವೇ ಕೆಲವೆಡೆ ಲಕ್ಷ್ಮೀಪೂಜೆಗೆ ಸಿದ್ಧತೆ ನಡೆದಿದ್ದು, ಮಳೆ ಆತಂಕದ ನಡುವೆಯೂ ವಾರಾಂತ್ಯ ಭಾನುವಾರ ಫ್ರೀಡಂಪಾರ್ಕ್‌ನಲ್ಲಿ ಬಗೆ ಬಗೆಯ ಪಟಾಕಿ ಖರೀದಿಗೆ ಸಾವಿರಾರು ಜನರು ಮುಗಿಬಿದ್ದಿದ್ದರು.

ಕಳೆದ ವರ್ಷ 74 ಮಳಿಗೆಗಳಿಗೆ ಅವಕಾಶ ನೀಡಿದ್ದ ಜಿಲ್ಲಾಡಳಿತ ಈ ಬಾರಿ 94 ಮಳಿಗೆ ತೆರೆಯಲು ಅನುಮತಿ ನೀಡಿದೆ. ಮೊದಲ ದಿನವೇ ಅಷ್ಟೂ ಮಳಿಗೆಗಳನ್ನು ತೆರೆದಿದ್ದು, ಬೆಳಗ್ಗೆಯಿಂದಲೇ ಪಟಾಕಿ ವ್ಯಾಪಾರ-ವಹಿವಾಟು ಭರ್ಜರಿಯಾಗಿತ್ತು. ಮಕ್ಕಳು, ವಯಸ್ಕರು ಎನ್ನದೇ ವಯಸ್ಸಿನ ಮಿತಿ ಇಲ್ಲದೇ ಪಟಾಕಿ ಖರೀದಿಸಿ ಮನೆಗೆ ಕೊಂಡೊಯ್ದರು.

ಮಳೆ ಆತಂಕ, ಗೊಂದಲದ ನಡುವೆಯೂ ವ್ಯಾಪಾರಿಗಳು ಪಟಾಕಿ ಮಳಿಗೆಗಳನ್ನು ತೆರೆದಿದ್ದು ಬಗೆಬಗೆಯ ಪಟಾಕಿಗಳನ್ನು ಮಾರಾಟಕ್ಕೆ ಜೋಡಿಸಿಟ್ಟಿದ್ದರು. ಪರವಾನಗಿ ಪಡೆದು ಬೆಳಕಿನ ಹಬ್ಬಕ್ಕೆ ಎರಡು ದಿನ ಬಾಕಿ ಇರುವ ಮುನ್ನವೇ ವಹಿವಾಟು ಆರಂಭಿಸಿದರು. ಪ್ರತಿವರ್ಷದಂತೆ ಈ ಸಲವೂ ಸುರಕ್ಷತೆ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿ ಮಳಿಗೆಗಳ ಮುಂದೆ ಬಕೆಟ್‌ಗಳಲ್ಲಿ ಮರಳು ಮತ್ತು ನೀರನ್ನು ವ್ಯಾಪಾರಿಗಳೇ ಸಂಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net