ಅಬಕಾರಿ ಇನ್ಸಪೆಕ್ಟರ್​ ಮೇಲೆ ಕ್ರಮ ಕೈಗೊಳ್ಳಲು ಸನ್ನದುದಾರರ ಆಗ್ರಹ

8-RNR-11
Published on

ಹಾವೇರಿ: ಅಬಕಾರಿ ಪರವಾನಗಿ ನವೀಕರಣಕ್ಕೆ ಹಾಗೂ ತಿಂಗಳಿಗೆ ಮಾಮೂಲಿ ನೀಡುವಂತೆ ಸನ್ನದುದಾರರಿಗೆ ಅಬಕಾರಿ ಇನ್ಸಪೆಕ್ಟರ್​ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದಿಂದ ಸೋಮವಾರ ಪ್ರಭಾರ ಅಬಕಾರಿ ಉಪ ಆಯುಕ್ತ ಬಸವರಾಜ ಮಾದರ ಅವರಿಗೆ ಮನವಿ ಸಲ್ಲಿಸಲಾಯಿತು.

ಅಬಕಾರಿ ಇನ್ಸಪೆಕ್ಟರ್​ ಒಬ್ಬರು ಸನ್ನದುದಾರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮದ್ಯ ಮಾರಾಟಗಾರರು ರೋಸಿಹೋಗಿದ್ದಾರೆ. ಪ್ರತಿ ತಿಂಗಳು ಮಾಮೂಲಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮದ್ಯ ಮಾರಾಟದ ಪರವಾನಗಿ ನವೀಕರಣ ಶುಲ್ಕ ಕೂಡ ಜಾಸ್ತಿಯಾಗಿದ್ದು, ಕಡಿಮೆ ಮಾಡಬೇಕು ಒತ್ತಾಯಿಸಿದರು. ಎಂದು ಆಗ್ರಹಿಸಿದರು. ಈ ಕುರಿತ ಮನವಿಪತ್ರವನ್ನು ಪ್ರಭಾರ ಉಪಆಯುಕ್ತ ಬಸವರಾಜ ಮಾದರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಬೆಳವಡಿ, ಪ್ರಮುಖರಾದ ಎಸ್​. ಅಮರೇಂದ್ರ, ಆರ್​. ನಾಗರಾಜ, ಎಸ್​.ಎಸ್​. ಶೀಲವಂತರ, ಉಮೇಶ ಗೌಳಿ, ಚನ್ನಪ್ಪ ಕಲಾಲ, ರಾಮು ಯಳ್ಳೂರ, ಮಂಜುನಾಥ ಚಂಪಗಾವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net