

ಮುಂಬೈ: ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ (ಎಲ್ಐಸಿ)ನ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಮೇ 4ರಂದು ಚಿಲ್ಲರೆ ಹೂಡಿಕೆದಾರರಿಗೆ ಓಪನ್ ಆಗಲಿದೆ. ಮೇ 9ರಂದು ಕೊನೆಗೊಳ್ಳಲಿದ್ದು, ಮೇ 15ರಂದು ಬಿಡ್ ಇಶ್ಶೂ್ಯ ಮತ್ತು ಮೇ 17ರಂದು ಷೇರುಪೇಟೆಯಲ್ಲಿ ಇದು ಲಿಸ್ಟಿಂಗ್ ಆಗಲಿದೆ. ಇದಕ್ಕಾಗಿ ಪ್ರತಿ ಷೇರಿನ ದರವನ್ನು 902-949 ರೂಪಾಯಿ ಪ್ರೖೆಸ್ ಬ್ಯಾಂಡ್ ನಿಗದಿ ಮಾಡಿ ಬುಧವಾರ ದಿನಾಂಕವನ್ನು ಎಲ್ಐಸಿ ಘೊಷಿಸಿತು.
ಗರಿಷ್ಠ ಪ್ರೖೆಸ್ ಬ್ಯಾಂಡ್ ಪ್ರಕಾರ ಸರ್ಕಾರ 21,000 ಕೋಟಿ ರೂ. ಸಂಗ್ರಹಿಸಲಿದೆ. ಆಫರ್ ಫಾರ್ ಸೇಲ್ (ಒಎಫ್ಎಸ್) ಮಾದರಿಯಲ್ಲಿ ಸರ್ಕಾರವು ತನ್ನ ಪಾಲಿನ ಶೇಕಡ 3.5 ಷೇರುಗಳನ್ನು (22.13 ಕೋಟಿ) ಮಾರಾಟ ಮಾಡಿ ಕಂಪನಿಯಿಂದ 21 ಕೋಟಿ ರೂಪಾಯಿ ಹೂಡಿಕೆ ಹಿಂಪಡೆಯಲಿದೆ.
ಬಂಡವಾಳ ಮಾರುಕಟ್ಟೆಯ ಪರಿಸರವನ್ನು ಗಮನಿಸಿದರೆ, ಎಲ್ಐಸಿ ಐಪಿಒ ಸರಿಯಾದ ಗಾತ್ರದ್ದಾಗಿದೆ. ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಇದು ಪ್ರತ್ಯೇಕವಾಗಿ ನಿಲ್ಲದು. ಸದ್ಯ ಇದರ ಗಾತ್ರವನ್ನು 20,557 ಕೋಟಿ ರೂಪಾಯಿಗೆ ಇಳಿಸಿದ ಬಳಿಕವೂ, ಇದುವರೆಗೆ ಬಿಡುಗಡೆಯಾದ ಐಪಿಒಗಳ ಪೈಕಿ ಇದುವೇ ದೊಡ್ಡದು. ಎಲ್ಐಸಿಯಿಂದ ಹೂಡಿಕೆ ಹಿಂಪಡೆಯುವ ಸರ್ಕಾರದ ನಡೆ, ಅದರ ದೀರ್ಘಕಾಲದ ವ್ಯೂಹಾತ್ಮಕ ದೃಷ್ಟಿಯದ್ದಾಗಿದೆ. ಅದೇ ರೀತಿ ಕಾರ್ಪೆರೇಶನ್ನ ಮೌಲ್ಯವನ್ನು ಹೆಚ್ಚಿಸುವಂಥದ್ದಾಗಿದೆ ಎಂದು ಡಿಪಾರ್ಟ್ವೆುಂಟ್ ಆಫ್ ಇನ್ವೆಸ್ಟ್ಮೆಂಟ್ ಆಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್ವೆುಂಟ್ ಸೆಕ್ರೆಟರಿ ತುಹಿನ್ ಕಾಂತ ಪಾಂಡೆ ಹೇಳಿದರು.
ಯಾರಿಗೆಷ್ಟು ಡಿಸ್ಕೌಂಟ್?: ಎಲ್ಐಸಿ ಐಪಿಒ ಮೂಲಕ ವಿತರಣೆಯಾಗುವ ಷೇರುಗಳನ್ನು ಖರೀದಿಸುವುದಾದರೆ ಆಯ್ದ ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳಿಗೆ ಡಿಸ್ಕೌಂಟ್ ಸಿಗಲಿದೆ. ಹೂಡಿಕೆದಾರರು ಎಲ್ಐಸಿ ಪಾಲಿಸಿದಾರರಾಗಿದ್ದರೆ ಅಂಥವರು ಪ್ರತಿ ಷೇರನ್ನು 60 ರೂಪಾಯಿ ವಿನಾಯಿತಿಯಲ್ಲಿ ಖರೀದಿಸಬಹುದು. ಆದರೆ ಇದು 2022ರ ಏಪ್ರಿಲ್ 13ಕ್ಕಿಂತ ಮೊದಲು ಎಲ್ಐಸಿ ಪಾಲಿಸಿ ಖರೀದಿಸಿದವರಿಗೆ ಮಾತ್ರ ಅನ್ವಯ. ಅದೇ ರೀತಿ, ಎಲ್ಐಸಿ ಉದ್ಯೋಗಿ ಆಗಿದ್ದರೆ, ಅಂಥವರು ಪ್ರತಿ ಷೇರನ್ನು 45 ರೂಪಾಯಿ ವಿನಾಯಿತಿಯಲ್ಲಿ ಖರೀದಿಸಬಹುದು.
ಭಾರತದ ಅತಿದೊಡ್ಡ ಪಬ್ಲಿಕ್ ಇಶ್ಶೂ್ಯ ಇದಾಗಿದ್ದು, ಪಾಲಿಸಿದಾರರಿಗೆ ಮತ್ತು ಉದ್ಯೋಗಿಗಳಿಗೆ ವಿನಾಯಿತಿ ಸಿಗುತ್ತಿದೆ. ಇದರೊಂದಿಗೆ ಎಲ್ಐಸಿ 3.0 ರ ಯುಗ ಶುರುವಾಗಲಿದೆ. ಹೊಸ ಮೈಲಿಗಲ್ಲುಗಳೊಂದಿಗೆ ಎಲ್ಐಸಿ ತನ್ನ ವ್ಯವಹಾರಗಳನ್ನು ಮುಂದುವರಿಸಲಿದೆ. | ಎಂ.ಆರ್. ಕುಮಾರ್ ಎಲ್ಐಸಿ ಚೇರ್ಮನ್
ವರ್ಷ ವಿಳಂಬ: ಕಳೆದ ಹಣಕಾಸು ವರ್ಷದಲ್ಲೇ ಎಲ್ಐಸಿ ಐಪಿಒ ಬಿಡುಗಡೆಯಾ ಗಬೇಕಾಗಿತ್ತು. ಎಲ್ಐಸಿಯಲ್ಲಿದ್ದ ಸರ್ಕಾರದ ಷೇರುಗಳ ಪೈಕಿ ಶೇಕಡ 5 ಅನ್ನು ಐಪಿಒ ಮೂಲಕ ಮಾರಾಟ ಮಾಡಿ 60,000 ಕೋಟಿ ರೂಪಾಯಿ ಸಂಗ್ರಹಿಸು ವುದಕ್ಕೆ ಯೋಜನೆ ಸಿದ್ಧವಾಗಿತ್ತು. ಆದರೆ ಬದಲಾದ ಜಾಗತಿಕ ವಿದ್ಯಮಾನ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಐಪಿಒ ಗಾತ್ರ ಕುಗ್ಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.