ಜಗತ್ತಿನ ಅತಿದೊಡ್ಡ ಕೋವಿಡ್ 19 ಆರೈಕೆ ಕೇಂದ್ರ ಲೋಕಾರ್ಪಣೆ

covid
Published on

ನವದೆಹಲಿ: ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೆಂದ್ರವೆಂದು ಹೆಸರಾದ 10 ಸಾವಿರ ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ಇಲ್ಲಿನ ರಾಧಾ ಸೋಮಿ ಸತ್ಸಂಗ್ ಬಿಯಾಸ್‌ನಲ್ಲಿ ಉದ್ಘಾಟಿಸಿದರು.

ಸೌಮ್ಯ ಮತ್ತು ಲಕ್ಷಣರಹಿತ ಕರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಛತ್ತಾಪುರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.

ರೋಗಲಕ್ಷಣವಿಲ್ಲದ, ಆದರೆ ಮನೆಯಲ್ಲಿ ಐಸೋಲೇಶನ್ ಸೌಲಭ್ಯ ಸಾಧ್ಯವಾಗದವರಿಗೆ ಇದು ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ. ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ - ಅಂದಾಜು 20 ಫುಟ್ಬಾಲ್ ಮೈದಾನಗಳ ಗಾತ್ರ - ಮತ್ತು 200 ಆವರಣಗಳನ್ನು ಹೊಂದಿದ್ದು, ತಲಾ ಒಂದೊಂದು ಆವರಣದಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ.  ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ ಎಂದು ಇದರ ಅಧಿಕಾರಿಗಳು ಹೇಳಿದ್ದಾರೆ.

ದೆಹಲಿ ಸರ್ಕಾರವು ಆಡಳಿತಾತ್ಮಕ ಬೆಂಬಲವನ್ನು ನೀಡಿದ್ದು, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಕೇಂದ್ರವನ್ನು ನಿರ್ವಹಿಸುವ ನೋಡಲ್ ಏಜೆನ್ಸಿಯಾಗಲಿದೆ. ರಾಧಾ ಸಾಮಿ ಬಿಯಾಸ್​​ನ ಧಾರ್ಮಿಕ ಪಂಥದ ಸ್ವಯಂಸೇವಕರು ಕೇಂದ್ರವನ್ನು ನಡೆಸಲು ಸಹಾಯ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net