More

    ಕೋವಿಡ್​ ಎಫೆಕ್ಟ್​: ಬರ್ತ್​ ಡೇ ಪಾರ್ಟಿ ನೀಡಿದವನು ಆಸ್ಪತ್ರೆಗೆ; ಪಾಲ್ಗೊಂಡವನು ಮಸಣಕ್ಕೆ

    ಹೈದರಾಬಾದ್​: ನಗರದ ಖ್ಯಾತ ಚಿನ್ನಾಭರಣ ವ್ಯಾಪಾರಿ ನೀಡಿದ್ದ ಬರ್ತ್​ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಜ್ಯುವೆಲರಿ ಶಾಪ್​​ನ ಮಾಲೀಕನೊಬ್ಬ ಶನಿವಾರ ಕರೊನಾ ಸೋಂಕಿನಿಂದ ಮೃತಪಟ್ಟಿದ್ದರೆ, ಪಾರ್ಟಿ ನೀಡಿದವನು ಸೋಂಕಿನ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಪಾರ್ಟಿಯಲ್ಲಿ ನೂರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಎಲ್ಲರಿಗೂ ಆತಂಕ ಎದುರಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ.

    ಇದನ್ನೂ ಓದಿ; ಆ.15ಕ್ಕೆ ದೇಶೀಯ ಕರೊನಾ ಲಸಿಕೆ; ಜಾಗತಿಕ ಮಾನದಂಡದಂತೆ ಕ್ಲಿನಿಕಲ್ ಟ್ರಯಲ್​; ಐಸಿಎಂಆರ್​ ಸ್ಪಷ್ಟನೆ 

    ಬರ್ತ್​ಡೇ ಆಯೋಜಿಸಿದ ವ್ಯಕ್ತಿಯಿಂದಲೇ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದ್ದು, ಈ ಪಾರ್ಟಿ ಸೂಪರ್​ಸ್ಪ್ರೆಡ್ಡರ್​ ಆಗಲಿದೆ ಎಂಬ ಆತಂಕ ಆರೋಗ್ಯ ಇಲಾಖೆ ಅಧಿಕಾರಿಗಳದ್ದಾಗಿದೆ. ಹೀಗಾಗಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

    ಹೈದರಾಬಾದ್​ನಲ್ಲಿ ಬರ್ತ್​ಡೇ ಪಾರ್ಟಿ, ವಿದೇಶದಿಂದ ಮರಳಿದ ಖುಷಿಗೆ ಯುವಕರು ಗುಂಪುಗೂಡಿ ಸಂಭ್ರಮಿಸುತ್ತಿರುವುದು, ಕುಟುಂಬದ ಗೆಟ್-​ಟೂ-ಗೆದರ್​ ನಡೆಸುತ್ತಿರುವುದು ಮೊದಲಾದ ಕಾರಣಗಳಿಂದ ಸೋಂಕು ಹರಡುತ್ತಿರುವುದು ವ್ಯಾಪಕವಾಗಿದೆ.

    ಇದನ್ನೂ ಓದಿ; ಕರೊನಾದಿಂದ ಹೆಚ್ಚುತ್ತೆ ಪ್ರತಿರೋಧ ಶಕ್ತಿ; ಮರು ಸೋಂಕಿನ ಸಂಭಾವ್ಯತೆಯೂ ಕಡಿಮೆ 

    ಇತ್ತೀಚೆಗೆ ಮಗ ಹುಟ್ಟಿದ ಸಂಭ್ರಮದಲ್ಲಿ ಸಿಹಿ ಹಂಚಿದ್ದ ಪೇದೆಯೊಬ್ಬ 12 ಜನರಿಗೆ ಕರೊನಾ ಅಂಟಿಸಿದ್ದ. ಹೀಗಾಗಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಮೊದಲಾದ ನಿಯಮಗಳನ್ನು ಪಾಲಿಸಬೇಕೆಂದು ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts