ಉತ್ತಮ ನಾಗರಿಕರಾಗಲು ಕೃಷ್ಣಸ್ವಾಮಿ ಮಾರ್ಗ ಅನುಸರಿಸೋಣ

24-kollegal-1,,,,
ಪಟ್ಟಣದ ವಿಶ್ವಚೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಚೇತನೋತ್ಸವ ಸಮಾರಂಭದಲ್ಲಿ ಶ್ರೀ ಶ್ರೀ ಕಂಠಸ್ವಾಮೀಜಿ ಮಾತನಾಡಿದರು. ಪ್ರೇಮಲತಾ ಕೃಷ್ಣಸ್ವಾಮಿ, ರಾಧಾ ಹಿರೇಗೌಡರ್, ಹರ್ಷ, ಅಲೆಗ್ಸಾಂಡರ್ ಇತರರು ಇದ್ದರು.
Published on

ಕೊಳ್ಳೇಗಾಲ : ದಿ.ಎಚ್.ಕೃಷ್ಣಸ್ವಾಮಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಕಾರಣರಾಗಿದ್ದಾರೆ ಎಂದು ಮೈಸೂರಿನ ಪಂಚಗವಿ ಮಠ ಹಾಗೂ ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠಸ್ವಾಮೀಜಿ ಹೇಳಿದರು.

ಪಟ್ಟಣದ ವಿಶ್ವಚೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಚೇತನೋತ್ಸವ-2024 ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಎಚ್.ಕೃಷ್ಣಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಅವರ ಪತ್ನಿ ಪ್ರೇಮಲತಾ ಕೃಷ್ಣಸ್ವಾಮಿ ಹಾಗೂ ಪುತ್ರ ಮಹಾನಂದ ಕೃಷ್ಣಸ್ವಾಮಿ ನಡೆಯುತ್ತಿದ್ದಾರೆ. ಬುದ್ಧಿವಂತರನ್ನೇ ದಾಖಲಿಸಿಕೊಂಡು ಉತ್ತಮ ಫಲಿತಾಂಶ ಪಡೆಯುವುದು ಸಾಧನೆಯಲ್ಲ. ಕಡಿಮೆ ಅಂಕ ಪಡೆದವರನ್ನು ಸೇರಿಸಿಕೊಂಡು ಉತ್ತಮ ಫಲಿತಾಂಶ ತರುವುದು ಸಾಧನೆ. ಈ ಕೆಲಸವನ್ನು ವಿಶ್ವಚೇತನ ಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾಭ್ಯಾಸದ ಸಮಯದಲ್ಲಿ ವಿದ್ಯಾರ್ಥಿಗಳು ಉತ್ತಮ ನಡತೆ, ಶಿಕ್ಷಣದ ಕಡೆ ಗಮನಹರಿಸಬೇಕು. ಸಜ್ಜನರಾಗಿ ಬದುಕಲು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಿವೈಎಸ್ಪಿ ಎಚ್.ಮಹಾನಂದ ಮಾತನಾಡಿ, ನಮ್ಮ ತಂದೆ ಎಚ್.ಕೃಷ್ಣಸ್ವಾಮಿ ಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಸಮಾಜ ಸೇವಾ ಕಾರ್ಯದಲ್ಲೂ ತೊಡಗಿದ್ದರು. ಅವರು ಹಾಕಿಕೊಟ್ಟ ಬುನಾದಿಯಲ್ಲಿ ಶಿಕ್ಷಣ ಸೇವೆಯನ್ನು ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬಿಇಒ ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಪತ್ರಕರ್ತೆ ರಾಧಾ ಹಿರೇಗೌಡರ್, ಹಿನ್ನೆಲೆ ಗಾಯಕ ಶಶಾಂಕ್ ಶೇಷಗಿರಿ, ರೋಟರಿ ಮಿಡ್‌ಟೌನ್ ಪ್ರವೀಣ್ ಕುಮಾರ್, ಹರ್ಷ, ಶಾಲೆಯ ಮುಖ್ಯಶಿಕ್ಷಕ ಅಕ್ಬರ್, ಸಂಸ್ಥೆಯ ಸಂಯೋಜಕರಾದ ಜಗದೀಶ್, ರಾಜೇಶ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net