ಸುಂದರ ಕೋಲಾರ ನಗರ ಕಟ್ಟೋಣ

gowda jilladalitha
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು ಸಂಸದ ಎಂ.ಮಲ್ಲೇಶ್​ ಬಾಬು ಉದ್ಘಾಟಿಸಿದರು. ಶಾಸಕರಾದ ಕೊತ್ತೂರುಮಂಜುನಾಥ್​, ಎಂ.ಎಲ್​.ಅನಿಲ್​ ಕುಮಾರ್​, ಜಿಲ್ಲಾಧಿಕಾರಿ ಎಂ.ಆರ್​.ರವಿ ಇದ್ದರು.
Published on

ಕೋಲಾರ: ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಟ್ಟುಕೊಂಡು ಬೆಂಗಳೂರನ್ನು ಕಟ್ಟಿದರು. ಅಂತೆಯೇ, ಈಗ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳೆಲ್ಲ ಸೇರಿ ಸುಂದರ ಕೋಲಾರ ನಗರ ಕಟ್ಟೋಣ ಎಂದು ಸಂಸದ ಎಂ.ಮಲ್ಲೇಶ್​ ಬಾಬು ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಹಿಂದೆ ಗಣ್ಯರೆಲ್ಲರೂ ಸಮಾಜದ ಸುಧಾರಣೆಗಾಗಿ ಶ್ರಮಿಸಿದ್ದಾರೆ. ಅವರ ಹಾದಿಯಲ್ಲಿ ನಾವು ಸಾಗಬೇಕಾಗಿದೆ ಎಂದರು.

ಪ್ರಾಂಶುಪಾಲ ನಾಗಾನಂದ ಕೆಂಪರಾಜ್​ ಉಪನ್ಯಾಸ ನೀಡಿದರು. ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ, ಕೆಯುಡಿಎ ಅಧ್ಯಕ್ಷ ಮಹಮದ್​ ಹನೀಫ್​, ಜಿಪಂ ಉಪ ಕಾರ್ಯದರ್ಶಿ ರಮೇಶ್​, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಗೌರವಾಧ್ಯಕ್ಷ ಬೀಸಪ್ಪ ಗೌಡ, ನಿರ್ದೇಶಕ ರಾಮಚಂದ್ರಪ್ಪ, ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​, ನಗರಸಭೆ ಸದಸ್ಯರಾದ ಮುರಳಿಗೌಡ, ರಾಕೇಶ್​, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್​, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ ಉಪಸ್ಥಿತರಿದ್ದರು.

* ಮಹನೀಯರ ಸ್ಮರಣೆ

ಕೆಂಪೇಗೌಡರು ಒಂದು ಜಾತಿಗೆ ಸಿಮೀತರಾಗಿಲ್ಲ. ಜಾತ್ಯತಿತ ಮಾನೋಭಾವದಿಂದ ಜಾತಿಗೊಂದು ಪೇಟೆ ನಿರ್ಮಾಣ ಮಾಡಿದ್ದಾರೆ. ಆದರೆ, ಈಗಿನ ಕಾಲದವರಿಗೆ ಆ ಮನೋಭಾವ ಇಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಬೇಸರಿದರು.

ರಾಜ್ಯದ ಜನ ಚೆನ್ನಾಗಿರಬೇಕು, ಮುಂದೆ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಮುಂದಾಲೋಚನೆ ಕೆಂಪೇಗೌಡರು, ಮೈಸೂರು ಮಹಾರಾಜರಿಗೆ ಇತ್ತು. ಅದ್ದರಿಂದಲೇ ಇಡೀ ದೇಶ ಆ ಮಹನೀಯರನ್ನು ಸ್ಮರಿಸುತ್ತಿದೆ ಎಂದು ತಿಳಿಸಿದರು.

ಬಸ್​ ನಿಲ್ದಾಣ ಸಮೀಪ ನಾಲ್ಕು ಚಕ್ರದ ಭಾವಿ ಇತ್ತು, ಈಗ ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಬೇಕು. ಮುಂದಿನ ಪೀಳಿಗೆಯ ಜನ ಚೆನ್ನಾಗಿರಬೇಕ ಅಂತ ಕೆರೆ ಕುಂಟೆ ನಿರ್ಮಾಣ ಮಾಡಿದರು. ಅವುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ತೆರವು ಮಾಡಲು ಮುಂದಾದರೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಕೊಡುಗೆ ಏನು ಎಂದು ಪ್ರಶ್ನೆ. ಕೆಸಿ ರೆಡ್ಡಿ, ಟಿ.ಚನ್ನಯ್ಯ, ಎಂ.ವಿ.ಕೃಷ್ಣಪ್ಪ, ಬೈರೇಗೌಡರು ಸಹ ಜಿಲ್ಲೆಯವರಾಗಿದ್ದಾರೆ. ನೆನಪುಗಳನ್ನು ಶಾಶ್ವತವಾಗಿ ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

* ಬದುಕು, ಜೀವನ ಆದರ್ಶ

ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿ, ಸಮುದಾಯದಲ್ಲಿ ವ್ಯಕ್ತಿ ಜನಿಸುವುದು ಆಕಸ್ಮಿಕ. ಒಕ್ಕಲುತನ ಮಾಡುವ ಸಮುದಾಯಕ್ಕೆ ಜಾತಿ ಸಿಮೀತವಿಲ್ಲ. ಬೆಳೆದಿದ್ದನ್ನು ಜಗತ್ತಿಗೆ ಅರ್ಪಿಸಿದರು ಎಂದು ಹೇಳಿದರು.

ನಾಡಪ್ರಭು ಬೆಂಗಳೂರನ್ನು ಕಟ್ಟಿದರು, ಅವರ ಹಾದಿಯಲ್ಲಿ ಇಲ್ಲಿ ಒಂದು ನಗರ ಕಟ್ಟಬೇಕು ಅಂತ ಪರಿಕಲ್ಪನೆ ಹುಟ್ಟಿತು. ರಾಜಕಾರಣಿಗಳು ಮುಂದಿನ ಚುನಾವಣೆ ಬಗ್ಗೆ ಹಾಗೂ ಮುತ್ಸದ್ದಿಗಳು ಎಂದಿಗೂ ಮುಂದಿನ ಪೀಳಿಗೆ ಬಗ್ಗೆ ಅಲೋಚನೆ ಮಾಡಿ ಕಾರ್ಯಸಿದ್ಧಿಗೊಳಿಸಲು ಮುಂದಾಗುತ್ತಾರೆ, ಇದಕ್ಕೆ ನಾಡಪ್ರಭು ಸಾ ಎಂದು ಸ್ಮರಿಸಿದರು.

ನದಿಮೂಲಗಳು ಇಲ್ಲದ ಜಿಲ್ಲೆಗಳಲ್ಲಿ ಕೋಲಾರವು ಒಂದು. ಪೂರ್ವಜರು 3,232 ಕೆರೆಗಳನ್ನು ನಿರ್ಮಾಣ ಮಾಡಿದ್ದು, ಕೃಷಿ, ಆರೋಗ್ಯ, ಬದುಕನ್ನು ಹಸನಾಗಿಸುತ್ತಿದೆ. ಅದೇ ರೀತಿ ಕೆಂಪೇಗೌಡರು ಮಾಡಿದ್ದು, ಅವರ ಬದುಕು, ಜೀವನ ಆದರ್ಶವಾಗುತ್ತದೆ. ಈ ಬಗ್ಗೆ ಮಕ್ಕಳಿಗೆ ಪರಿಚಯಿಸಬೇಕು ಎಂದರು.

* ಗಣ್ಯರ ಹೆಜ್ಜೆಯ ಅರಿವು ಅಗತ್ಯ

ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ಕೆಂಪೇಗೌಡರು, ಕುವೆಂಪು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ಜಾತ್ಯತಿತರಾಗಿ ಗುರುತಿಸಿಕೊಂಡವರು. ಗಣ್ಯರ ಹೆಜ್ಜೆ ಗುರುತುಗಳ ಬಗ್ಗೆ ಅರಿಯಬೇಕು. ಬಹುಸಂಖ್ಯಾತರು ಇರುವ ಸಮುದಾಯ ನಾಯಕರ ಜಯಂತಿಗಳಿಗೆ ಕೊಡುವ ಪ್ರಾಮುಖ್ಯತೆ ಕಾರ್ಯಕ್ರಮಕ್ಕೆ ಕೊಡುತ್ತಿಲ್ಲ. ವಿಚಾರ ಸಂಕಿರಣಗಳು ನಡೆದಾಗ ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಸೌಧವನ್ನು ಕೆಂಗಲ್​ ಹನುಮಂತಯ್ಯ, ವಿಕಾಸಸೌಧವನ್ನು ಎಸ್​.ಎಂ.ಕೃಷ್ಣ, ಬೆಳಗಾವಿ ಸುವರ್ಣ ಸೌಧವನ್ನು ಕುಮಾರಸ್ವಾಮಿ ಕಟ್ಟಿ ಜಾತ್ಯತಿತ ವ್ಯಕ್ತಿಗಳಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಬೇರೆ ಬೇರೆ ಸಮಯದಾಯದ ನಾಯಕರು ಕಾರ್ಯಕ್ರಮಗಳಿಗೆ ಕೆಂಪೇಗೌಡರ ಹೆಸರಿಟ್ಟಿದ್ದಾರೆ. ಬೆಂಗಳೂರಿನ ನಿಮಾರ್ತೃ ಅಂತ ಎಲ್ಲರಿಗೂ ಗೊತ್ತಿರುವ ವಿಚಾರ, ಇದರಿಂದಲೇ ಇಡೀ ಪ್ರಪಂಚದ ಗಮನ ಬೆಂಗಳೂರು ಸೆಳೆದಿದೆ. ಐಟಿಬಿಟಿ, ಸಿಲಿಕಾನ್​ ಸಿಟಿ ಹೀಗೆ ಹಲವು ರೀತಿ ಬೆಳೆದಿದೆ. ಭಾಗದಲ್ಲಿ ನಾವು ಮಾತ್ರ ಇಲ್ಲ. ಬೇರೆ ಬೇರೆ ದೇಶಗಳವರು, ರಾಜ್ಯದವರು ಬಂದು ಬದುಕು ರೂಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಕೋಟ್​..

ಜಯಂತಿಗಳನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮಹತ್ವ ಕಳೆದುಕೊಳ್ಳುತ್ತಿವೆ. ಜಯಂತಿಗಳು ಜಾಸ್ತಿಯಾದಷ್ಟು ಸರ್ಕಾರಿ ರಜೆಗಳು ಹೆಚ್ಚಾಗಿವೆ. ಇದನ್ನು ಸರ್ಕಾರ ಬದಲಾವಣೆ ಮಾಡಬೇಕಾಗಿದೆ.

- ಇಂಚರ ಗೋವಿಂದರಾಜು, ಎಂಎಲ್ಸಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net