

ಕೋಲಾರ: ತ್ಯಾಗಕ್ಕೆ ಹೆಸರು, ಸಮಾಜದ ಶ್ರೇಯಸ್ಸು ಗಮನಿಸುವುದು ಒಕ್ಕಲಿಗರು. ಸಮುದಾಯಕ್ಕೆ ಸಂಟನೆಗೆ ಒತ್ತು ನೀಡುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದಿಂದ ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಕೆಂಪೇಗೌಡರು ಇಡೀ ಬೆಂಗಳೂರನ್ನು ಒಕ್ಕಲಿಗರ ನಗರ ಅಂತ ಮಾಡಿಲ್ಲ. ಸಮುದಾಯಕ್ಕೊಂದು ಪೇಟೆ ನಿಮಾರ್ಣ ಮಾಡಿದ್ದಾರೆ. ಆ ಮೂಲಕ ಇಡೀ ವಿಶ್ವವೇ ಬೆಂಗಳೂರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಕೆಂಪೇಗೌಡರು ದಕ್ಷ ಆಡಳಿತಗಾರರಾಗಿದ್ದರು. ಮುಂದಾಲೋಚನೆ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ಕುವೆಂಪು, ದೇವೇಗೌಡ, ಬಾಲಗಂಗಾಧರನಾಥ ಸ್ವಾಮೀಜಿ ಕಟ್ಟಿರುವ ಸಮುದಾಯ ಮತ್ತಷ್ಟು ಬಲಿಷ್ಠವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಮುದಾಯ ಸಂಘಟನೆಯಾಗಬೇಕು ಎಂದರು.
ರಾಜ್ಯಕ್ಕೆ ಮಾದರಿಯಾಗಿ ಕೆಂಪೇಗೌಡರ ಜಯಂತಿಯನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸ್ವಯಂ ಪ್ರೇರಿತರಾಗಿ ಪಲ್ಲಕ್ಕಿಗಳನ್ನು ಕರೆ ತಂದು ಹಬ್ಬದ ವಾತಾವರಣ ಸೃಷ್ಟಿ ಮಾಡಿರುವುದು ಶ್ಲಾನೀಯ ಎಂದು ಸಂತಸವ್ಯಕ್ತಪಡಿಸಿದರು.
ಸಂದ ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯ ದೊಡ್ಡ ಪ್ರಮಾಣದಲ್ಲಿ ಇದೆ. ಶಿಕ್ಷಣ ಸಂಸ್ಥೆ, ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ 10 ಎಕರೆ ಜಾಗ ಮಂಜೂರು ಮಾಡಬೇಕು ಎಂದು ಕೋರಿದರು.
ಹಲವಾರು ದಶಕಗಳು ಕಳೆದರೂ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡಿಲ್ಲ. ಸಂದಿಂದ ನಿರ್ಮಾಣ ಮಾಡುತ್ತಿರುವ ನೂತನ ಕಟ್ಟಡದ ಆವರಣದಲ್ಲಿ ನಿರ್ಮಾಣ ಮಾಡಲಾಗುವುದು. ಸರ್ಕಾರದಿಂದಲೂ ಕೂಡ ನಗರ ಭಾಗದಲ್ಲಿ ಒಂದು ಕಡೆ ಪುತ್ಥಳಿ ನಿರ್ಮಾಣ ಮಾಡಿಕೊಡಬೇಕು ಎಂದು ಹೇಳಿದರು.
ಎಂಎಲ್ಸಿ ಇಂಚರ ಗೋವಿಂದರಾಜು, ಕೋಮುಲ್ ನಿರ್ದೇಶಕರಾದ ಡಿ.ವಿ.ಹರೀಶ್, ಚಲುವನಹಳ್ಳಿ ನಾಗರಾಜ್, ಜಿಪಂ ಉಪ ಕಾರ್ಯದರ್ಶಿ ರಮೇಶ್, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿಎಸ್, ತಹಸೀಲ್ದಾರ್ ಡಾ.ಎಂ.ನಯನಾ, ನಗರಸಭೆ ಸದಸ್ಯರಾದ ಪ್ರವಿಣ್ಗೌಡ, ಮುರಳಿಗೌಡ, ರಾಕೇಶ್, ಸಂದ ಗೌರವಾಧ್ಯಕ್ಷ ಬೀಸಪ್ಪ ಗೌಡ, ಉಪಾಧ್ಯಕ್ಷ ವಿ.ಕೃಷ್ಣಾರೆಡ್ಡಿ, ನಿರ್ದೇಶಕರಾದ ಡೆಕ್ಕನ್ ರಾಮಕೃಷ್ಣಪ್ಪ, ಮುಖಂಡರಾದ ಸಿಎಂಆರ್ ಶ್ರೀನಾಥ್, ಕುರ್ಕಿ ರಾಜೇಶ್ವರಿ, ಊರುಬಾಗಿಲು ಶ್ರೀನಿವಾಸ್, ಬಾಬು ಮೌನಿ, ವಿ.ರಾಮು ಇತರರು ಇದ್ದರು.
* ಮೆರವಣಿಗೆ ಸಡಗರ
ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಪಲ್ಲಕ್ಕಿ ಹಾಗೂ ಸ್ಥಬ್ಧ ಚಿತ್ರಗಳ ಮೆರವಣಿ ಅದ್ದೂರಿಯಾಗಿ ನಡೆಯಿತು. ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಎಂಎಲ್ಸಿ ಇಂಚರ ಗೋವಿಂದರಾಜು, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ತಹಸೀಲ್ದಾರ್ ಡಾ.ಎಂ.ನಯನಾ, ಸಂದ ಜಿಲ್ಲಾಧ್ಯಕ್ಷ ಕೆ.ವಿ.ಶಂಕರಪ್ಪ ಚಾಲನೆ ನೀಡಿದರು. ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಮೆರವಣಿಗೆ ಎಂಜಿ ರಸ್ತೆ, ಎಂಬಿ ರಸ್ತೆ, ಹೊಸ ಬಸ್ ನಿಲ್ದಾಣ, ಮೆಕ್ಕೆ ವೃತ್ತ ಮಾರ್ಗವಾಗಿ ಸಾಗಿ ರಂಗಮಂದಿರದ ಸಮೀಪ ಅಂತ್ಯಗೊಂಡಿತು. ಯುವಕರು, ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ತಮಟೆ ಸದ್ದಿಗೆ ಕುಣಿದು ಸಂಭ್ರಮಿಸಿದರು.ಕೀಲು ಕುದುರೆ, ಪಟ ಕುಣಿತ, ತಮಟೆ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ಮೆರವಣಿಗೆಯ ದಾರಿ ಉದ್ದಕ್ಕೂ ಕೋಮುಲ್ನಿಂದ ಮಜ್ಜಿಗೆ ವಿತರಿಸಿದರೆ, ಕೆಲ ಸಮಾಜದ ಸೇವಕರು ಆಯ್ದ ಕಡೆ ಊಟದ ವ್ಯವಸ್ಥೆ ಮಾಡಿದ್ದರು.