

ಅಳವಂಡಿ: ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜ ಸದೃಢವಾಗಿರುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.
ಇದನ್ನೂ ಓದಿ:ಅಕ್ಟೋಬರ್ 4 ರಿಂದ ಆಕ್ಷೇಪಣಾ ಪತ್ರ ಅಭಿಯಾನ
ಸಮೀಪದ ನಿಲೋಗಿಪುರದ ಸಹಿಪ್ರಾ ಶಾಲೆಯಲ್ಲಿ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನದಡಿ ಗುರುವಾರ ಹಮ್ಮಿಕೊಂಡಿದ್ದ ಹದಿಹರೆಯದವರ ಆರೋಗ್ಯ, ಋತುಚಕ್ರದ ನೈರ್ಮಲ್ಯ ಮತ್ತು ಎಚ್‌ಬಿ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಬಲಪಡಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಅಧಿಕಾರಿಗಳು ಮಹಿಳೆಯರಿಗೆ ತಲುಪಿಸಬೇಕು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಮಾತನಾಡಿ, ಹದಿಹರೆಯದವರ ಆರೋಗ್ಯ, ನೈರ್ಮಲ್ಯ, ದಿನಚರಿ ಬಗ್ಗೆ ಮಾಹಿತಿ ನೀಡಿದರು. ನಂತರ ನಿಲೋಗಿಪುರ ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿ ಬಾಲಕಿಯರ ಮತ್ತು ಹದಿ ಹರೆಯದ ಮಹಿಳೆಯರಲ್ಲಿ ಎಚ್‌ಬಿ ಪ್ರಮಾಣ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದರು.
ಮುಖ್ಯಶಿಕ್ಷಕ ಗುರುರಾಜ ಪಾಟೀಲ, ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಸಿ.ಎಚ್.ಪ್ರತಿಭಾ, ಶೋಭಾ, ನರ್ಸಿಂಗ್ ಆಫೀಸರ್ ರೇಷ್ಮಾ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಲಕ್ಷ್ಮೀದೇವಿ ಇತರರಿದ್ದರು.