

ಶಿವಮೊಗ್ಗ: ತೃತೀಯ ಲಿಂಗಿಗಳನ್ನು ಸಮಾಜ ಇನ್ನೂ ಕೀಳಾಗಿ ಕಾಣುತ್ತಿದೆ. ಆ ಸಮುದಾಯಕ್ಕೆ ಅನೇಕ ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ವಕೀಲ ಕೆ.ಪಿ.ಶ್ರೀಪಾಲ್ ಹೇಳಿದರು.
ಗುರುವಾರ ಏರ್ಪಡಿಸಿದ್ದ ರಕ್ಷಾ ಸಮುದಾಯದ 12ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮನೆಯಿಂದ ಹೊರದೂಡಲ್ಪಟ್ಟ ತೃತೀಯ ಲಿಂಗಿಗಳನ್ನು ಮತ್ತೆ ಮನೆಗೆ ಸೇರಿಸುವ ಪ್ರಯತ್ನ ಸಮಾಜ ಹಾಗೂ ಸರ್ಕಾರದಿಂದ ಆಗಬೇಕಿದೆ. ತೃತೀಯ ಲಿಂಗಿಗಳು ಭಿಕ್ಷಾಟನೆ ಮಾಡುವ ಬದಲಿಗೆ ಶ್ರಮವಹಿಸಿ ದುಡಿಯಬೇಕು ಎಂದರು.
ರಕ್ಷಾ ಸಮುದಾಯ ತೃತೀಯ ಲಿಂಗಿಗಳ ಪರವಾಗಿ ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿವೆ. ನ್ಯಾಯಾಲಯ ಹಾಗೂ ಕಾನೂನು ಸೇವಾ ಪ್ರಾಧಿಕಾರದೊಂದಿಗೂ ರಕ್ಷಾ ಸಮುದಾಯ ಕೈ ಜೋಡಿಸಿದೆ. ತೃತೀಯ ಲಿಂಗಿಗಳಿಗೆ ನ್ಯಾಯಬದ್ಧ ಸವಲತ್ತು ದೊರಕಿಸಲು ಶ್ರಮಿಸುತ್ತಿದೆ ಎಂದರು.
ಶಿಕಾರಿಪುರ ಪ್ರಥಮ ದರ್ಜೆಯ ಕಾಲೇಜಿನ ಉಪನ್ಯಾಸಕಿ ಮಂಜುಳಾ ಮಾತನಾಡಿ, ತೃತೀಯ ಲಿಂಗಿಗಳು ಕಿಳರಿಮೆ ತೊರೆಯಬೇಕು. ಸಮಾಜದೊಂದಿಗೆ ಹೊಂದಿಕೊಳ್ಳಬೇಕು. ಅದೇ ಸಮಾಜ ಅವರನ್ನೂ ಪ್ರೀತಿಸಬೇಕು. ಸಮಾಜ ಮತ್ತು ತೃತೀಯ ಲಿಂಗಿಗಳ ನಡುವೆ ಅಸಹ್ಯವಾದ ಭಯದ ವಾತಾವರಣವಿದೆ. ಅದು ದೂರಾಗಬೇಕು ಎಂದು ಅಭಿಪ್ರಾಯಪಟ್ಟರು.
ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷ ನಾಜೀಮಾ ಮಾತನಾಡಿ, ತೃತೀಯ ಲಿಂಗಿಗಳು ಅತ್ಯಾಚಾರದಂತ ಸಂಕಟವನ್ನು ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಅವರಿಗೆ ಸಿಗುವ ಸೌಲಭ್ಯಗಳೂ ಕಡಿಮೆ. ಮನೆ ತೊರೆದವರಿಗೆ ಶಾಶ್ವತ ಸೂರು ಒದಗಿಸುವ ಕಾರ್ಯವಾಗಬೇಕು ಎಂದರು.
ರಕ್ಷಾ ಸಮುದಾಯದ ಅಧ್ಯಕ್ಷ ಮೊಹಮ್ಮದ್ ಸೈುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶೋಭಾ ದೇವರಾಜ್, ತ್ರಿಮೂರ್ತಿ ಆರ್ೀ, ಚಾಂದಿನಿ, ಜಯಲಕ್ಷ್ಮೀ, ಸವಿತಾ, ಲಕ್ಷ್ಮೀ, ಪ್ರೇಮಾ ಎನ್.ಶೆಟ್ಟಿ, ಉಮಾ ಮುಂತಾದವರಿದ್ದರು.