ಪಠ್ಯ ಪುಸ್ತಕಗಳಲ್ಲಿ ಜನಪದ ಪದ್ಯಗಳು ಹೆಚ್ಚಾಗಲಿ

ಕಡೂರಿನ ಮತಿಘಟ್ಟದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದಿಂದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ವಿಶ್ವ ಜಾನಪದ ಬುಡಕಟ್ಟು ದಿನಾಚರಣೆ ಆಯೋಜಿಸಲಾಗಿತ್ತು.
ಕಡೂರಿನ ಮತಿಘಟ್ಟದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲ್ಲಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದಿಂದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ವಿಶ್ವ ಜಾನಪದ ಬುಡಕಟ್ಟು ದಿನಾಚರಣೆ ಆಯೋಜಿಸಲಾಗಿತ್ತು.
Published on
ಕಡೂರು:ಶಾಲೆ, ಕಾಲೇಜು ಪಠ್ಯ ಪುಸ್ತಕಗಳಲ್ಲಿ ಜನಪದ ಪದ್ಯಗಳ ಅಳವಡಿಕೆ ಹೆಚ್ಚಾಗಬೇಕು ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಎಸ್.ಬಾಲಾಜಿ ಹೇಳಿದರು.
ಮತಿಘಟ್ಟದ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಮಹಿಳಾ ಘಟಕ ಹಾಗೂ ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ವಿಶ್ವ ಜಾನಪದ ಬುಡಕಟ್ಟು ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಜನಪದ ಹಾಗೂ ಬುಡಕಟ್ಟು ಸಮುದಾಯದವರ ಕೊಡುಗೆ ಅಪಾರ. ಪರಭಾಷೆಯ ಒಂದು ಶಬ್ದವನ್ನೂ ಬಳಸದೆ ಕನ್ನಡದ ಅಸ್ಮಿತೆ ಕಾಪಾಡಿದ ಹೆಮ್ಮೆ ನಮ್ಮ ಗ್ರಾಮೀಣ ಜನಪದ ಕಲಾವಿದರದ್ದು. ಕನ್ನಡ ಭಾಷೆ ಉಳಿವಿಗಾಗಿ ಜನಪದ ಲಾವಣಿಗಳು, ಗೀಗಿ ಪದಗಳು, ಕರ್ನಾಟಕದ ಏಕೀಕರಣದ ಕಾಲದಿಂದಲೂ ಜನಪದ ಕೊಡುಗೆ ಅಪಾರವಾಗಿದೆ. ಶಾಲಾ ಮತ್ತು ಕಾಲೇಜು ಪಠ್ಯ ಪುಸ್ತಕಗಳಲ್ಲಿ ಜನಪದ ಕಲಾ ಪ್ರಕಾರಗಳ ಗದ್ಯ ಪದ್ಯಗಳ ಅಳವಡಿಕೆ ಹೆಚ್ಚಾಗಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.
ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಶೈಲಿಯ ಜನಪದದ ಸಂಸ್ಕೃತಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ತಾಲೂಕು ಘಟಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಯುವ ಪೀಳಿಗೆಯೂ ಜಾನಪದ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ವಹಿಸಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net