ಪಕ್ಷದ ಅಧ್ಯಕ್ಷ ಸ್ಥಾನದ ಜತೆ ಸಚಿವ ಸ್ಥಾನವೂ ಇರಲಿ; ಈಶ್ವರ ಖಂಡ್ರೆ ಬೇಡಿಕೆ?

ಪಕ್ಷದ ಅಧ್ಯಕ್ಷ ಸ್ಥಾನದ ಜತೆ ಸಚಿವ ಸ್ಥಾನವೂ ಇರಲಿ; ಈಶ್ವರ ಖಂಡ್ರೆ ಬೇಡಿಕೆ?
Published on

ಬೆಂಗಳೂರು: ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷರ ನೇಮಕ ವಿಚಾರವಾಗಿ ಸಚಿವ ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿದ್ದು ಅವರು ಶುಕ್ರವಾರ ಎಐಸಿಸಿ ಅಧ್ಯಕ್ಷರನ್ನೂ ಭೇಟಿ ಮಾಡಿ ವಿವಿಧ ವಿಚಾರ ಚರ್ಚೆ ನಡೆಸಿದ್ದಾರೆ.

ಉಪಮುಖ್ಯಮಂತ್ರಿಯಾಗಿದ್ದುಕೊಂಡು ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿರುವ ಡಿ.ಕೆ.ಶಿವಕುಮಾರ್ ಅವರ ಹೊರೆಯನ್ನು ಇಳಿಸುವ ಉದ್ದೇಶದಿಂದ ಈಶ್ವರ ಖಂಡ್ರೆ ಅವರಿಗೆ ಪಕ್ಷದ ಅಧ್ಯಕ್ಷ ಜವಾಬ್ದಾರಿ ವಹಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೆಸರೂ ಸಹ ಕೇಳಿಬಂದಿತ್ತು.

ಈ ನಡುವೆ ಖಂಡ್ರೆಯವರೇ ಬಹುತೇಕ ಪಕ್ಷದ ಹೊಣೆ ಹೊರುವ ಸಾಧ್ಯತೆ ದಟ್ಟವಾಗಿದೆ. ಹಾಗೆಯೇ ತಮಗೆ ಪಕ್ಷದ ಜವಾಬ್ದಾರಿಯಿಂದಿಗೆ ಕೆಲ ಸಮಯ ಸಚಿವ ಸ್ಥಾನದಲ್ಲೂ ಮುಂದುವರಿಸಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಶುಕ್ರವಾರ ಈ ಚರ್ಚೆ ಕುರಿತು ಪ್ರತಿಕ್ರಿಯೆ ನೀಡಿದ, ಎಐಸಿಸಿ ಅಧ್ಯಕ್ಷರನ್ನ ಭೇಟಿ ಮಾಡಲು ಬಂದಿದ್ದೆ.

ಖರ್ಗೆಯವರ ಜತೆ ಇತ್ತೀಚಿನ ಕೆಲವೊಂದು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದೆ. ಯಾರೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಚರ್ಚಿಸಿಲ್ಲ. ನನ್ನ ಜತೆ ಸಿಎಂ, ಹೈಕಮಾಂಡ್ ಯಾರೂ ಚರ್ಚಿಸಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ನಾನು ಖರ್ಗೆಯವರ ಜತೆ ಮಾಡತನಾಡಿಲ್ಲ ಎಂದರು.

ಶಾಸಕರ ಅನುದಾನ ಬೇಸರ ವಿಚಾರ ಕುರಿತು ಪ್ರತಿಕ್ರಿಯಿಸಿ, ಅನುದಾನ ಬೇಡೋದು ತಪ್ಪೇನಿದೆ. ನಾನು ನನ್ನ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೇಳುತ್ತೇನೆ. ಸಿಎಂ ಅದೆಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಹಾಗೇನು ಅನುದಾನ ಕೊಟ್ಟಿಲ್ಲ ಅಂತಿಲ್ಲ. ಇನ್ನು ಹೆಚ್ಚು ಅನುದಾನ ಕೇಳಿರೋದು ಅಷ್ಟೆ

ಅದರಲ್ಲಿ ತಪ್ಪೇನಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net