ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಲಿ

sanskrit
ಶಿವಮೊಗ್ಗ ಬಿಬಿ ರಸ್ತೆಯ ಸಂಸ್ಕೃತ ಭವನದಲ್ಲಿ ವಾಸುದೇವನ್ ಅವರನ್ನು ಗೌರವಿಸಲಾಯಿತು. ಟಿ.ವಿ.ನರಸಿಂಹ ಮೂರ್ತಿ, ಅ.ನಾ.ವಿಜಯೇಂದ್ರ ರಾವ್ ಇದ್ದರು.
Published on

ಶಿವಮೊಗ್ಗ: ನಗರದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಆಶ್ರಯದಲ್ಲಿ ಸಂಸ್ಕೃತ ಸಂಶೋಧನಾ ಕೇಂದ್ರ ಆರಂಭವಾಗಬೇಕು ಎಂದು ಚೆನ್ನೈನ ಹಿರಿಯ ವಕೀಲ, ಸಂಸ್ಕೃತ ವಿದ್ವಾಂಸ ವಾಸುದೇವನ್ ಅಭಿಪ್ರಾಯಪಟ್ಟರು.

ನಗರದ ಬಿಬಿ ರಸ್ತೆಯ ಸಂಸ್ಕೃತ ಭವನದಲ್ಲಿ ಬುಧವಾರ ಸಂಸ್ಕೃತ ಸಂಶೋಧನೆಯ ಪ್ರಯೋಜನದ ಕುರಿತು ಮಾತನಾಡಿದ ಅವರು, ಸಂಶೋಧಕರು ಸಂಸ್ಕೃತದ ಬಗ್ಗೆ ಮಾಡಿದ ಸಾಧನೆ, ಸಂಶೋಧಿಸಿದ ಸಂಗತಿಗಳನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕಾಗಿದೆ. ಈ ನಿಟ್ಟಿನಲ್ಲಿ ತರಣೋದಯ ಸಂಸ್ಕೃತ ಸೇವಾ ಸಂಸ್ಥೆ ಕಾರ್ಯೋನ್ಮುಖವಾಗಬೇಕೆಂದು ಎಂದು ಹೇಳಿದರು.

ವೇದ ಉಪನಿಷತ್‌ಗಳಲ್ಲಿರುವ ಸಾರವನ್ನು ಜಗತ್ತಿಗೆ ಪರಿಚಯಿಸುವ ಜತೆಗೆ ಯುವ ಬರಹಗಾರರಿಗೆ ಈ ಸಂಸ್ಥೆ ವೇದಿಕೆಯಾಗಲಿ. ಸಂಸ್ಕೃತ ಭಾಷೆಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಂಸ್ಕೃತ ಶೋಧ ಪ್ರಬಂಧದ ಮೂಲಕ ಶಾಸೀಯ ಭಾಷೆಯ ಘನತೆ, ವ್ಯಾಕರಣ ಶುದ್ಧತೆ ಮತ್ತು ಶೈಲಿಯ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಬಹುದು. ಸಾಂಸ್ಕೃತಿಕ ಪರಂಪರೆ ಸಂರಕ್ಷಣೆ ಹಾಗೂ ಭಾರತೀಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ತಾತ್ವಿಕ ಪರಂಪರೆಯ ಅನನ್ಯತೆಯನ್ನು ಸಂರಕ್ಷಿಸಿದರೆ ಮುಂದಿನ ತಲೆಮಾರಿಗೆ ಇದು ಪಾಠವಾಗುತ್ತದೆ ಎಂದು ಹೇಳಿದರು.

ವಾಸುದೇವನ್ ಅವರಿಗೆ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಗೌರವ ಸಮರ್ಪಿಸಿದರು. ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ನಿರ್ದೇಶಕರಾದ ಎಸ್.ಎಸ್.ವಾಗೀಶ್, ವಿಶೇಷ ಅಹ್ವಾನಿತ ನಿರ್ದೇಶಕರಾದ ಎನ್.ಗೋಪಿನಾಥ್, ಎಚ್.ಎಸ್.ನಾಗರಾಜ, ದಿಲೀಪ್ ನಾಡಿಗ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net