ಮನದಲ್ಲಿ ಕನ್ನಡ ಭಾಷಾ ಪ್ರೇಮ ಮೂಡಿಬರಲಿ: ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್

ಭೈರವಿ ಗೌಡತಿಯರ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸುಮಾ ಪ್ರಶಾಂತ, ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ರೇವತಿ ಕೃಷ್ಣಪ್ಪ, ರಾಧಾ ಲಂಕೇಗೌಡ, ಡಾ.ಹೇಮಾ ನಂದೀಶ್, ಕೋಮಲ ವೆಂಕಟೇಶ. ಸುಶೀಲಾಬಸವರಾಜು, ಲಕ್ಷ್ಮೀ ಕಿರಣ್ ಇತರರು ಇದ್ದರು.
ಭೈರವಿ ಗೌಡತಿಯರ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸುಮಾ ಪ್ರಶಾಂತ, ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ರೇವತಿ ಕೃಷ್ಣಪ್ಪ, ರಾಧಾ ಲಂಕೇಗೌಡ, ಡಾ.ಹೇಮಾ ನಂದೀಶ್, ಕೋಮಲ ವೆಂಕಟೇಶ. ಸುಶೀಲಾಬಸವರಾಜು, ಲಕ್ಷ್ಮೀ ಕಿರಣ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾತೃಭಾಷೆ ಪ್ರೇಮ ನಮ್ಮ ಮನದಿಂದ ಮೂಡಿಬರಬೇಕು
  • ರಾಜ್ಯೋತ್ಸವ ನವೆಂಬರ್ ಗೆ ಸೀಮಿತವಾಗದಿರಲಿ
ಮೈಸೂರು: ಕನ್ನಡ ಭಾಷಾ ಪ್ರೇಮವನ್ನು ಮಾತಿನಲ್ಲಿ ತಿಳಿಸುವಂತದ್ದಲ್ಲ, ಅದು ನಮ್ಮ ಮನದಿಂದ ಮೂಡಿಬರುವಂತಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಿಳಿಸಿದರು.
ಭೈರವಿ ಗೌಡತಿಯರ ಬಳಗದಿಂದ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಸದಾ ಕಾಲ ನಮ್ಮ ಮನದಲ್ಲಿ ಉಳಿಸಿಕೊಂಡಿರಬೇಕು, ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ. ಇದು ಇಲ್ಲಿ ಆ ರಂಗಿನೊಂದಿಗೆ ಮಹಿಳೆಯರ ಶಿಸ್ತು, ಒಟ್ಟುಗೂಡಿ ಮತ್ತಷ್ಟು ಸೊಗಸು ತುಂಬಿದೆ. ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯಗಳು ನಿಮ್ಮಿಂದ ಹೆಚ್ಚು ಸಾಗಲಿ ಎಂದು ತಿಳಿಸಿದರು.
ಬೈರವಿ ಗೌಡತಿಯರ ಬಳಗದ ಅಧ್ಯಕ್ಷೆ ರೇವತಿ ಕೃಷ್ಣಪ್ಪ, ಗೌರವಾಧ್ಯಕ್ಷೆ ರಾಧಾ ಲಂಕೇಗೌಡ, ನಿರ್ದೇಶಕರಾದ ಡಾ.ಹೇಮಾ ನಂದೀಶ್, ಕೋಮಲಾ ವೆಂಕಟೇಶ. ಸುಶೀಲಾ ಬಸವರಾಜು, ನಗರಪಾಲಿಕೆ  ಮಾಜಿ ಸದಸ್ಯ ಲಕ್ಷ್ಮೀ ಕಿರಣ್,  ಆಯೋಜಕರಾದ ಪೂರ್ಣಿಮಾ, ಛಾಯಾ ಮಹೇಶ್, ಪದ್ಮಾ ಸುರೇಶ್, ಸುಮಿತ್ರಾ ರಮೇಶ್, ಪುಷ್ಪಾ, ಹೇಮಾಕಿರಣ್ ಇತರರು ಇದ್ದರು.
ಜಾನಪದ ಕಲಾವಿದೆ ಸುಮಾ ಪ್ರಶಾಂತ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ  ಮಡ್ಡೀಕೆರೆ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕದ ವೀರ ವನಿತೆಯರ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net