

ಬೆಂಗಳೂರು: ನೈಸ್ ರಸ್ತೆ ವಿಷಯದಲ್ಲಿ ಹಿರಿಯ ಶಾಸಕ, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ ಜಯಚಂದ್ರ ಮತ್ತೊಮ್ಮೆ ಗಂಭೀರ ದನಿ ಎತ್ತಿ ಸಲಹೆಯೊಂದನ್ನು ನೀಡಿದ್ದಾರೆ.
ಬೆಂಗಳೂರು ಮೈಸೂರು ಎಕ್ಸೃ್ಪ್ರೆಸ್ ಹೈವೇ ನಿರ್ಮಾಣ ಆಗಿರುವ ಹಿನ್ನೆಲೆಯಲ್ಲಿ ನೈಸ್ ರಸ್ತೆಯ ಅವಶ್ಯಕತೆಯಿಲ್ಲ ಹೀಗಾಗಿ ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ಟೇಕ್‌ಓವರ್ ಮಾಡಿಕೊಳ್ಳಬೇಕು ಎಂದು ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನೈಸ್ ಯೋಜನೆಗೆ ಸಂಬಂಧಿಸಿದಂತೆ ನಾನೇ 2016ರಲ್ಲಿ ಸದನ ಸಮಿತಿ ವರದಿ ಕೊಟ್ಟಿದ್ದೇನೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಹೆಚ್ಚ್ಚುವರಿ ಭೂಮಿಯನ್ನು ಹಿಂಪಡೆಯಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ, ಈಗಲೂ ನನ್ನದು ಅದೇ ಅಭಿಪ್ರಾಯ. ಸರ್ಕಾರ ಆ ಶಿಾರಸನ್ನು ಅನುಷ್ಠಾನ ಮಾಡಬೇಕೆಂಬುದೇ ನನ್ನ ಒತ್ತಾಯ ಎಂದರು.
ಈಗ ವರದಿ ಸರ್ಕಾರದ ಸ್ವತ್ತು. ನೈಸ್ ಮತ್ತು ಸರ್ಕಾರದ ನಡುವೆ 101 ಕೇಸ್ ಇದ್ದು, ಹೀಗಾಗಿ ಕಾನೂನು ಸಮಿತಿ ಮಾಡಿ ಪರಿಶೀಲಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಮನಿಲಾಂಡರಿಂಗ್ ಆಗಿದೆ ಎಂದೂ ಸಹ ವರದಿ ಕೊಡಲಾಗಿದೆ. ಸರ್ಕಾರ ಒಂದು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸದನ ಸಮಿತಿ ಮಾಡಿದಾಗ ಮಂತ್ರಿ ಅಧ್ಯಕ್ಷರಾಗಿದ್ದು, ಹೀಗಾಗಿ ವರದಿಗೆ ಮಹತ್ವವಿದೆ. 42 ಸಭೆ ಆಗಿದೆ. ವರದಿ ಅಂತಿಮಗೊಳಿಸಲು ಎಂಟು ಸಭೆ ನಡೆಸಲಾಗಿತ್ತು. ಒಡಂಬಡಿಕೆಯಲ್ಲಿ ಎಲ್ಲೆಲ್ಲಿ ಲೋಪವಾಗಿದೆ ಎಂದು ಉಲ್ಲೇಖಿಸಲಾಗಿದೆ. ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆಯಾಗಿದೆ ಎಂದು ವರದಿ ಮಾಡಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಮ್ಮ ದೆಹಲಿ ಪ್ರತಿನಿಧಿ ಜವಾಬ್ದಾರಿ ಕುರಿತು ವಿವರಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ, ರಾಜ್ಯ ಸರ್ಕಾರ ಎಷ್ಟು ವೆಚ್ಚ ಮಾಡಿದೆ? ಬಾಕಿ ಎಷ್ಟು ಬಿಡುಗಡೆ ಆಗಬೇಕು ಎಂಬಿತ್ಯಾದಿ ವಿಷಯದಲ್ಲಿ ನಿರಂತರ ಾಲೋಅಪ್ ಮಾಡುತ್ತೇವೆ. ದೆಹಲಿಯಲ್ಲಿ ಈಗಾಗಲೇ ಮೂರು ದಿನ ಸಭೆ ನಡೆಸಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ವಯ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ ಆದರೆ ಕಳೆದ ಏಳು ವರ್ಷಗಳಿಂದ ಕೇಂದ್ರ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ ಎಂದು ಜಯಚಂದ್ರ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ರಾಷ್ಟ್ರೀಯ ಯೋಜನೆಯಾಗಲಿ ಅಥವಾ ರಾಜ್ಯ ಸರ್ಕಾರದ ಯೋಜನೆಯೇ ಆಗಲಿ ಕೇಂದ್ರ ಸರ್ಕಾರ ಯಾವುದೇ ಮಾನದಂಡದಲ್ಲಿ ಗುರುತಿಸಲಿ ಕಗ್ಗಂಟಿಲ್ಲದೆ ಹಣ ಬಿಡುಗಡೆ ಮಾಡಲಿ ಎಂದು ಜಯಚಂದ್ರ ಅವರು ಒತ್ತಾಯಿಸಿದರು.