ಸಂಘದಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಲಿ

25sri-2
ಹಾಲಂದೂರು ಪಿಎಸಿಎಸ್‌ನ ನೂತನ ಕಟ್ಟಡ, ಸೂಪರ್ ಮಾರ್ಕೆಟ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷರು, ನಿರ್ದೇಶಕರನ್ನು ಸನ್ಮಾನಿಸಲಾಯಿತು. ಪ್ರಸನ್ನ, ಜಿ.ವಿ.ಮೋಹನ್, ಶಶಿಕಲಾ, ತಿಮ್ಮಪ್ಪ, ನಾಗೇಶ್, ರಾಜೇಶ್ ಇತರರಿದ್ದರು.
Published on

ಶೃಂಗೇರಿ: ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತತ್ವದಡಿ ಸಹಕಾರ ಸಂಘಗಳು ರೈತರ ಹಾಗೂ ಗ್ರಾಹಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿವೆ. ತಾಲೂಕಿನ ಎಲ್ಲ ಸಹಕಾರ ಸಂಘಗಳು ಮಾದರಿಯಾಗಿವೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮೆಣಸೆ ಗ್ರಾಪಂ ವ್ಯಾಪ್ತಿಯ ಹಾಲಂದೂರು ಪಿಎಸಿಎಸ್‌ನ ನೂತನ ಕಟ್ಟಡ ಮತ್ತು ಸೂಪರ್ ಮಾರ್ಕೆಟ್ ಉದ್ಘಾಟಿಸಿ ಮಾತನಾಡಿದರು.
ಸಂಘವು 1921ರಲ್ಲಿ ಪ್ರಾರಂಭಗೊಂಡು ಪ್ರಸ್ತುತ 1704 ಷೇರುದಾರರನ್ನು ಹೊಂದಿದೆ. ಆರು ಸಾವಿರ ರೈತರಿಗೆ ರಸಗೊಬ್ಬರ, ಕೃಷಿ ಉಪಕರಣ, ಪಡಿತರ ವ್ಯವಹಾರ, ಬೆಳೆಗಳ ದಾಸ್ತಾನು ಜತೆಗೆ ಸಾಲ ಸೌಲಭ್ಯ ನೀಡಿ ಪ್ರಗತಿ ಪಥದತ್ತ ಹೆಜ್ಜೆ ಹಾಕುತ್ತಿದೆ. ಭವಿಷ್ಯತ್ತಿನಲ್ಲಿ ಸಂಘವು ರೈತರ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಪ್ರೋತ್ಸಾಹ ನೀಡಿ ನೆಮ್ಮದಿಯ ವಾತಾವರಣ ನಿರ್ಮಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಹಾಲಂದೂರು ಪಿಎಸಿಎಸ್ ಅಧ್ಯಕ್ಷ ಚಂದ್ರಶೇಖರ್ ಮೇಗಳಬೈಲು ಮಾತನಾಡಿ, ಸಂಘದ ನೂತನ ಕಟ್ಟಡ ಸರ್ವರ ಸಹಕಾರದಿಂದ ನಿರ್ಮಾಣವಾಗಿದೆ. ಗ್ರಾಮೀಣ ಜನರಿಗೆ ಒಂದೇ ಕಡೆ ಮನೆ ಕಟ್ಟಡ ಸಾಮಗ್ರಿ ಸಿಗುವಂತೆ ಸೂಪರ್ ಮಾರ್ಕೆಟ್ ಆರಂಭಿಸಲಾಗಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಸಾಮಗ್ರಿ ನೀಡುವ ಜತೆಗೆ ರೈತರ ಹಿತಾಸಕ್ತಿಗಾಗಿ ಸಂಘವು ನಿರಂತರ ಪ್ರಾಮಾಣಿಕ ಸೇವೆ ನೀಡಲಿದೆ.
ಸಂಘದ ಹಾಲಿ ನಿರ್ದೇಶಕರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಎಂ.ಆರ್.ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ತೆಕ್ಕೂರು ಪಿಎಸಿಎಸ್ ಅಧ್ಯಕ್ಷ ಕೊಡ್ತಲ್ ರಮೇಶ್ ಭಟ್, ನಿರ್ದೇಶಕರಾದ ನವೀನ್ ಕಲ್ಕಟ್ಟೆ, ಸಂಧ್ಯಾ ಮರಿಯಪ್ಪ, ರಮೇಶ್, ನಟರಾಜ್,ನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net