

ಕೋಲಾರ: ಸಹಕಾರಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ಎಲ್ಲ ಸಹಕಾರಿಗಳ ಮೇಲೆ ಇದ್ದಾಗ ಮಾತ್ರವೇ ಸಹಕಾರಿ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ ಎಂದು ಕೋಲಾರ & ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯ ಅಧ್ಯೆ ವಹಿಸಿ ಮಾತನಾಡಿ, ಕೇವಲ ನಾವು ಸಹಕಾರಿ ಕ್ಷೇತ್ರದ ಮುಖಂಡರು ಎನಿಸಿಕೊಂಡು ಎಲ್ಲ ರೀತಿಯ ಅಧಿಕಾರ ಪಡೆಯಲು ಹಂಬಲ ಮಾಡತ್ತೇವೆ. ಆದರೆ ಸಹಕಾರಿ ವ್ಯವಸ್ಥೆ ಬಲಪಡಿಸುವಾಗ ವಾಣಿಜ್ಯ ಬ್ಯಾಂಕ್ ಮೊರೆ ಹೋಗುತ್ತೇವೆ. ಎಲ್ಲ ರೀತಿಯ ಸಹಕಾರ ಕೊಟ್ಟರು ಮುಖಂಡರು ಮಾತ್ರ ವಾಣಿಜ್ಯ ಬ್ಯಾಂಕ್ಗಳಲ್ಲಿ ಖಾತೆ ನಿರ್ವಹಣೆ ಮಾಡುತ್ತೇವೆ ಆದರೆ ಅಧಿಕಾರ ಹಾಗೂ ಸಾಲಕ್ಕೆ ಮಾತ್ರ ಸಹಕಾರಿ ಬ್ಯಾಂಕ್ ಮೊರೆ ಹೋಗುತ್ತೇವೆ. ವ್ಯವಹಾರಕ್ಕೆ ವಾಣಿಜ್ಯ ಬ್ಯಾಂಕ್ ಅನ್ನೋ ಮನೋಭಾವ ಮುಖಂಡರಲ್ಲಿ ಹೋದಾಗ ಮಾತ್ರ ಸಹಕಾರಿ ಬ್ಯಾಂಕ್ಗಳು ಉಳಿಯಲು ಸಾಧ್ಯ ಎಂದು ಹೇಳಿದರು.
ಈ ಬ್ಯಾಂಕ್ನಲ್ಲಿ ನಾನು ಅಧ್ಯನಾಗಿ ಬಹಳಷ್ಟು ನೋವು ಹಾಗೂ ಆರೋಪಗಳನ್ನು ಹೊತ್ತಿದ್ದೇನೆ. ಎಷ್ಟೇ ನೋವು, ಸಂಕಟ ಇದ್ದರೂ ಎಷ್ಟೇ ಅವಮಾನ ಮಾಡಿದರೂ ಬ್ಯಾಂಕ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಡಿಸಿಸಿ ಬ್ಯಾಂಕ್ ಸಹಕಾರಿ ಬ್ಯಾಂಕ್ ನನ್ನ ಒಬ್ಬನಿಂದಲೇ ಮುನ್ನಡೆಸಲು ಸಾಧ್ಯವಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಗಳು ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ಕೊಟ್ಟು ಎಲ್ಲ ರೀತಿಯ ಸಾಲಗಳನ್ನು ವಸೂಲಿ ಮಾಡಿ ಬ್ಯಾಂಕ್ ಗೆ ಪಾವತಿ ಮಾಡಿದಾಗ ಮಾತ್ರ ಬ್ಯಾಂಕ್ ಉಳಿಯುವ ಜತೆಗೆ ಸಹಕಾರಿ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ ಎಂದರು
ಬ್ಯಾಂಕ್ನಲ್ಲಿ ಹಣಕಾಸಿನ ಸಂಸ್ಥೆಗಳನ್ನು ನಿರ್ವಹಿಸುವುದು ಬಹಳ ಕಷ್ಟ. ಬ್ಯಾಂಕ್ಗೆ ಸಣ್ಣ ಲೋಪವಾದರೂ ಠೇವಣಿದಾರದರು ತಮ್ಮ ಹಣವನ್ನು ವಾಪಾಸ್ ಪಡೆದುಕೊಂಡು ಹೋಗುತ್ತಾರೆ. ಬ್ಯಾಂಕ್ ಬಗ್ಗೆ ನಮ್ಮ ಜತೆಗೆ ಇದ್ದವರೆ ತೇಜೋವಧೆ ಮಾಡಲು ಮುಂದಾಗುತ್ತಾರೆ. ಬ್ಯಾಂಕ್ ಬಡವರ ಸೇವೆಗಾಗಿ ಇದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ನಾವು ಎಲ್ಲರೂ ಜವಾಬ್ದಾರಿ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಗೋವಿಂದಗೌಡ ಹೇಳಿದರು.
ನಿರ್ದೇಶಕರಾದ ಕೆ.ಗುಡಿಯಪ್ಪ, ಕೆ.ಎಚ್.ಚನ್ನರಾಯಪ್ಪ, ಗೋವಿಂದರಾಜು, ಬಿವಿ ವೆಂಕಟರೆಡ್ಡಿ, ಎನ್.ನಾಗರೆಡ್ಡಿ, ಎಸ್.ವಿ.ನಾಗರಾಜ್, ಎಚ್.ಎಂ.ಮಂಜುನಾಥರೆಡ್ಡಿ, ಸಿ.ಕೆ.ವೇದ, ಸುಧಾಕರ್, ಇಲಿಯಾಸ್ ಖಾನ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಇದ್ದರು.
90 ಕೋಟಿ ರೂ. ಬಡ್ಡಿ ಬಾಕಿ : ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ನಲ್ಲಿ ಅಧ್ಯಕ್ಷನಾಗಿ ನಾನು ಹತ್ತು ವರ್ಷಗಳ ಕಾಲ ನಿರ್ವಹಿಸಿದ್ದು, ಇದುವರೆಗೂ ಬ್ಯಾಂಕ್ ಪರಿಸ್ಥಿತಿ ನನಗೆ ಸಮಾಧಾನ ತರಲಿಲ್ಲ. ಕಾರಣ ಕೇಂದ್ರ ಸರ್ಕಾರದ ಬಡ್ಡಿಯ ಸಹಾಯ ಧನ 90 ಕೋಟಿ ರೂಪಾಯಿ ಬಾಕಿ ಇದೆ. ಅ ಹಣ ಬ್ಯಾಂಕ್ಗೆ ಬಂದಾಗ ಮಾತ್ರವೇ ಸಹಕಾರಿ ಬ್ಯಾಂಕ್ ಸುಸ್ಥಿಗೆ ಬರಲು ಸಾಧ್ಯ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.